Friday, 13th December 2024

Actress Oviya: ಯಶ್‌ ನಾಯಕಿಯ ಖಾಸಗಿ ವಿಡಿಯೊ ಲೀಕ್‌; ಎಂಜಾಯ್‌ ಮಾಡಿ ಎಂದ ನಟಿ

Actress Oviya

ಚೆನ್ನೈ: ಬಹುಭಾಷಾ ನಟಿ, ತಮಿಳು ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿ, ರಾಕಿಂಗ್‌ ಸ್ಟಾರ್‌ ಯಶ್‌ (Yash) ಜತೆ ‘ಕಿರಾತಕ’ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದ ಒವಿಯಾ (Actress Oviya) ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಂದಲೇ ಅಗಾಗ ಸುದ್ದಿಯಾಗುತ್ತಲೇ ಇರುವ ಅವರದ್ದೆನ್ನಲಾದ ಖಾಸಗಿ ವಿಡಿಯೊ ಇದೀಗ ವೈರಲ್‌ ಆಗಿದೆ.

ಒವಿಯಾ ಗೆಳೆಯನ ಜತೆ ಇದ್ದರು ಎನ್ನಲಾದ ಖಾಸಗಿ ವಿಡಿಯೊ ಇದಾಗಿದೆ. 17 ಸೆಕೆಂಡ್‌ನ ಈ ವಿಡಿಯೊ ಇದೀಗ ಸಖತ್‌ ವೈರಲ್‌ ಆಗಿ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ತಿರುಚಿದ ವಿಡಿಯೊ?

ಇದು ಫೇಕ್‌ ವಿಡಿಯೊ ಎಂದೂ ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದು ತಿರುಚಿದ ವಿಡಿಯೊ ಎಂದೇ ಅವರ ಅಭಿಮಾನಿಗಳು ವಾದಿಸುತ್ತಿದ್ದಾರೆ. ಈ ಬಗ್ಗೆ ಒವಿಯಾ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಕಮೆಂಟ್‌ ಮಾಡಿದವರಿಗೆ ಬೋಲ್ಡಾಗಿ ಉತ್ತರಿಸಿದ್ದು ಕೂಡ ಈಗ ಗಮನ ಸೆಳೆಯುತ್ತಿದೆ.

ಒವಿಯಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಯ್‌ ಮಾಡುವಂತೆ ಪೋಸ್‌ ಕೊಟ್ಟಿರುವ ಫೋಟೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯ ಕಮೆಂಟ್‌ ಮಾಡುತ್ತಿದ್ದಾರೆ. ಈ ವೈಕಿ ಒಬ್ಬಾತ, ʼʼಮೇಡಂ ನಿಮ್ಮ 17 ಸೆಕೆಂಡ್‌ನ ವೀಡಿಯೊ ವೈರಲ್‌ ಆಗಿದೆʼʼ ಎಂದು ಹೇಳಿದ್ದಾನೆ. ಇದಕ್ಕೆ ಒವಿಯಾ ಪ್ರತಿಕ್ರಿಯಿಸಿ ಬೋಲ್ಡಾಗಿ ʼʼಎಂಜಾಯ್‌ ಮಾಡಿʼʼ ಎಂದಿದ್ದಾರೆ. ಜತೆಗೆ ಇನ್ನೊಬ್ಬ ʼʼಪೂರ್ತಿ ವಿಡಿಯೊ ಯಾವಾಗ ಬರುತ್ತದೆ?ʼʼ ಎಂದು ಕಾಲೆಳೆದಿದ್ದಾನೆ. ಇದಕ್ಕೆ ನಟಿ ಉತ್ತರಿಸಿ, ʼʼಮುಂದಿನ ಸಲ ಬ್ರೋʼʼ ಎಂದು ಹೇಳಿದ್ದಾರೆ. ಇನ್ನೊಬ್ಬರ ಬಳಿ ಒವಿಯಾ ಅವರೇ ವಿಡಿಯೋ ಲಿಂಕ್ ಕೊಡಿ ಎಂದು ಕೇಳಿದ್ದಾರೆ. ಒಟ್ಟಿನಲ್ಲಿ ಅವರ ವಿಡಿಯೊದ ಜತೆಗೆ ಕಮೆಂಟ್‌ ಕೂಡ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ವಿಡಿಯೊ ಅಸಲಿಯೊ ನಕಲಿಯೊ ಎನ್ನುವ ಪ್ರಶ್ನೆಗೆ ಅವರೇ ಸ್ಪಷ್ಟನೆ ನೀಡಬೇಕಿದೆ. ಅವರ ಪ್ರತಿಕ್ರಿಯೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ವಿವಾದ ಇದೇ ಮೊದಲಲ್ಲ

