Sunday, 6th October 2024

ಕೋವಿಡ್​ ಲಸಿಕೆ ಹಾಕಿಸಿಕೊಂಡ ನಟ ಕಮಲ್ ಹಾಸನ್​

ಚೆನ್ನೈ : ದಕ್ಷಿಣ ಭಾರತದ ಬಹುಭಾಷಾ ನಟ ಹಾಗೂ ಮಕ್ಕಳ್​ ನೀದಿ ಮೈಯಮ್​ ಪಕ್ಷದ (ಎಂಎನ್​ಎಂ) ಸಂಸ್ಥಾಪಕ ಕಮಲ್ ಹಾಸನ್​ ಮಂಗಳವಾರ ಚೆನ್ನೈನಲ್ಲಿ ಕೋವಿಡ್​ ಲಸಿಕೆಯ ಮೊದಲ ಡೋಸ್​ ಹಾಕಿಸಿಕೊಂಡರು.

ಕಮಲ್ ಹಾಸನ್ ಅವರು ತಮ್ಮ ಮೊದಲ ಡೋಸ್ ಅನ್ನು COVID-19 ಲಸಿಕೆಯನ್ನು ತೆಗೆದುಕೊಂಡಿರುವುದಾಗಿ ಮತ್ತು ಲಸಿಕೆ ಪಡೆಯಬೇಕೆಂದು ಟ್ವೀಟ್ ಮೂಲಕ ಪ್ರೋತ್ಸಾಹ ನೀಡಿದರು.

ಶ್ರೀ ರಾಮಚಂದ್ರ ಆಸ್ಪತ್ರೆಯಲ್ಲಿ ಕೊರೋನವೈರಸ್ ಗೆ ಲಸಿಕೆ ಹಾಕಿಸಿದ್ದೇನೆ. ಇತರರ ಬಗ್ಗೆಯೂ ಕಾಳಜಿ ವಹಿಸುವವರು ಅದನ್ನು ಹಾಕಿಸಿಕೊಳ್ಳಬೇಕು. ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ ಹಾಕಲು ರೆಡಿಯಾಗುತ್ತೇನೆ ಎಂದರು.

ಮುಂಬರಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಮಲ್ ಹಾಸನ್ ಘೋಷಿಸಿದ್ದಾರೆ.