Tuesday, 10th December 2024

ಇಂದು ಕಿಚ್ಚನ ಪಂಚಾಯಿತಿ: ಯಾವ ಯಾವ ವಿಚಾರಕ್ಕೆ ಕ್ಲಾಸ್ ತೆಗೋತಾರೆ ಸುದೀಪ್?

Super Saturday With Kiccha Sudeep

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶುರುವಾಗಿ ಒಂದು ವಾರ ಆಗುತ್ತಾ ಬಂದಿದೆ. ಇಂದು ಮೊದಲ ವಾರದ ಕಿಚ್ಚನ ಪಂಚಾಯಿತಿ ನಡೆಯಲಿದೆ. ಸೂಪರ್ ಸಟರ್ಡೆ ವಿಥ್ ಸುದೀಪ್ (Sudeep) ಎಪಿಸೋಡ್​ಗೆ ಕರ್ನಾಟಕದ ಜನತೆ ಕಾದು ಕುಳಿತಿದ್ದು, ಮೊದಲ ಪಂಚಾಯಿತಿಯಲ್ಲಿ ಏನೆಲ್ಲ ಆಗುತ್ತೆ ಎಂಬುದು ಕುತೂಹಲ ಕೆರಳಿದೆ. ಮೊದಲ ವಾರ ಬಿಗ್ ಬಾಸ್ ಮನೆ ಹೆಚ್ಚು ಜಗಳಗಳಿಂದಲೇ ಕೂಡಿತ್ತು. ಅದರಲ್ಲೂ ಲಾಯರ್ ಜಗದೀಶ್ ಆಡಿದ ಮಾತುಗಳು ಅನೇಕ ಸ್ಪರ್ಧಿಗಳಿಗೆ ನೋವು ತರಿಸಿದ್ದು ಈ ಕುರಿತು ಕಿಚ್ಚ ಏನು ಹೇಳುತ್ತಾರೆ ನೋಡಬೇಕಿದೆ.

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಚೈತ್ರಾ ಕುಂದಾಪುರ ಸ್ವರ್ಗ ವಾಸಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಮಂಜು ಕೈಯಿಂದ ಹಣ್ಣು ಕಿತ್ತು ತಿಂದಿದ್ದು ಹಾಗೂ ತಮಗೆ ಕೊಟ್ಟ ಕೆಲಸವನ್ನು ಸರಿಯಾಗಿ ಮಾಡದೆ ಇದ್ದಿದ್ದರು. ಈ ಕುರಿತು ಸುದೀಪ್ ಮಾತನಾಡಬಹುದು. ಹಾಗೆಯೆ ಧನರಾಜ್ ಆಚಾರ್ ಟಾಸ್ಕ್ ಒಂದರಲ್ಲಿ ರೆಫ್ರಿ ಆಗಿದ್ದರು. ಆದರೆ, ತಮ್ಮ ಜವಾಬ್ದಾರಿ ಮರೆತು ಜಗದೀಶ್ ಜೊತೆ ಜಗಳವಾಡಿದ್ದರು. ಈ ವಿಚಾರಕ್ಕೆ ಕಿಚ್ಚ ಧನರಾಜ್​ಗೆ ನಿಯಮದ ಕುರಿತು ಹೇಳಬಹುದು.

ಎಲ್ಲರ ಕಣ್ಣು ಲಾಯರ್ ಜಗದೀಶ್ ಮೇಲೆ:

ಇಂದಿನ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ ಅವರಿಗೆ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸ್ಪರ್ಧಿಗಳ ಜೊತೆಗಿನ ಜಗಳ ಒಂದುಕಡೆಯಾದರೆ ಮತ್ತೊಂದೆಡೆ ಇವರು ಬಿಗ್ ಬಾಸ್​ಗೆನೇ ಧಮ್ಕಿ ಹಾಕಿದ್ದರು. ‘ಈ ಪ್ರೊಗ್ರಾಂ ಹಾಳು ಮಾಡಿಲ್ಲ ನನ್ನ ಹೆಸರು ಬೇರಿ ಇಡಿ. ಯಾವನೂ ಕಾಲಿಡಬಾರದು ಇಲ್ಲಿಗೆ. ಬಿಗ್ ಬಾಸ್ ನಿಮ್ಮನ್ನು ಎಕ್ಸ್​ಪೋಸ್ ಮಾಡುತ್ತೇನೆ. ನಮ್ಮನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ?’ ಎಂದು ಜಗದೀಶ್ ನಾಲಿಗೆ ಹರಿಬಿಟ್ಟಿದ್ದರು. ಮುಂದಿನ ದಿನ ಈ ಮಾತಿಗೆ ಕ್ಷಮೆ ಕೇಳಿದ್ದರೂ ಸುದೀಪ್ ಈ ವಿಚಾರವನ್ನು ಎತ್ತುವುದು ಖಚಿತ.

ಹಾಗೆಯೆ ಹೆಣ್ಣು ಮಕ್ಕಳ ವಿಚಾರಕ್ಕೆ ಹೋದರೆ ಕಿಚ್ಚ ಸುದೀಪ್‌ ಸುಮ್ನೆ ಬಿಡೋದಿಲ್ಲ. ಲಾಯರ್ ಜಗದೀಶ್ ಅವರು ಮಾನಸಾ ಅವರಿಗೆ ‘ಯಾವ ಸೀಮೆ ಹೆಂಗಸು ಅವಳು’ ಎಂದು ಹೇಳಿದ್ದರು. ಅಲ್ಲದೆ ಏಕವಚನದಲ್ಲಿ ಮಾತನಾಡಿದ್ದರು. ಇದರ ಬಗ್ಗೆ ಇಂದಿನ ಎಪಿಸೋಡ್​ನಲ್ಲಿ ದೊಡ್ಡ ಡಿಸ್ಕಷನ್ ಆಗುವುದು ಖಚಿತ. ಅತ್ತ ಧರ್ಮ ಕೀರ್ತಿರಾಜ್ ಹಾಗೂ ಐಶ್ವರ್ಯ ನಡುವೆ ಪ್ರೀತಿ ಹುಟ್ಟಿದಂತಿದೆ. ಇವರನ್ನು ಕಿಚ್ಚ ಕೂಡ ಕಾಲೆಳಯಬಹುದು.

BBK 11: ಒಂದೇ ವಾರಕ್ಕೆ ನಿಲ್ಲುತ್ತಾ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ?: ಯಾಕೆ?, ಏನಾಯಿತು?