Wednesday, 11th December 2024

BBK 11: ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಔಟ್?

BBK 11 Who Out

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಒಂಬತ್ತನೆ ವಾರದ ಅಂತ್ಯದಲ್ಲಿದೆ. ಕಳೆದ ವೀಕೆಂಡ್ ಸುದೀಪ್ ಹೇಳಿದಂತೆ ಈ ವಾರದಿಂದ ಟಾಸ್ಕ್​ಗಳ ಕಾವು ಏರಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 13 ಮಂದಿ ಇದ್ದಾರೆ. ಕಳೆದ ವಾರ ಮನೆಯಿಂದ ಧರ್ಮಾ ಕೀರ್ತಿರಾಜ್ ಎಲಿಮಿನೇಟ್ ಆಗಿ ಹೊರಬಂದರು. ಚೈತ್ರಾ ಕುಂದಾಪುರ ಹಾಗೂ ಧರ್ಮಾ ಕೊನೆಯದಾಗಿ ಡೇಂಜರ್ ಝೋನ್​ಗೆ ಬಂದಿದ್ದರು. ಇದರಲ್ಲಿ ಧರ್ಮಾ ಎಲಿಮಿನೇಟ್ ಆದರು. ಇದೀಗ 9ನೇ ವಾರ ಮನೆಯಿಂದ ಯಾರು ಔಟ್ ಆಗುತ್ತಾರೆ?.

ಈ ವಾರ ಮನೆಯಿಂದ ಹೊರ ಹೋಗಲು ಏಳು ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರದ ನಾಮಿನೇಷನ್ ಪ್ರಕ್ರಿಯೆ ತುಂಬಾನೆ ವಿಭಿನ್ನವಾಗಿತ್ತು. ಬಿಲ್ಲು-ಬಾಣ ಕಲೆಗಾರಿಕೆ ಮೂಲಕ ನಾಮಿನೇಟ್ ಮಾಡಲು ಬಿಗ್​ ಬಾಸ್ ಸೂಚಿಸಿದ್ದಾರೆ. ನಾಮಿನೇಟ್ ಮಾಡುವ ಸದಸ್ಯರು, ಎದುರಾಳಿಯ ಸ್ಪರ್ಧಿಯ ಭಾವಚಿತ್ರವನ್ನು ಬಾಣಕ್ಕೆ ಚುಚ್ಚಿಕೊಳ್ಳಬೇಕು. ನಂತರ ಅದನ್ನು ಮನೆಯ ಮುಖ್ಯದ್ವಾರಕ್ಕೆ ಹೊಡೆಯಬೇಕು. ಅದು ಮನೆಯ ದ್ವಾರವನ್ನು ಛೇದಿಸಿಕೊಂಡು ಹೋಗಬೇಕಾಗಿರುತ್ತದೆ.

ಹಾಗೆಯೆ ನಾಮಿನೇಟ್ ಮಾಡುವ ಸದಸ್ಯ ನೀಡಿದ ಕಾರಣ ರಾಜ ಮಂಜುವಿಗೆ ಸರಿ ಎನಿಸಬೇಕು. ಇಲ್ಲವಾದಲ್ಲಿ ನಾಮಿನೇಟ್ ಮಾಡಲು ಬಂದ ಸದಸ್ಯನೇ ನಾಮಿನೇಟ್ ಆಗುತ್ತಾನೆ. ಈ ವಾರ ಕಾರಣವನ್ನು ಸರಿ ನೀಡದೆಯೇ ಅನೇಕ ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಚೈತ್ರಾ ಕುಂದಾಪುರ ಹೆಸರು ಮೊದಲಿನಲ್ಲಿದೆ. ಜೊತೆಗೆ ವೈಲ್ಡ್ ಕಾರ್ಡಡ್ ಮೂಲಕ ಮನೆಯೊಳಗೆ ಕಾಲಿಟ್ಟ ಶೋಭಾ ಶೆಟ್ಟಿ ಹೆಸರು ಕೂಡ ಇದೆ.

ಉಳಿದಂತೆ ಶಿಶಿರ್ ಶಾಸ್ತ್ರೀ ಕೂಡ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಇವರ ಆಟ ಕಳೆದ ವಾರ ಅಷ್ಟೊಂದು ಚೆನ್ನಾಗಿ ಇರಲಿಲ್ಲ. ಎಲ್ಲೋ ಮೂಲೆಗುಂಪು ಆದಂಗಿದ್ದರು. ಅಂತೆಯೆ ಐಶ್ವರ್ಯಾ ಸಿಂಧೋಗಿ ಕೂಡ ನಾಮಿನೇಟ್ ಆಗಿದ್ದಾರೆ. ಈ ಲಿಸ್ಟ್​ನಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್, ಗೋಲ್ಡ್ ಸುರೇಶ್ ಕೂಡ ಇದ್ದಾರೆ. ಇವರಲ್ಲಿ ಯಾರು ಮನೆಯಿಂದ ನಿರ್ಗಮಿಸಬಹುದು ಎಂಬುದು ಕುತೂಹಲ ಕೆರಳಿಸಿದೆ.

BBK 11: ಚೈತ್ರಾ ಕುಂದಾಪುರ ಟಾಸ್ಕ್ ಮಧ್ಯೆ ಇರಿಟೇಟ್ ಮಾಡಿದ್ದಕ್ಕೆ ರೊಚ್ಚಿಗೆದ್ದ ಭವ್ಯಾ-ತ್ರಿವಿಕ್ರಮ್