Wednesday, 11th December 2024

BBK 11: ಎಲಿಮಿನೇಷನ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ ನೀಡಿದ ಬಿಗ್ ಬಾಸ್: ಈ ವೀಕೆಂಡ್ ಏನಾಗುತ್ತೆ?

No Elimination

ಏಳನೇ ವಾರದತ್ತ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಸ್ಪರ್ಧಿಗಳು ತಮ್ಮದೇ ಆದ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಟಾಸ್ಕ್ ಕೂಡ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಸ್ಪರ್ಧಿಗಳು ಮೈಚಳಿ ಬಿಟ್ಟು ಆಡುತ್ತಿದ್ದಾರೆ. ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದ್ದು, ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಇದರ ನಡುವೆ ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಎಲಿಮಿನೇಷನ್ ಭಯ ಶುರುವಾಗಿದೆ.

ಈ ವಾರ ದೊಡ್ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದಾರೆ. ಎಲ್ಲರೂ ಬಲಿಷ್ಠ ಸ್ಪರ್ಧಿಗಳೇ ಆಗಿದ್ದಾರೆ. ಆದರೆ, ಈ ವಾರ ಯಾವ ಸ್ಪರ್ಧಿಯೂ ಮನೆಯಿಂದ ಹೊರಹೋಗುವುದಿಲ್ಲ. ಅಂದರೆ, ಈ ವಾರ ನೋ ಎಲಿಮಿನೇಷನ್. ಈ ವಾರ ಗುರುವಾರದ ಸಂಚಿಕೆವರೆಗೂ ಟಾಸ್ಕ್‌ಗಳು ನಡೆದವು. ಟಾಸ್ಕ್‌ಗಳು ನಾಮಿನೇಷನ್‌ ಮೇಲೂ ಪರಿಣಾಮ ಬೀರಿದ್ದವು. ಆದರೆ, ಈ ವಾರ ವೋಟಿಂಗ್ ಲೈನ್ಸ್ ತೆರೆದಿರುವುದಿಲ್ಲ ಎಂಬ ಸೂಚನೆಯನ್ನ ವೀಕ್ಷಕರಿಗೆ ಬಿಗ್ ಬಾಸ್ ನೀಡಿದ್ದಾರೆ.

ಈ ವಾರ ಮನೆಯಿಂದ ಹೊರಹೋಗಲು ಏಳು ಸರ್ಧಿಗಳು ನಾಮಿನೇಟ್ ಆಗಿದ್ದರು. ಇದರಲ್ಲಿ ಧರ್ಮಾ ಕೀರ್ತಿರಾಜ್, ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಅವರು ನಾಮಿನೇಟ್​ ಆಗಿದ್ದಾರೆ. ಎಲಿಮಿನೇಷನ್ ಇಲ್ಲ ನಿಜ. ಆದರೆ, ಇದರಲ್ಲಿ ಬಿಗ್ ಬಾಸ್ ಏನಾದರು ಟ್ವಿಸ್ಟ್ ನೀಡುತ್ತಾರ ಎಂಬ ಕುತೂಹಲ ಕೂಡ ಇದೆ. ಅಂದರೆ ಫೇಕ್ ಎಲಿಮಿನೇಷನ್‌ ನಡೆಸಿ ಒಬ್ಬರನ್ನು ಸೀಕ್ರೆಟ್‌ ರೂಮ್‌ನಲ್ಲಿ ಬಿಗ್ ಬಾಸ್ ಇಡುತ್ತಾರೆ ಎಂಬ ಮಾತುಕೂಡಿದೆ.

ಗೋಲ್ಡ್ ಸುರೇಶ್ ಕಳಪೆ:

ಬಿಗ್ ​ಬಾಸ್​ ಸೀಸನ್​ 11ರ ಈ ವಾರದ ಕಳಪೆ ಪಟ್ಟವನ್ನು ಮನೆಮಂದಿ ಗೋಲ್ಡ್ ಸುರೇಶ್ ಅವರಿಗೆ ಕೊಟ್ಟಿದ್ದಾರೆ. ಸುರೇಶ್ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಟಾಸ್ಕ್​ ವೇಳೆ ಅವರು ನಡೆದುಕೊಂಡ ರೀತಿಯನ್ನು ಅನೇಕರು ಖಂಡಿಸಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ಹಾಗಾಗಿ ಅವರು ಜೈಲು ಸೇರಿದ್ದಾರೆ. ಮುಖ್ಯವಾಗಿ ಮಹಿಳಾ ಸ್ಪರ್ಧಿಗಳೇ ಸುರೇಶ್​ಗೆ ಹೆಚ್ಚು ಕಳಪೆ ಪಟ್ಟ ಕೊಟ್ಟಿದ್ದಾರೆ.

BBK 11: ಬಿಗ್ ಬಾಸ್ ಮನೆಯ ನೂತನ ಕ್ಯಾಪ್ಟನ್ ಆಗಿ ತ್ರಿವಿಕ್ರಮ್ ಆಯ್ಕೆ: ಕಣ್ಣೀರಿಟ್ಟ ಭವ್ಯಾ