Tuesday, 12th November 2024

BBK 11: ಬಕೆಟ್ ಹಿಡಿಯೋದು ಬಿಡು: ಬಿಗ್ ಬಾಸ್ ಮನೆಯಲ್ಲಿ ಅನುಷಾ-ಐಶ್ವರ್ಯ ನಡುವೆ ದೊಡ್ಡ ಜಗಳ

Aishwarya and Anusha

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ಎರಡು ವಾರ ಹಿಂದಿನ ಯಾವುದೇ ಸೀಸನ್​ನಲ್ಲಿ ಕಾಣದ ರೀತಿ ಬಿಗ್ ಬಾಸ್ ಮನೆ ಈ ಸೀಸನ್​ನಲ್ಲಿ ಕಂಡಿದೆ. ಮಾತೆತ್ತಿದರೆ ಜಗಳ, ನಿಯಮವಿದ್ದರೂ ಅದು ಲೆಕ್ಕಕ್ಕಿಲ್ಲ ಹೀಗೆ ಕಳೆದ ಎರಡು ವಾರಗಳಲ್ಲಿ ಮನೆಯಲ್ಲಿ ಅನೇಕ ತಪ್ಪುಗಳು ನಡೆದಿವೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಪಾಠ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಇದೀಗ ಮೂರನೇ ವಾರ ಕೂಡ ಮನೆಯಲ್ಲಿ ಬೆಂಕಿ ಹತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರ ಅನುಷಾ ರೈ ಹಾಗೂ ಐಶ್ವರ್ಯ ಸಿಂಧೋಗಿ ನಡುವೆ ದೊಡ್ಡ ಜಗಳ ನಡೆದಿದೆ. ನಾಮಿನೇಷನ್ ವಿಚಾರಕ್ಕೆ ಈ ವಾರ್ ಶುರುವಾದಂತಿದೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕ್ಯಾಪ್ಟನ್ ಶಿಶಿರ್​ ಅವರು ಅನುಷಾ ಅವರನ್ನು ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಇದರಿಂದ ಕೋಪಗೊಂಡ ​ಅನುಷಾ ನಮಗೆ ಅವರ ತರ ಬಕೆಟ್​ ಹಿಡಿಯೋದಕ್ಕೆ ಬರಲ್ಲ, ನಾವು ಇರೋದೇ ಹಿಂಗೆ ಎಂದು ರೇಗಾಡಿದ್ದಾರೆ.

ಐಶ್ವರ್ಯ ಎದುರು ಕುಳಿದುಕೊಂಡು ರೇಗಾಡಿದ ಅನುಷಾ, ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡ್ತಾ ಇದ್ದಾರೆ ಇಲ್ಲಿ ಎಂದಿದ್ದಾರೆ. ಅಲ್ಲದೆ ನೇರವಾಗಿ ಐಶ್ವರ್ಯಗೆ ಬಕೆಟ್​ ಹಿಡಿಯೋದನ್ನು ಬಿಡ್ರಿ ಅಂತ ಅನುಷಾ ಹೇಳಿದ್ದಾರೆ. ಇದಕ್ಕೆ ಸಿಡಿದೆದ್ದ ಐಶ್ವರ್ಯ ನನಗೆ ಬಕೆಟ್​ ಹಿಡಿಯೋ ಅವಶ್ಯಕತೆನೆ ಇಲ್ಲ. ನೀನು ಹೇಳಿದ್ದನ್ನು ಕೇಳಿಸಿಕೊಂಡು ಕೂರುವುದಕ್ಕೆ ನಾನು ಇಲ್ಲಿಲ್ಲ ಅಂತ ಸಿಟ್ಟು ಮಾಡಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ.

ಅತ್ತ ಅನುಷಾ ರೈ ನೀನು ಹೋಗು ಅಲ್ಲಿ ಬಡ್ಕೋ ಬಾಯಿ ಎಂದು ಸಿಟ್ಟಿನಿಂದ ಹೇಳಿದ್ದಾರೆ. ಇದರ ನಡುವೆ ಉಗ್ರಂ ಮಂಜು ಅವರು ಸತ್ಯವೇ ನಮ್ಮ ತಾಯಿ, ತಂದೆ.. ಸತ್ಯವೇ ನಮ್ಮ ಬಂಧು ಬಳಗ ಎಂದು ಹಾಡು ಹೇಳುತ್ತಾ ಚಪ್ಪಾಳೆ ತಟ್ಟಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆ ಮೂರನೇ ವಾರದ ಮೊದಲ ದಿನವೇ ರಣರಂಗವಾದಂತೆ ಕಾಣುತ್ತಿದೆ.

ಇನ್ನು ಬೆಳ್ಳಂಬೆಳಗ್ಗೆ ಸ್ಪರ್ಧಿಗಳು ಎದ್ದ ತಕ್ಷಣ ಬಿಗ್​ ಬಾಸ್​ ಫೋನ್​ ಕರೆ ಮಾಡಿದ್ದಾರೆ. ಮನೆಯ ಕ್ಯಾಪ್ಟನ್​ ಶಿಶಿರ್​ ಈ ಫೋನ್​ ಸ್ವೀಕರಿಸಿದ್ದಾರೆ​. ಅತ್ತ ಕಡೆಯಿಂದ ಬಿಗ್ ಬಾಸ್ ‘ನಿಮ್ಮ ಎಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಥ್ಯಾಂಕ್ಯೂ ವೆರಿ ಮಚ್’​ ಎಂದು ಹೇಳಿದ್ದಾರೆ. ಇದಕ್ಕೆ ಏನು ಉತ್ತರಿಸಬೇಕೆಂದು ಕಾರಣ ಶಿಶಿರ್​ ಥ್ಯಾಂಕ್ಯೂ ಬಿಗ್​ ಬಾಸ್​ ಎಂದಿದ್ದಾರೆ. ಶಿಶಿರ್​ ಮಾತಿಗೆ ಕೋಪಗೊಂಡ ಬಿಗ್​ ಬಾಸ್​’ ಏನು ಥ್ಯಾಂಕ್ಯೂ ಹೇಳುತ್ತಿದ್ದೀರಲ್ಲ. ಉಡಾಫೆತನ, ಅಪ್ರಮಾಣಿಕ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಸ್​ ಬಾಸ್​ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಸದ್ಯ ಬಿಗ್​ ಬಾಸ್​ ಆಡಿದ ಮಾತು ಅಚ್ಚರಿಗೆ ಕಾರಣವಾಗಿದೆ.

Bigg Boss Kannada: ಸುದೀಪ್ ಆಯ್ತು ಈಗ ಬಿಗ್ ಬಾಸ್: ನಾನು ಈ ಮನೆಯಲ್ಲಿ ಇರಲ್ಲ ಎಂದು ಹೊರಟು ಹೋದ ಬಿಗ್ ಬಾಸ್