Monday, 16th September 2024

ಸಿಕಂದರ್ ಚಿತ್ರತಂಡಕ್ಕೆ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆ

ಮುಂಬೈ: ಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರತಂಡಕ್ಕೆ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಯಾಗಿದ್ದಾರೆ.

ಗಜಿನಿ (2008) ಮತ್ತು ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ (2014) ಚಿತ್ರಗಳಿಗೆ ಹೆಸರಾದ ಎಆರ್ ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರ ಮುಂದಿನ ವರ್ಷ ಈದ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಾಜಿದ್ ನಾಡಿಯಾದ್ವಾಲಾ ಬಂಡವಾಳ ಹೂಡಿದ್ದಾರೆ.

ಮುಂದಿನ ವರ್ಷ ಈದ್ ವೇಳೆಗೆ ಅವರ ಆನ್-ಸ್ಕ್ರೀನ್ ಜೋಡಿ ತೆರೆಮೇಲೆ ಮ್ಯಾಜಿಕ್ ಮಾಡಲಿದೆ. ಎಆರ್ ಮುರುಗದಾಸ್ ನಿರ್ದೇಶನದ ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದ ಸಿಕಂದರ್ 2025ರ ಈದ್ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದಿದೆ.

ಈ ಹಿಂದೆ ಸಂಗೀತ ನಿರ್ದೇಶಕ ಪ್ರೀತಮ್ ಈ ಯೋಜನೆಗೆ ಸೇರ್ಪಡೆಯಾಗಿದ್ದಾರೆ ಎಂದು ಘೋಷಿಸಲಾಗಿತ್ತು.

ರಶ್ಮಿಕಾ ಕೊನೆಯದಾಗಿ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿಕಂದರ್ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕ ಎಆರ್ ಮುರುಗದಾಸ್ ಮತ್ತು ನಟ ಸಲ್ಮಾನ್ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸಲ್ಮಾನ್ ನಟನೆಯ 2014 ರ ಜೈ ಹೋ ಚಿತ್ರದ ಕಥೆಯನ್ನು ಮುರುಗದಾಸ್ ಬರೆದಿದ್ದರು ಮತ್ತು ಇದು 2006 ರ ತೆಲುಗು ಚಿತ್ರ ಸ್ಟಾಲಿನ್ ಅನ್ನು ಆಧರಿಸಿದೆ. ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು.

Leave a Reply

Your email address will not be published. Required fields are marked *