Thursday, 3rd October 2024

Aditi Rao Hydari : ದಕ್ಷಿಣ ಭಾರತದ ಸಂಪ್ರದಾಯದಂತೆ ವಿವಾಹವಾದ ಅದಿತಿ ಹೈದರಿ- ಸಿದ್ದಾರ್ಥ್‌

Aditi Rao Hydari

ಬೆಂಗಳೂರು: ಬಹುಭಾಷಾ ನಟಿ ಅದಿತಿ ರಾವ್ ಹೈದರಿ (Aditi Rao Hydari) ಮತ್ತು ಸಿದ್ಧಾರ್ಥ್ ಜೋಡಿ ದಕ್ಷಿಣ ಭಾರತದ ಸಂಪ್ರದಾಯದ ಪ್ರಕಾರ ಸದ್ದಿಲ್ಲದೇ ವಿವಾಹವಾಗಿದ್ದಾರೆ. ದಂಪತಿ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಧು ಮತ್ತು ವರ ಇಬ್ಬರೂ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದು ಸಾಂಪ್ರದಾಯಿಕ ಉಡುಪುಗಳೊಂದಿಗೆ ಕಾಣಿಸಿಕೊಂಡಿದ್ದಾರೆ.

ಇದು ಐತಿಹಾಸಿಕ ದೇವಾಲಯವೊಂದರಲ್ಲಿ ನಡೆದ ವಿವಾಹವಾಗಿತ್ತು. ಅದಿತಿ ಫೋಟೋಗಳನ್ನು ಸುಂದರವಾದ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, “ನೀವು ನನ್ನ ಸೂರ್ಯ, ನನ್ನ ಚಂದ್ರ ಮತ್ತು ನನ್ನ ನಕ್ಷತ್ರಗಳು. ಶಾಶ್ವತವಾಗಿ ಜತೆಯಾಗುತ್ತಿದ್ದೇವೆ. ನಗುವಿಗೆ ಶಾಶ್ವತ ಪ್ರೀತಿ, ಬೆಳಕು ಮೂಡಿದೆ” ಎಂದು ಬರೆದುಕೊಂಡಿದ್ದಾರೆ.

ಅದಿತಿ ಚಿನ್ನದ ಝರಿ ಹೊಂದಿರುವ ಅದ್ಭುತ ಟಿಶ್ಯೂ ಆರ್ಗಾಂಜಾ ಲೆಹೆಂಗಾ ಧರಿಸಿದ್ದರು. ಅವಳು ತನ್ನ ಲೆಹೆಂಗಾಕ್ಕೆ ಸರಿಹೊಂದುವ ಚಿನ್ನದ ಬಣ್ಣದ ರವಿಕೆ ತೊಟ್ಟಿದ್ದರು. ಅದರಲ್ಲಿ ಕಸೂತಿ ಮಾಡಿದ ಬಾರ್ಡರ್ ಇತ್ತು ಅದಿತಿ ಚಿನ್ನ ಮತ್ತು ಮಾಣಿಕ್ಯ ಸಾಂಪ್ರದಾಯಿಕ ಚಿನ್ನದ ಆಭರಣಗಳನ್ನು ಧರಿಸಿದ್ದರು. ಸಿದ್ದಾರ್ಥ ಸರಳ ಕುರ್ತಾ ಧರಿಸಿದ್ದು ಸಾಂಪ್ರದಾಯಿಕ ಪಂಚೆಯನ್ನು ಹಾಕಿಕೊಂಡಿದ್ದರು.

ವಿವಾಹ ಮುಂಜಾನೆ ವೇಳೆ ನಡೆದಿದೆ. ಸೆಲೆಬ್ರಿಟಿ ಛಾಯಾಗ್ರಾಹಕ ಜೋಸೆಫ್ ರಾಧಿಕಾ ಕ್ಲಿಕ್ ಮಾಡಿದ ಫೋಟೋಗಳಲ್ಲಿ ಮುಂಜಾನೆ ಸೂರ್ಯನ ಹಿನ್ನೆಲೆಯಿದೆ.

ಅದಿತಿ-ಸಿದ್ಧಾರ್ಥ್ ಲವ್ ಸ್ಟೋರಿ

ಅದಿತಿ ಮತ್ತು ಸಿದ್ಧಾರ್ಥ್‌ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿಕೊಂಡಿದ್ದರು. ಸೆಪ್ಟೆಂಬರ್ 16ರ ಸೋಮವಾರ ಸದ್ದಿಲ್ಲದೇ ವಿವಾಹವಾಗಿ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ ಸಿದ್ಧಾರ್ಥ್ ತನಗೆ ಮದುವೆಯ ಪ್ರಸ್ತಾಪ ಮಾಡಿದ ಕ್ಷಣವನ್ನು ವಿವರಿಸಿದ್ದರು.

ಇದನ್ನೂ ಓದಿ : Emmys 2024: 76ನೇ ಎಮ್ಮಿ ಅವಾರ್ಡ್ಸ್‌ ಘೋಷಣೆ; ಇಲ್ಲಿದೆ ವಿಜೇತರ ಪಟ್ಟಿ

ಇಬ್ಬರೂ 2021 ರಲ್ಲಿ ತಮ್ಮ ತೆಲುಗು ಚಿತ್ರ ಮಹಾ ಸಮುದ್ರಂ ಸೆಟ್‌ನಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದರು. ಸಿದ್ಧಾರ್ಥ್ ಆ ವೇಳೆ “ಹಲೋ, ಸುಂದರ ಹುಡುಗಿ” ಎಂದು ಹೇಳಿದ್ದನ್ನು ಅದಿತಿ ನೆನಪಿಸಿಕೊಂಡಿದ್ದಾರೆ.