Friday, 13th December 2024

ಬಿಗ್ ಬಾಸ್ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ: ಬಾಂಬ್ ಸಿಡಿಸಿದ ಜಗದೀಶ್

Lawyer Jagadish

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಆರಂಭವಾಗಿ ಮೂರು ದಿನಗಳು ಆಗಿದೆಯಷ್ಟೆ. ಈ ಮೂರೂ ದಿನವು ಲಾಯರ್ ಜಗದೀಶ್ (Lawyer Jagadish) ಸಖತ್ ಟ್ರೆಂಡ್​ನಲ್ಲಿದ್ದಾರೆ. ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುತ್ತಿರುವ ಇವರು ಮೂರನೇ ದಿನ ಇಡೀ ಸ್ವರ್ಗ ವಾಸಿಗಳ ಕೆಂಗಣ್ಣಿಗೆ ಗುರಿಯಾದರು. ಅಲ್ಲದೆ ನೇರವಾಗಿ ಬಿಗ್ ಬಾಸ್​ಗೆನೇ ಸವಾಲು ಹಾಕಿದ್ದಾರೆ. ಜಗದೀಶ್ ಆಡಿರುವ ಮಾತು ಕೇಳಿ ಇಡೀ ಕರ್ನಾಟಕ ಜನತೆಗೆ ಶಾಕ್ ಆಗಿದೆ.

ನರಕ ವಾಸಿಗಳಿಗೆ ಸ್ವರ್ಗದಿಂದ ಬಿಸಿ ನೀರು ಕೊಡುವಂತಿಲ್ಲ, ಆ್ಯಪಲ್ ಕೊಡುವಂತಿಲ್ಲ ಎಂಬ ನಿಯಮವಿದ್ದರೂ ಜಗದೀಶ್ ಕೊಟ್ಟಿದ್ದಾರೆ. ಇದರಿಂದ ಸ್ವರ್ಗ ನಿವಾಸ ಸಂಕಷ್ಟಕ್ಕೀಡಾಯಿತು. ನಾಮಿನೇಷನ್​ನಿಂದ ಪಾರಾಗಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ಟಾಸ್ಕ್​ನ ನೇತೃತ್ವ ಧನರಾಜ್ ಆಚಾರ್ ಅವರಿಗೆ ನೀಡಲಾಗಿತ್ತು. ಟಾಸ್ಕ್ ನಡೆಯುವ ಸಂದರ್ಭ ಕೂಡ ಜಗದೀಶ್ ಅನಗತ್ಯ ಮಾತುಗಳನ್ನು ಆಡಿ ಧನರಾಜ್ ಅವರನ್ನು ಕೆರಳಿಸಿದ್ದಾರೆ.

ಟಾಸ್ಕ್ ಮುಗಿದ ಬಳಿಕ ಮಾನಸ ಹಾಗೂ ಜಗದೀಶ್ ನಡುವೆ ಕೂಡ ಗಲಾಟೆ ನಡೆದಿದೆ. ಮಾತಿನ ಭರದಲ್ಲಿ ಲಾಯರ್ ಮಾನಸ ಅವರಿಗೆ ‘ನೀವು ಯಾವ ಸೀಮೆ ಹೆಂಗಸು ಅವ್ಳು’ ಎಂದು ಹೇಳಿದ್ದಾರೆ. ಈ ಮಾತಿಗೆ ಇಡೀ ಬಿಗ್ ಬಾಸ್ ಮನೆ ಜಗದೀಶ್ ವಿರುದ್ಧ ತಿರುಗಿ ನಿಂತಿದೆ. ಪ್ರತಿಯೊಬ್ಬರು ಜಗದೀಶ್ ಮೇಲೆ ರೇಗಾಡಿದ್ದಾರೆ.

ಎಪಿಸೋಡ್ ಮುಗಿಯುವ ಹೊತ್ತಿಗೆ ಬಿಗ್ ಬಾಸ್ ನಾಳಿನ ತುಣುಕು ರಿಲೀಸ್ ಮಾಡಿದ್ದು, ಇದರಲ್ಲಿ ಜಗದೀಶ್ ಬಾಂಬ್ ಸಿಡಿಸಿದ್ದಾರೆ. ‘ನಾನು ಆಚೆ ಹೋದ ನಂತ್ರ ಈ ಬಾಗ್ ಬಾಸ್ ಅನ್ನು ಮಾನ್ಯುಪ್ಯುಲೆಟ್ ಮಾಡಿಲ್ಲ ನನ್ನ ಹೆಸರು ಜಗದೀಶ್ ಅಲ್ಲ. ಬಿಗ್ ಬಾಸ್ ನಾನು ನಿಮ್ಮ ಬಗ್ಗೆ ಎಲ್ಲ ಮಾಹಿತಿ ಹೊರಹಾಕ್ತೇನೆ. ಪ್ರೊಗ್ರಾಂ ನಡೆಸ್ಬೇಕಲ್ಲ ಕೌಂಟ್ ಇಟ್. ನಾನು ಬಿಗ್ ಬಾಸ್ ಏನು ಅಂತ ಆಚೆಕಡೆ ತೋರಿಸ್ತೇನೆ. ನಾನು ಗಂಜಿ-ಗಿಂಜಿ ಎಲ್ಲ ಕುಡಿಯಲ್ಲ. ನಿಮ್ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ. ನಾನು ಈ ಪ್ರೊಗ್ರಾಂ ಅನ್ನು ಡೆಸ್ಟ್ರಾಯ್ ಮಾಡ್ತೇನೆ’ ಎಂದು ಹೇಳಿದ್ದಾರೆ.

BBK 11: ಉಗ್ರಂ ಮಂಜು ಮುಂದೆ ಲಾಯರ್ ಜಗದೀಶ್ ಉಗ್ರ ರೂಪ: ಬಿಗ್ ಬಾಸ್ ಮನೆಯಲ್ಲಿ ತಾರಕಕ್ಕೇರಿದ ಜಗಳ