Saturday, 14th December 2024

16 ವರ್ಷಗಳ ದಾಂಪತ್ಯ ಜೀವನ ಸಂಭ್ರಮದಲ್ಲಿ ಅಭಿಷೇಕ್​ ಬಚ್ಚನ್​ – ಐಶ್ವರ್ಯಾ ರೈ

ಮುಂಬೈ: ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ತಮ್ಮ ದಾಂಪತ್ಯ ಜೀವನದಲ್ಲಿ 16 ವರ್ಷ ಪೂರೈಸಿದ್ದಾರೆ.

ದಂಪತಿ ಸುಂದರ ಸೆಲ್ಫಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಬ್ಯೂಟಿಫುಲ್​ ಜೋಡಿ ಬಿಳಿ ಬಣ್ಣದ ಡ್ರೆಸ್​ನಲ್ಲಿ ಮಿಲಿಯನ್​ ಡಾಲರ್​ ಸ್ಮೈಲ್​ ಚೆಲ್ಲಿದ್ದಾರೆ. ಫೋಟೋಗೆ ‘ಸ್ವೀಟ್​ 16’ ಎಂಬುದಾಗಿ ಕ್ಯಾಪ್ಶನ್​ ಬರೆದಿದ್ದಾರೆ.

ದಂಪತಿಯ ವಿವಾಹ ವಾರ್ಷಿಕೋತ್ಸವದ ಪೋಸ್ಟ್​ ನೆಟ್ಟಿಗರಿಂದ 5 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳು ಮತ್ತು ಕಮೆಂಟ್​ಗಳನ್ನು ಗಳಿಸಿದೆ.

‘ಅಭಿನಂದನೆಗಳು ಮತ್ತು ಶುಭಾಶಯಗಳು’ ಎಂಬುದಾಗಿ ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ‘ಸುಂದರ ಜೋಡಿ’ ಎಂಬುದಾಗಿ ಮತ್ತೊಬ್ಬರು ಬರೆದಿದ್ದಾರೆ. 2007 ರಲ್ಲಿ ಮುಂಬೈನಲ್ಲಿರುವ ಅಮಿತಾಭ್​ ಬಚ್ಚನ್​ ಅವರ ಬಂಗಲೆಯಾದ ಪ್ರತೀಕ್ಷಾದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ ವಿವಾಹ ಸಮಾರಂಭ ನಡೆಯಿತು. ವಿವಾಹವಾದ ನಾಲ್ಕು ವರ್ಷಗಳ ನಂತರ ದಂಪತಿ 2011ರ ನವೆಂಬರ್​ 16 ರಂದು ಆರಾಧ್ಯಳಿಗೆ ಪೋಷಕರಾದರು.

ಮಗಳ ಜೊತೆಗೂ ದಂಪತಿ ಹೆಚ್ಚು ಟೈಮ್​ ಸ್ಪೆಂಡ್​ ಮಾಡುತ್ತಾರೆ. ಮಗಳು ಆರಾಧ್ಯ ಬಚ್ಚನ್​ ಪ್ರಸ್ತುತ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್​ನ್ಯಾಶನಲ್​ ಸ್ಕೂಲ್​ನಲ್ಲಿ ಆರನೇ ತರಗತಿ ಓದುತ್ತಿದ್ದಾಳೆ.

ಇನ್ನೂ ಐಶ್ವರ್ಯಾ ರೈ ಕೆಲಸದ ವಿಚಾರವಾಗಿ ಹೇಳುವುದಾದರೆ, ಪೊನ್ನಿಯನ್​ ಸೆಲ್ವಂ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚೋಳ ಸಾಮ್ರಾಜ್ಯಕ್ಕಾಗಿ ನಡೆದ ಹೋರಾಟ, ರಕ್ತಚರಿತ್ರೆಯನ್ನು ಕಟ್ಟಿಕೊಡುವ ಪೊನ್ನಿಯನ್​ ಸೆಲ್ವಂ ಚಿತ್ರಕ್ಕೆ ತ್ರಿಶಾ ಜೊತೆಗೆ ಐಶ್ವರ್ಯಾ ನಾಯಕಿ ಯಾಗಿದ್ದಾರೆ. ಈ ಚಿತ್ರದ ಮೊದಲ ಭಾಗ ವಿಶ್ವದಾದ್ಯಂತ 480 ಕೋಟಿ ರೂಪಾಯಿಗಳನ್ನು ಗಳಿಸಿತ್ತು.