Friday, 20th September 2024

‘ಅಲೆಕ್ಸಾ’ ಚಿತ್ರ ನವೆಂಬರ್ 3 ರಂದು ಬಿಡುಗಡೆ

ಬೆಂಗಳೂರು: ವನ್ ತೇಜ್ ಹಾಗೂ ಅದಿತಿ ಪ್ರಭುದೇವ ನಟಿಸಿರುವ ‘ಅಲೆಕ್ಸಾ’ ಚಿತ್ರ ನವೆಂಬರ್ 3 ರಂದು ಬಿಡುಗಡೆಯಾಗಲಿದೆ. ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು.

ಟೀಸರ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ತನಿಖಾಧಿಕಾರಿ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ.

ಪವನ್ ತೇಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಾರ್ಮಾಸುಟಿಕಲ್ ಮಾಫಿಯಾ ಬಗ್ಗೆ ಕಥಾಹಂದರವಿದೆ. ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ ಎಂದು ಜೀವ ಅವರು ಹೇಳಿದ್ದಾರೆ.

ತನಿಖಾ ಅಧಿಕಾರಿಯ ಪಾತ್ರವನ್ನು ನೀಡಿದಾಗ ಬಹಳ ಸಂತೋಷವಾಯಿತು. ಬಹಳ ಉತ್ಸಾಹದಿಂದ ಒಪ್ಪಿಕೊಂಡೆ. ನನಗೂ ಆಕ್ಷನ್ ಹೀರೋಯಿನ್ ಆಗಬೇಕೆಂಬ ಕನಸಿತ್ತು, ಅದು ಕೂಡ ಈ ಚಿತ್ರದ ಮೂಲಕ ನನಸಾಗಿದೆ ಎಂದು ಟೀಸರ್ ಬಿಡುಗಡೆ ಸಂದರ್ಭದಲ್ಲಿ ನಟಿ ಅದಿತಿ ಪ್ರಭುದೇವಾ ಹೇಳಿದ್ದಾರೆ.

ಚಿತ್ರದಲ್ಲಿ ಪವನ್ ತೇಜ್, ಅದಿತಿ ಪ್ರಭುದೇವ, ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾ ದವರು ನಟಿಸಿದ್ದಾರೆ.