Thursday, 3rd October 2024

ಅಂಜನಿಪುತ್ರ ಸಿನಿಮಾಕ್ಕೆ ಐದು ವರ್ಷ

ಬೆಂಗಳೂರು: ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ಜನಪ್ರಿಯ ನಟಿಯಾಗಿ ಗುರುತಿಸಿಕೊಂಡ ರಶ್ಮಿಕಾ 2017ರ ಡಿಸೆಂಬರ್ ನಲ್ಲಿ ತೆರೆ ಕಂಡ ಅಂಜನಿಪುತ್ರ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿ ನಟಿಸಿದ್ದರು.

ಅದನ್ನೀಗ ರಶ್ಮಿಕಾ ನೆನೆದಿದ್ದಾರೆ. ಅಂಜನಿಪುತ್ರ ಚಿತ್ರ ಬಿಡುಗಡೆ ಆಗಿ 5 ವರ್ಷಗಳು ತುಂಬಿದೆ.

ಪುನೀತ್ ರಾಜ್ ಕುಮಾರ್ ಅವರೊಂದಿಗೆ ಅಂದು ಆಡುತ್ತಿದ್ದ ಮಾತುಕತೆಗಳನ್ನು ಇಂದಿಗೂ ನೆನೆಯುತ್ತೇನೆ. ಆ ಸಮಯದಲ್ಲಿ ನನ್ನ ಮೇಲೆ ನನಗಿಂತ ಅವರಿಗೇ ಹೆಚ್ಚು ವಿಶ್ವಾಸವಿತ್ತು.

ಅವರು ಅತ್ಯಂತ ಸಹೃದಯಿ, ನನ್ನ ಹೃದಯ ದಲ್ಲಿರುವ ಅವರೊಂದಿಗಿನ ಬಂಧವನ್ನು ಬದಲಾಯಿಸಲು ಸಾಧ್ಯವಿಲ್ಲ. ಚಿತ್ರದ ನಿರ್ದೇಶಕ ಹರ್ಷ ಅವರಿಗೆ ಈ ಸಂದರ್ಭದಲ್ಲಿ ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಕನ್ನಡ ಚಿತ್ರದ ಬಗ್ಗೆ ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ.

 
Read E-Paper click here