ಚೆನ್ನೈ: ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ (Actor Rajinikanth) ನಾಳೆ (ಡಿ. 12) 75ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಚಿತ್ರರಂಗದಲ್ಲಿ ಸಕೀಯರಾಗಿರುವ ಅವರು ಅದೇ ಚಾರ್ಮ್ ಇಂದಿಗೂ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ʼವೆಟ್ಟೈಯನ್ʼ (Vettaiyan) ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ, ರಜನಿಕಾಂತ್ ಅಭಿನಯ ಹಲವರ ಗಮನ ಸೆಳೆದಿತ್ತು. ಇದೀಗ ಅವರು ವಿವಿಧ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದು, ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಚಿತ್ರಗಳ ಮಹತ್ವದ ಅಪ್‌ಡೇಟ್ ಹೊರ ಬೀಳುವ ಸಾಧ್ಯತೆ ಇದೆ. ಇದಕ್ಕಾಗಿ ಅವರ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಕಾಲಿವುಡ್‌ನ ಪ್ರತಿಭಾನ್ವಿತ ನಿರ್ದೇಶಕ, ವಿಭಿನ್ನ ಚಿತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಲೋಕೇಶ್ ಕನಕರಾಜನ್ ಅವರ ʼಕೂಲಿʼ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದು, ಚಿತ್ರೀಕರಣ ಈಗಾಗಲೇ ಅಂತಿಮ ಹಂತದಲ್ಲಿದೆ. ಈ ಮಧ್ಯೆ ರಜನಿಕಾಂತ್ ಅವರ ಫ್ಯಾನ್ಸ್‌ಗೆ ಮತ್ತೊಂಡು ಗುಡ್‌ನ್ಯೂಸ್ ಹೊರಬಿದ್ದಿದೆ. ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಣಿರತ್ನಂ ಅವರ ಮುಂದಿನ ಚಿತ್ರವನ್ನು ತಲೈವಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
Superstar @rajinikanth sir as #Deva in #Coolie 💥💥
— Lokesh Kanagaraj (@Dir_Lokesh) September 2, 2024
Thank you so much for this @rajinikanth sir 🤗❤️
It’s going to be a blast 🔥🔥@anirudhofficial @anbariv @girishganges @philoedit @Dir_Chandhru @sunpictures @PraveenRaja_Off pic.twitter.com/TJxsgGdFfI
34 ವರ್ಷಗಳ ಬಳಿಕ ಒಂದಾಗುತ್ತಿದೆ ಹಿಟ್ ಜೋಡಿ
ಹೌದು, ಮಣಿರತ್ನಂ ಆ್ಯಕ್ಷನ್ ಕಟ್ ಹೇಳುತ್ತಿರುವ ಮುಂಬರುವ ಚಿತ್ರದಲ್ಲಿ ರಜನಿಕಾಂತ್ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ನಾಳೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಇದು ನಿಜವೇ ಆಗಿದ್ದರೆ ಸುಮಾರು 3 ದಶಕಗಳ ಬಳಿಕ ಈ ಹಿಟ್ ಜೋಡಿ ಒಂದಾಗಲಿದೆ. 1991ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ ʼದಳಪತಿʼಯಲ್ಲಿ ರಜನಿಕಾಂತ್ ಮತ್ತು ಮಮ್ಮುಟ್ಟಿ ನಟಿಸಿದ್ದರು. ಗ್ಯಾಂಗ್‌ಸ್ಟರ್ ಡ್ರಾಮಾ ʼದಳಪತಿʼ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಮಹಾಭಾರತದ ಕರ್ಣ ಮತ್ತು ದುರ್ಯೋಧನರ ಗೆಳೆತನದ ಆಧಾರದಲ್ಲಿ ಮಣಿರತ್ನಂ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಈ ಚಿತ್ರದಲ್ಲಿನ ರಜನಿಕಾಂತ್ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಅದಾದ ಬಳಿಕ ಈ ಇಬ್ಬರು ದಿಗ್ಗಜರು ತೆರೆ ಮೇಲೆ ಒಂದಾಗಿರಲಿಲ್ಲ. ಇದೀಗ ಬರೋಬ್ಬರಿ 34 ವರ್ಷಗಳ ಮಣಿರತ್ನಂ ಮತ್ತು ರಜನಿಕಾಂತ್ ಕಾಂಬಿನೇಷನ್‌ನ ಚಿತ್ರ ಬರಲಿದ್ದು, ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ.
ಸದ್ಯ ರಜನಿಕಾಂತ್ ʼಕೂಲಿʼ ಸಿನಿಮಾದಲ್ಲಿ ನಿರತರಾಗಿದ್ದರೆ ಇತ್ತ ಮಣಿರತ್ನಂ ಕಮಲ್ ಹಾಸನ್ ಅವರ ʼಥಗ್ ಲೈಫ್ʼ ಚಿತ್ರದ ಶೂಟಿಂಗ್ ನಡೆಸುತ್ತಿದ್ದಾರೆ. ಈ ಎರಡೂ ಚಿತ್ರಗಳು ಪೂರ್ಣಗೊಂಡ ಬಳಿಕ ಇವರಿಬ್ಬರ ಕಾಂಬಿನೇಷನ್‌ನ ಚಿತ್ರದ ಕೆಲಸ ಆರಂಭವಾಗಲಿದೆ. ʼಕೂಲಿʼ 2025ರ ಬೇಸಗೆ ವೇಳೆಗೆ ತೆರೆಗೆ ಬರಲಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೂ ನಟಿಸುತ್ತಿದ್ದಾರೆ. ಜತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಸಿನಿಮಾ ಮೂಲಕ ಕಾಲಿವುಡ್‌ಗೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಅದಿಕೃತ ಘೋಷನೆ ಇನ್ನಷ್ಟೇ ಹೊರ ಬರಬೇಕಿದೆ. ಇನ್ನು ಮಣಿರತ್ನಂ ಆಕ್ಷನ್ ಕಟ್ ಹೇಳುತ್ತಿರುವ ʼಥಗ್‌ಲೈಫ್ʼ 2025ರ ಜೂನ್ 5ರಂದು ರಿಲೀಸ್ ಆಗಲಿದೆ.
ಈ ಸುದ್ದಿಯನ್ನೂ ಓದಿ: Vettaiyan Box Office: ಬಾಕ್ಸ್ ಆಫೀಸ್‌ನಲ್ಲಿ ಮತ್ತೊಮ್ಮೆ ರಜನಿಕಾಂತ್ ಮ್ಯಾಜಿಕ್; 4 ದಿನಗಳಲ್ಲಿ 200 ಕೋಟಿ ರೂ. ಕ್ಲಬ್ ಸೇರಿದ ʼವೆಟ್ಟೈಯಾನ್ʼ