Tuesday, 10th December 2024

BBK 11: ಬಿಗ್ ಬಾಸ್ ಮನೆಯಲ್ಲಿ ಮರೆಯಾದ ಮನುಷ್ಯತ್ವ: ಅನುಷಾಗೆ ಹೀಗಾ ಹೊಡೆಯೋದು

BBK 11

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಪಡೆಯುತ್ತಿದೆ. ಟಾಸ್ಕ್​ನ ಕಾವು ಏರುತ್ತಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ ಮನುಷ್ಯತ್ವವನ್ನೇ ಮರೆದು ಮನಬಂದತೆ ಆಡುತ್ತಿದ್ದಾರೆ. ಇದು ಈ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಎದ್ದು ಕಂಡಿತು. ಬಿಗ್ ಬಾಸ್‌ ಕೊಟ್ಟಿರುವ ಟಾಸ್ಕ್‌ನಲ್ಲಿ ಉದ್ದೇಶಪೂರ್ವಕವಾಗಿಯೇ ಕೆಲ ಸ್ಪರ್ಧಿಗಳನ್ನ ಕೆಲ ಸ್ಪರ್ಧಿಗಳು ಫಿಸಿಕಲ್ ಹರ್ಟ್ ಮಾಡಿದ್ದಾರೆ.

ಮನೆಯ ಜೋಡಿ ಕ್ಯಾಪ್ಟನ್‌ ಟಾಸ್ಕ್‌ ನಲ್ಲಿ 17 ನಿಮಿಷ ಸುತ್ತುವುದು ಟಾಸ್ಕ್‌ ಆಗಿತ್ತು. ಅನುಷಾ ರೈ ಮತ್ತು ಮಂಜು ಜೋಡಿಯಾಗಿ ಆಡುವಾಗ ಮನೆಯವರೆಲ್ಲರೂ ಅನುಷಾ ಅವರನ್ನೇ ಟಾರ್ಗೆಟ್‌ ಮಾಡಿ ಹೊಡೆದರು. ಎರಡೆರಡು ಬಾರಿ ಅನುಷಾ ರೈ ಅವರನ್ನು ದಿಂಬಿನಿಂದ ಹೊಡೆದು ಬೀಳಿಸಿದರು. ನೋವು ತಡೆಯಲಾಗದ ಅನುಷಾ ಏಳಲು ಕಷ್ಟಪಟ್ಟರು. ಜೊತೆಗೆ ಅತ್ತುಕೊಂಡೇ ಟಾಸ್ಕ್‌ ಮುಗಿಸಿದರು.

ಒಂದು ಸುತ್ತಿನ ಆಟ ಮುಗಿಯುವ ಹೊತ್ತಿಗೆ ಅನುಷಾ ಅವರಿಗೆ ಪೆಟ್ಟಾಗಿತ್ತು. ಹಾಗಿದ್ದರೂ ಕೂಡ ಅವರು ಟಾಸ್ಕ್​ ಅನ್ನು ಬಿಟ್ಟುಕೊಡಬಾರದು ಎಂಬ ಕಾರಣದಿಂದ ಆಟ ಮುಂದುವರಿಸಿದರು. ಆಗ ಗೋಲ್ಡ್ ಸುರೇಶ್, ಶಿಶಿರ್, ತ್ರಿವಿಕ್ರಮ್ ಅವರು ಜೋರಾಗಿ ಹೊಡೆದಿದ್ದಾರೆ. ಅನುಷಾ ರೈ ಕೆಳಗೆ ಬಿದ್ದಾಗ ಮೋಕ್ಷಿತಾ ಪೈ, ಗೌತಮಿ ಜಾಧವ್ ಅವರು ಕಣ್ಣೀರು ಹಾಕಿದ ಘಟನೆ ಕೂಡ ನಡೆಯಿತು.

ಏಕಾಗ್ರತೆ ತಪ್ಪಿಸೋದಕ್ಕೆ, ಮೆಂಟಲಿ ಡಿಸ್ಟರ್ಬ್ ಮಾಡೋದಕ್ಕೆ ಸ್ಪರ್ಧಿಗಳು ತಮ್ಮ ತಮ್ಮ ವಿವೇಚನೆ ಬಳಸಿ ಆಟವಾಡಬೇಕಿತ್ತು. ಆದರೆ, ಕ್ಯಾಪ್ಟನ್ ಆಗುವ ಸಲುವಾಗಿ ಎಲ್ಲರೂ ಜಿದ್ದಿಗೆ ಬಿದ್ದವರಂತೆ ಬೀಳಿಸುವ ಆಟವಾಡಿದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಈ ಟಾಸ್ಕ್ ಮಧ್ಯೆ​ ಭವ್ಯಾ ಗೌಡ ಅವರು ಹುಡುಗಿಯರನ್ನು ಟಾರ್ಗೆಟ್​ ಮಾಡಿ ಹೊಡೆಯಬೇಡಿ ಎಂಬ ಸ್ಟೇಟ್ಮೆಂಟ್ ಕೊಟ್ಟಿದ್ದರು. ಇದರ ಬಗ್ಗೆ ಟಾಸ್ಕ್ ಮುಗಿದ ಬಳಿಕ ಚರ್ಚೆ ನಡೆದಿದೆ. ಅವರ ಮಾತನ್ನು ತ್ರಿವಿಕ್ರಮ್, ಉಗ್ರಂ ಮಂಜು, ಶಿಶಿರ್ ಮುಂತಾದವರು ವಿರೋಧಿಸಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಆಟ: ನಕ್ಕು-ನಕ್ಕು ಸುಸ್ತಾದ ಮನೆಮಂದಿ, ಪ್ರೇಕ್ಷಕರು