Saturday, 12th October 2024

ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಶವವಾಗಿ ಪತ್ತೆ

ಹೈದರಾಬಾದ್: ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಬಂಜಾರಾ ಹಿಲ್ಸ್‌ನ ಅಪಾರ್ಟ್‌ ಮೆಂಟ್‌ ನಲ್ಲಿ ಪ್ರತ್ಯುಷಾ ಶವವಾಗಿ ಪತ್ತೆಯಾಗಿದ್ದಾರೆ.

ಪ್ರತ್ಯುಷಾ ಹಬೆಯ ಜೊತೆಗೆ ಕಾರ್ಬನ್ ಮಾನಾಕ್ಸೈಡ್ ಸೇವಿಸಿದ್ದು ಆಕೆಯ ಸಾವಿಗೆ ಕಾರಣವಾಗಬಹುದು ಎಂದು ಶಂಕಿಸಲಾಗಿದೆ.

ಪ್ರತ್ಯುಷಾ ತನ್ನ ಬಾತ್ ರೂಂನಲ್ಲಿ ಕಲ್ಲಿದ್ದಲು ಮತ್ತು ಉಗಿ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ವರದಿಗಳಿವೆ. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ಆಕೆಯ ಕುಟುಂಬ ಮತ್ತು ಸ್ನೇಹಿತರಿಗೆ ಮಾಹಿತಿ ನೀಡಲಾಗಿದೆ. ಪ್ರತ್ಯೂಷಾ ಖಿನ್ನತೆ ಯಿಂದ ಬಳಲುತ್ತಿದ್ದಳು ಎಂದು ಶಂಕಿಸಲಾಗಿದೆ.

ಪ್ರತ್ಯುಷಾ ಅಮೆರಿಕದಲ್ಲಿ ಫ್ಯಾಷನ್ ಡಿಸೈನಿಂಗ್ ಓದಿದ್ದು, ಹೈದರಾಬಾದ್‌ ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಟಾಲಿವುಡ್‌ ನಲ್ಲಿ ಹಲವಾರು ಜನಪ್ರಿಯ ಸೆಲೆಬ್ರಿಟಿಗಳಿಗೆ ಮತ್ತು ಬಾಲಿವುಡ್‌ ನ ಕೆಲವರಿಗೆ ಫ್ಯಾಷನ್ ಡಿಸೈನ್ ಮಾಡಿದ್ದಾರೆ.