Saturday, 14th December 2024

ನ.9ರಂದು ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯ

ಬೆಂಗಳೂರು: ಇದೇ ನವೆಂಬರ್ 8ರಂದು ಪುನೀತ್ 11ನೇ ದಿನದ ಕಾರ್ಯ ನಡೆಯಲಿದ್ದು, ತಯಾರಿ ನಡೆಯುತ್ತಿದೆ. 12ನೇ ದಿನದ ಕಾರ್ಯದಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಗೆ ಯೋಜಿಸಲಾಗಿದೆ.

ಬೆಳಗ್ಗೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸದಲ್ಲಿ ಕುಟುಂಬಸ್ಥ ರಿಂದ ಮನೆಯಲ್ಲಿ ಪೂಜೆ ಸಲ್ಲಿಕೆ ಮಾಡ ಲಾಗುತ್ತದೆ. ನಂತರ ಕಂಠೀರವ ಸ್ಟುಡಿಯೋಗೆ ಕುಟುಂಬಸ್ಥರು ತೆರಳಲಿದ್ದಾರೆ. 12ನೇ ದಿನದ ಕಾರ್ಯ ಪ್ಯಾಲೇಸ್ ಗ್ರೌಂಡ್​ನಲ್ಲಿ ನಡೆಯ ಲಿದ್ದು ಚಿತ್ರೋದ್ಯಮದ‌ ಗಣ್ಯರು, ಆಪ್ತ ಬಳಗಕ್ಕೆ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ.

ಇಂದು, ಸಂಪ್ರದಾಯದಂತೆ ವಿನಯ್ ರಾಜಕುಮಾರ್ ತಲೆಗೂದಲು ತೆಗೆಸುವ ಶಾಸ್ತ್ರ ನಡೆಸಿದ್ದಾರೆ. ಸವಿತ ಸಮಾಜದ ರಮೇಶ್ ಎಂಬುವವರು ವಿನಯ್ ಅವರ ತಲೆಯಲ್ಲಿ ಐದು ಕಡೆ ಕೂದಲು ತೆಗೆಯುವ ಮೂಲಕ ಶಾಸ್ತ್ರ ನೆರವೇರಿಸಿದ್ದಾರೆ.

11ನೇ ದಿನದ ಕಾರ್ಯಕ್ಕೆ ಪುನೀತ್ ನಿವಾಸದ ಎದುರು ಸಿದ್ಧತೆ ನಡೆಯುತ್ತಿದ್ದು, ಶಾಮಿ ಯಾನ ಹಾಕಲಾಗುತ್ತಿದೆ. ಮನೆಯಲ್ಲಿ ಕುಟುಂಬಸ್ಥರು ಕಾರ್ಯ ಮುಗಿಸಿದ ನಂತರ, ಕಂಠೀರವ ಸ್ಟುಡಿಯೋಗೆ ತೆರಳಲಿದ್ದು, ಅಲ್ಲಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಸುಮಾರು 11ಗಂಟೆಗೆ ಪುನೀತ್ ಕಾರ್ಯ ನಡೆಯಲಿದೆ.

ಇಂದು ಚಿತ್ರ ಪ್ರದರ್ಶಕರ ವತಿಯಿಂದ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪುನೀತ್​ಗೆ ವಿಶೇಷ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ ಏಕಕಾಲಕ್ಕೆ ಕಾರ್ಯಕ್ರಮ ನಡೆಯಲಿದ್ದು, ಗೀತಾಂಜಲಿ, ಪುಷ್ಪಾಂಜಲಿ ಹಾಗೂ ದೀಪಾಂಜಲಿ ಮುಖಾಂತರ ನಮನ ಸಲ್ಲಿಸಲಾಗುತ್ತದೆ.

ಇಂದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್​ರನ್ನು ನೋಡಲು ಆಗಮಿಸಿದ್ದಾರೆ. ರಾಜ್ಯದ ವಿವಿಧ ಭಾಗದಿಂದ ಅಭಿಮಾನಿಗಳು ಆಗಮಿಸಿದ್ದು, ಪುನೀತ್ ಸಮಾಧಿ ದರ್ಶನ ಪಡೆಯಲು ಕಿಲೋ ಮೀಟರ್​​ಗಟ್ಟಲೆ ಉದ್ದದ ಸರದಿ ಸಾಲು ನಿರ್ಮಾಣವಾಗಿದೆ. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭದ್ರತೆಗೆ 500ಕ್ಕೂ ಅಧಿಕ ಪೊಲೀಸ ರನ್ನು ನಿಯೋಜಿಸಲಾಗಿದೆ.