Friday, 13th December 2024

ಮಾಲಿವುಡ್ಗೆ ನಟ ಆರ್ಯನ್ ಸಂತೋಷ್ ಪಾದಾರ್ಪಣೆಗೆ ಸಜ್ಜು

ಬೆಂಗಳೂರು: ಕೊನೆಯದಾಗಿ ಡಿಯರ್ ಸತ್ಯ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ನಟ ಆರ್ಯನ್ ಸಂತೋಷ್ ಅವರು ಮಾಲಿವುಡ್ಗೆ ಪದಾ ರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಅರುಣ್ ಗೋಪಿ ನಿರ್ದೇಶನದ ದಿಲೀಪ್ ಅವರ ನಿರ್ಮಾಣದ ಮುಂದಿನ ಮಲಯಾಳಂ ಚಿತ್ರದ ಭಾಗವಾಗಲಿದ್ದಾರೆ. ಕೊನೆಯದಾಗಿ ಡಿಯರ್ ಸತ್ಯ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ನಟ ಆರ್ಯನ್ ಸಂತೋಷ್ ಅವರು ಮಾಲಿವುಡ್ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ನೂರು ಜನ್ಮಕು ಸಿನಿಮಾದಲ್ಲಿ ನಟಿಸಿದ್ದ ನಟ, ಅರುಣ್ ಗೋಪಿ ನಿರ್ದೇಶನದ ದಿಲೀಪ್ ಅವರ ನಿರ್ಮಾಣದ ಮುಂದಿನ ಮಲಯಾಳಂ ಚಿತ್ರದ ಭಾಗವಾಗಲಿದ್ದಾರೆ. ಆಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿ ತಮನ್ನಾ, ನಟ ಡಿನೋ ಮೋರಿಯಾ ಮತ್ತು ಶರತ್ಕುಮಾರ್ ಕೂಡ ನಟಿಸುತ್ತಿದ್ದಾರೆ.
ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಆರ್ಯನ್ ಸಿನಿಮಾದ ಸೆಟ್ಗೆ ಸೇರಲಿದ್ದು, ಮುಂಬೈ ಮತ್ತು ಗುಜರಾತ್ನಲ್ಲಿ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ. ಈಮಧ್ಯೆ, ಆರ್ಯನ್ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ.