Wednesday, 11th December 2024

ಆರ್ಯನ್ ಖಾನ್ ನಾಲ್ಕು ವರ್ಷಗಳಿಂದ ಮಾದಕ ದ್ರವ್ಯ ವ್ಯಸನಿಯಾಗಿದ್ದ: ಎನ್‌ಸಿಬಿ

ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ  ಆರ್ಯನ್ ಖಾನ್ ನಾಲ್ಕು ವರ್ಷಗಳಿಂದ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದರು ಎಂದು ಎನ್ ಸಿಬಿ ಮೂಲಗಳು ತಿಳಿಸಿವೆ. ತಮ್ಮ ಯುಕೆ ಮತ್ತು ದುಬೈ ವಾಸ್ತವ್ಯದ ಸಮಯದಲ್ಲೂ ಮಾದಕ ದ್ರವ್ಯ ಗಳನ್ನು ಅವಲಂಬಿಸಿದ್ದರು.

ವಿಚಾರಣೆಯ ಸಮಯದಲ್ಲಿ, ಆರ್ಯನ್ ಖಾನ್ ಸುಮಾರು ನಾಲ್ಕು ವರ್ಷಗಳಿಂದ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮುಂಬೈ ಕರಾವಳಿಯ ಕಾರ್ಡೆಲಿಯಾ ಕ್ರೂಸ್ ನಿಂದ ಅವರನ್ನು ವಶಕ್ಕೆ ತೆಗೆದುಕೊಂಡ ಒಂದು ದಿನದ ನಂತರ ಭಾನುವಾರ ಒಟ್ಟು 8 ಜನರನ್ನು ಎನ್ ಸಿಬಿ ಬಂಧಿಸಿದೆ.

ಆರ್ಯನ್ ಖಾನ್ ಅವರಲ್ಲದೆ, ಮುನ್ನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನುಪುರ್ ಸಾರಿಕಾ ಮತ್ತು ವಿಕ್ರಾಂತ್ ಚೋಕರ್ ಅವರನ್ನು ಬಂಧಿಸಲಾಗಿದೆ. ಆರ್ಯನ್ ಖಾನ್ ಮತ್ತು ಅರ್ಬಾಜ್ ಸುಮಾರು 15ವರ್ಷಗಳಿಂದ ಸ್ನೇಹಿತರಾಗಿದ್ದಾರೆ.

ಆರ್ಯನ್ ಖಾನ್, ಮುನ್ಮುನ್ ಧಮೇಚಾ ಮತ್ತು ಅರ್ಬಾಜ್ ಮರ್ಚೆಂಟ್ ಅವರನ್ನು ಅ.೪ ರವರೆಗೆ ಎನ್ ಸಿಬಿ ಕಸ್ಟಡಿಗೆ ಒಪ್ಪಿಸ ಲಾಗಿದೆ.