Wednesday, 11th December 2024

ಡಾಕ್ಟರ್​ ಆಗುತ್ತಿದ್ದಾರೆ ನಟ ಆಯುಷ್ಮಾನ್​ ಖುರಾನಾ

ಮುಂಬೈ: ವಿಕ್ಕಿ ಡೋನರ್‌ ಖ್ಯಾತಿಯ ನಟ ಆಯುಷ್ಮಾನ್​ ಖುರಾನಾ ಪ್ರತಿ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡೋದ್ರ ಜೊತೆ ಜೊತೆಗೆ ಸಮಾಜಕ್ಕೊಂದು ಉತ್ತಮ ಸಂದೇಶ ಹೊತ್ತು ತರುತ್ತೆ. ಪ್ರಸ್ತುತ ಚಂಡೀಗಢದಲ್ಲಿರುವ ಆಯುಷ್ಮಾನ್​ ಖುರಾನಾ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

ಆಯುಷ್ಮಾನ್​ ಖುರಾನಾ ತಮ್ಮ ಮತ್ತೊಂದು ಸಿನಿಮಾವನ್ನ ಘೋಷಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟ ಮೊದಲ ಬಾರಿಗೆ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದಾರೆ. ಡಾಕ್ಟರ್​​ ಜಿ ಎಂಬ ಹೆಸರಿನ ಈ ಸಿನಿಮಾವನ್ನ ಅನುಭೂತಿ ಕಶ್ಯಪ್​ ನಿರ್ದೇಶಿಸಲಿದ್ದಾರೆ. ಜಂಗ್ಲಿ ಪಿಕ್ಚರ್ಸ್​ ಈ ಸಿನಿಮಾವನ್ನ ನಿರ್ಮಿಸಲಿದೆ.

ಡಾಕ್ಟರ್​ ಜಿ ನಾನು ಅತ್ಯಂತ ಪ್ರೀತಿ ಮಾಡುತ್ತಿದ್ದ ಚಿತ್ರಕತೆಗಳಲ್ಲೊಂದಾಗಿದೆ. ಇದೊಂದು ನವೀನ ಕಲ್ಪನೆಯಾಗಿದ್ದು ನಿಮ್ಮನ್ನ ನಗಿಸಲಿದೆ. ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಡಾಕ್ಟರ್​ ಕೋಟ್​​ ಧರಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಬರೆದು ಕೊಂಡಿದ್ದಾರೆ.