Saturday, 14th December 2024

ನಿರ್ಮಾಪಕ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸುದೀಪ್

ಬೆಂಗಳೂರು: ನಟ ಸುದೀಪ್ ಅವರು ನಿರ್ಮಾಪಕ ಎಂ‌.ಎನ್‌ ಕುಮಾರ್ ವಿರುದ್ಧ ಕಾನೂನು ಹೋರಾಟಕ್ಕೆ‌ ಮುಂದಾಗಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ಕೆಲ ದಿನಗಳ‌ ಹಿಂದೆ‌ ನಿರ್ಮಾಪಕ ಎಂ.ಎನ್ ಕುಮಾರ್ ಆರೋಪ ಮಾಡಿದ್ದರು.

ನಟ ಸುದೀಪ್ ಅವರು ಚಿತ್ರದಲ್ಲಿ ನಟಿಸುವುದಾಗಿ ಹೇಳಿ ನನ್ನಿಂದ ಏಳು ವರ್ಷಗಳ ಹಿಂದೆ ಹಣ ಪಡೆದುಕೊಂಡು‌ ಹೇಳಿದಂತೆ ನಮ್ಮ ಚಿತ್ರಗಳನ್ನು ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದರು.

ಕುಮಾರ್ ಹಾಗೂ ಎಂಎನ್ ಸುರೇಶ್ ಅವರಿಗೆ ತಮ್ಮ ವಕೀಲರ ಮೂಲಕ ಬೇಷರತ್ ಕ್ಷಮೆಯಾಚಿಸಲು ಮತ್ತು ಮಾನಹಾನಿಕರ ಹೇಳಿಕೆಗಳು, ಮಾನಸಿಕ ಸಂಕಟಕ್ಕೆ ಕಾರಣ ವಾದ ಆರೋಪಗಳಿಗಾಗಿ 10 ಕೋಟಿ ರೂ. ಕೋರಿ ಲೀಗಲ್ ನೋಟಿಸ್ ನೀಡಿದ್ದಾರೆ.

ನಿರ್ಮಾಪಕರ ಆರೋಪದ ಬಳಿಕ ಟ್ವೀಟ್​ ಮೂಲಕ ಸುದೀಪ್​ ”ಒಳ್ಳೆಯತನವು ಕುಶಲತೆ ಮತ್ತು ದುರುಪಯೋಗದ ಸಾಧನವಲ್ಲ. ಆದರೆ ಅದು ನಿಜವಾಗಿದ್ದಾಗ ಪ್ರಕಾಶಮಾನವಾಗಿ ಹೊಳೆಯುತ್ತದೆ. ದುರಹಂಕಾರವು ಅದರ ಪ್ರಕಾಶವನ್ನು ಹಾಳುಮಾಡಲು ನಾನು ಬಿಡುವುದಿಲ್ಲ. ವಿನಮ್ರರಾಗಿರಿ ಮತ್ತು ಸತ್ಯವಂತರಾಗಿರಿ” ಎಂಬಂರ್ಥ ನೀಡುವ ಮಾತನ್ನು ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ನಟ ನಿರ್ಮಾಪಕ ರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.