Saturday, 14th December 2024

ನಿರೂಪಕಿ ಅನುಶ್ರೀಗೂ ತಟ್ಟಿತು ಸಿಸಿಬಿ ತಲೆಬಿಸಿ ?

*ಬೆಂಗಳೂರಿನಲ್ಲೇ ನಿರೂಪಕಿ ಅನುಶ್ರೀಗಾಗಿ ತಲಾಶ್

ಬೆಂಗಳೂರು/ಮಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಮಂಗಳೂರಿನ ಟಿವಿ ನಿರೂಪಕಿ ಹಾಗೂ ನಟಿಯ ಹೆಸರು ಥಳಕು ಹಾಕಿಕೊಂಡಿತ್ತು. ಅದು ಈಗ ಬಹಿರಂಗಗೊಂಡಿದೆ.

ಕನ್ನಡದ ಖ್ಯಾತ ಶೋಗಳ ನಿರೂಪಕಿ ಹಾಗೂ ನಟಿ ಅನುಶ್ರೀಗೆ ಗುರುವಾರ ಮಂಗಳೂರಿನ ಸಿಸಿಬಿ ತಂಡ ವಿಚಾರಣೆಗೆ ಹಾಜರಾಗು ವಂತೆ ನೋಟೀಸು ಕಳಿಸಿದೆನ್ನಲಾಗಿದೆ. ಡ್ರಗ್ಸ್ ನಂಟು ಪ್ರಕರಣದಲ್ಲಿ ಮಂಗಳೂರಿನ ಕಿಶೋರ್ ಶೆಟ್ಟಿ ಹೆಸರು ಬೆಳಕಿಗೆ ಬಂದ ಬೆನ್ನಲ್ಲೇ, ಈ ನಿರೂಪಕಿ ಬಗ್ಗೆ ಚ್ಯಾನೆಲ್’ಗಳಲ್ಲಿ ಸುದ್ದಿಗಳು ಹರಿದಾಡಿವೆ.

ಕಿಶೋರ್ ಶೆಟ್ಟಿ ಆಪ್ತ ತರುಣ್ ಅವರು ನೀಡಿದ ಮಾಹಿತಿ ಆಧಾರದ ಮೇಲೆ, ಸಿಸಿಬಿ ಅನುಶ್ರೀಗೆ ನೋಟೀಸ್ ಕಳಿಸಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆಂಬ ಸಂಶಯದ ಮೇಲೆ ವಿಚಾರಣೆಗೆ ಹಾಜರಾಗಲು ನೋಟೀಸ್ಲಿ ನೀಡಲಾಗಿದೆ.

ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಅನುಶ್ರೀ, ಇದುವರೆಗೂ ಯಾವುದೇ ನೋಟಿಸ್ ಬಂದಿಲ್ಲ. ದೇವರಾಣೆಗೂ ನಾನು ಪಾರ್ಟಿ ಮಾಡಿಲ್ಲ. ನೋಟೀಸ್ ಬಂದ್ರೆ ವಿಚಾರಣೆಗೆ ಹೋಗ್ತೀನಿ ಎಂದು ಮಾಧ್ಯಮಕ್ಕೆ ಉತ್ತರಿಸಿದ್ದಾರೆ. ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ನೋಟಿಸ್ ನೀಡಿದ್ದು, ಅವರಿಗಾಗಿ, ಮಂಗಳೂರಿನಿಂದ ಬೆಂಗಳೂರಿನವರೆಗೂ ಆಗಮಿಸಿ, ಶೋಧ ನಡೆಸುತ್ತಿದೆ.