ಕೆಲವು ತಿಂಳ ಹಿಂದೆ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಒವಿಯಾ ಉತ್ತರಿಸಿ, ʼʼಲೈಂಗಿಕ ಶಿಕ್ಷಣದಿಂದ ಏನು ಪ್ರಯೋಜನ? ಅದು ಪ್ರಾಕ್ಟಿಕಲ್‌ ಆಗಿರಲು ಯಾವುದಾದರೂ ಅವಕಾಶ ಬೇಕಲ್ಲವೇ? ಪ್ರಪಂಚದಲ್ಲಿ ಎಲ್ಲರಿಗೂ ಆಸೆಗಳಿರುತ್ತದೆ. ಆದರೆ ಎಲ್ಲರೂ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಎಲ್ಲರಿಗೂ ಫೀಲಿಂಗ್‌ ಇರುತ್ತದೆ, ಎಲ್ಲರಿಗೂ ಹಾರ್ಮೋನ್ಸ್‌ ಇರುತ್ತದೆ. ಅದೊಂದು ನೈಸರ್ಗಿಕ ಪ್ರಕ್ರಿಯೆ. ಆದ್ದರಿಂದ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ಅವಶ್ಯಕತೆ ಇದೆ. ಹಾಗೆ ಮಾಡಿದರೆ ಅತ್ಯಾಚಾರಗಳೂ ಕಡಿಮೆ ಆಗುತ್ತದೆʼʼ ಎಂದು ವಿವಾದ ಹುಟ್ಟುಹಾಕಿದ್ದರು.

ಅದಕ್ಕೂ ಮೊದಲು 2021 ಪ್ರಧಾನಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸಿದ್ದಾಗ ಓವಿಯಾ ಅವರು #GoBackModi ಎಂದು ಟ್ವೀಟ್ ಮಾಡಿದ್ದರು. ಆ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಶಾಲೆಗೆ ಹೋಗಿ ಟೈಮ್ ವೇಸ್ಟ್ ಮಾಡಿಕೊಂಡೆ ಎಂದು ಹೇಳಿಕೆ ನೀಡಿಯೂ ವಿವಾದಕ್ಕೆ ಕಾರಣವಾಗಿದ್ದರು.

ಕೇರಳ ಮೂಲದ ನಟಿ

ಒವಿಯಾ ಮೂಲತಃ ಕೇರಳದ ತ್ರಿಶೂರ್‌ನವರು. ಇವರ ಮೂಲ ಹೆಸರು ಹೆಲನ್‌ ನೆಲ್ಸನ್‌. 2007ರಲ್ಲಿ ತೆರೆಕಂಡ ʼಕಾಂಗರೂʼ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಓವಿಯಾ ನಟಿಸಿದ್ದಾರೆ. 2011ರಲ್ಲಿ ತೆರೆ ಕಂಡ ಸ್ಯಾಂಡಲ್‌ವುಡ್‌ನ ʼಕಿರಾತಕʼ ಚಿತ್ರದಲ್ಲಿ ಯಶ್‌ ಜೋಡಿಯಾಗಿ ನಟಿಸಿದ್ದರು. 2016ರಲ್ಲಿ ರಿಲೀಸ್‌ ಆದ ʼಮಿ. ಮೊಮ್ಮಗʼ ಕನ್ನಡ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Martin Movie Collection: ಮಾರ್ಟಿನ್ ಸಿನಿಮಾ ಮೂರು ದಿನದ ಗಳಿಕೆ ಇಷ್ಟು!