Thursday, 12th December 2024

BBK 11: ಶಿಶಿರ್​ಗೆ ಮಂಡಿಯೂರಿ ಕೆಂಪು ಗುಲಾಬಿ ಕೊಟ್ಟ ಐಶ್ವರ್ಯಾ: ಏನೆಲ್ಲ ಮಾತನಾಡಿದ್ರು ಗೊತ್ತೇ?

Shishir and Aishwarya

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಏಳನೇ ವಾರ ಸಾಗುತ್ತಿದೆ. ಈ ವಾರ ಬಿಗ್ ಬಾಸ್ ಎಲ್ಲರಿಗೂ ವಿಶೇಷವಾದ ಜೋಡಿ ಟಾಸ್ಕ್ ನೀಡಿದ್ದಾರೆ. ಸೋಮವಾರ ಈ ಟಾಸ್ಕ್ ಶುರುವಾಗಿದೆ. ಆದರೆ, ಇದಕ್ಕೂ ಮುನ್ನ ಎಲ್ಲ ಸ್ಪರ್ಧಿಗಳಿಗೆ ಬಿಗ್ ಬಾಸ್ ವಿಶೇಷ ಚಟುವಟಿಕೆ ನೀಡಿದ್ದರು. ಅದೇನೆಂದರೆ ಕೆಂಪು ಗುಲಾಬಿ-ಕಪ್ಪು ಗುಲಾಬಿ. ಇದರ ಪ್ರಕಾರ ಮನೆಯಲ್ಲಿ ತಮ್ಮಿಷ್ಟದವರಿಗೆ ರೆಡ್ ರೋಸ್ ಹಾಗೂ ತಮ್ಮ ವೈರಿಗಳಿಗೆ ಕಪ್ಪು ಗುಲಾಬಿ ನೀಡಬೇಕು.

ಇದರಲ್ಲಿ ಐಶ್ವರ್ಯಾ ಅವರು ಶಿಶಿರ್ ಅವರಿಗೆ ಕೆಂಪು ಗುಲಾಬಿ ನೀಡಿದ್ದಾರೆ. ಅದು ಮಾಮೂಲಾಗಿ ಕೊಟ್ಟರೆ ದೊಡ್ಡ ವಿಚಾರವೇನಲ್ಲ, ಬದಲಾಗಿ ಮಂಡಿಯೂರಿ ಪ್ರಪೋಸ್ ಮಾಡುವ ರೀತಿಯಲ್ಲಿ ನೀಡಿದ್ದಾರೆ. ಜೊತೆಗೆ ‘ಫ್ರೆಂಡ್​ಶಿಪ್ ಎಂದರೆ ಸಂತೋಷದ ಸಮಯದಲ್ಲಿ ಮಾತ್ರ ಇರೋದಲ್ಲ. ದುಃಖದಲ್ಲಿ ಇದ್ದಾಗ ಕರೆದುಕೊಂಡು ಹೋಗುವವರು ನಿಜವಾದ ಗೆಳೆಯರು. ಮಾನವೀಯ ಗುಣ ತುಂಬಾನೇ ಮುಖ್ಯ. ಶಿಶಿರ್ ಅವರಲ್ಲಿ ಆ ಗುಣ ಇದೆ’ ಎಂದು ಐಶ್ವರ್ಯಾ ಹೇಳಿದ್ದಾರೆ.

ಐಶ್ವರ್ಯಾ ಅವರು ಮಂಡಿಯೂರಿ ಹೂ ಕೊಟ್ಟಾಗ ಮನೆಯವರೆಲ್ಲರೂ ರೇಗಿಸಿದರು. ಆದರೆ, ಇದಕ್ಕೆಲ್ಲ ಐಶ್ವರ್ಯಾ ತಲೆಕೆಡಿಸಿಕೊಂಡಿಲ್ಲ. ಆ ಬಳಿಕ ಇಬ್ಬರೂ ಪರಸ್ಪರ ಹಗ್ ಕೂಡ ಮಾಡಿಕೊಂಡರು. ಅತ್ತ ಶಿಶಿರ್ ಅವರು ಕೂಡ ಕೆಂಪು ಗುಲಾಬಿಯನ್ನು ಐಶ್ವರ್ಯಾ ಅವರಿಗೇ ನೀಡಿದ್ದಾರೆ. ನಾನು ಹುಷಾರಿಲ್ಲದ ಸಂದರ್ಭ ತುಂಬಾ ಕೇರ್ ಮಾಡಿದ್ದಾರೆ, ಮಾತ್ರೆ ತಂದು ಕೊಟ್ಟಿದ್ದಾರೆ. ನಾನು ಎರಡೇ ದಿನದಲ್ಲಿ ಹುಷಾರಾಗಲು ಐಶ್ವರ್ಯಾನೇ ಕಾರಣ ಎದು ಹೇಳಿದರು.

ಬಿಗ್ ಬಾಸ್ ಪ್ರಾರಂಭ ಆದ ಹೊಸತರಲ್ಲಿ ಐಶ್ವರ್ಯ ಅವರು ಧರ್ಮ ಅವರ ಜೊತೆ ಸಖತ್ ಕ್ಲೋಸ್ ಆಗಿದ್ದರು. ಬಳಿಕ ಧರ್ಮಾ ಅವರು ಅನುಷಾ ಜೊತೆ ಸೇರಿದರು. ಇದೀಗ ಬಿಗ್ ಬಾಸ್ ಮನೆಯಲ್ಲಿರುವ ಐಶ್ವರ್ಯ ಹಾಗೂ ಶಶಿರ್ ಮಧ್ಯ ಲವ್ ಪ್ರಾರಂಭವಾಗಿದೆ ಎಂಬುದು ಅನುಮಾನ ಶುರುವಾಗಿದೆ. ಕೆಲ ವಾರಗಳ ಹಿಂದೆ ಕೂಡ ಐಶ್ವರ್ಯ ಹಾಗೂ ಶಿಶಿರ್ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿರುವ ದೃಶ್ಯ ವೈರಲ್ ಆಗಿತ್ತು.

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್?