Tuesday, 10th December 2024

BBK 11: ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್​ನಿಂದ ಸೇವ್ ಮಾಡೋದ್ರಲ್ಲೂ ಗುಂಪುಗಾರಿಕೆ?

BBK 11

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮೂರನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ನಾಮಿನೇಷನ್‌ ಎಂಬ ವಿಚಾರ ಬಂದಾಗ‌ ಸ್ಪರ್ಧಿಗಳ ಮಧ್ಯೆ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಇದೀಗ ಹೊಸದಾಗಿ ನಾಮಿನೇಷನ್​ನಿಂದ ಸೇವ್ ಮಾಡುವುದರಲ್ಲೂ ಗುಂಪುಗಾರಿಕೆ ನಡೆಯುವಂತೆ ಕಾಣುತ್ತಿದೆ. ನಾಮಿನೇಷನ್ ರಾಜಕೀಯ ಜೋರಾಗಿಯೇ ನಡೆಯುತ್ತಿದೆ.

ಮನೆಯೊಳಗಡೆ ಈಗ ಯಾರನ್ನು ನಾಮಿನೇಟ್ ಮಾಡಬೇಕು? ಯಾರನ್ನು ಮಾಡಬಾರದು? ಎಂಬ ಬಗ್ಗೆ ಗುಂಪುಗಳಲ್ಲಿ ಚರ್ಚೆ ನಡೆಯಲು ಶುರುವಾಗಿದೆ. ನಾಮಿನೇಷನ್ ಎಂಬುದು ವೈಯಕ್ತಿಕ ಆಯ್ಕೆ ಆಗಿರಬೇಕು ಎಂದು ಬಿಗ್​ಬಾಸ್ ತಿಳಿಸಿದ್ದರೂ ಸಹ ನಾಮಿನೇಟ್ ಮಾಡಲು ಚರ್ಚೆ ಆಗುತ್ತಿದೆ.

ಈ ವಾರದ ಎಪಿಡೋಡ್​ನಲ್ಲಿ ಉಗ್ರಂ ಮಂಜು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಜಗಳದಲ್ಲೂ ಇವರು ಜಗದೀಶ್​ಗೆ ಟಕ್ಕರ್ ಕೊಡುತ್ತಿದ್ದಾರೆ. ಸದ್ಯ ಮಂಜು, ಮೋಕ್ಷಿತಾ, ಗೌತಮಿ ಒಂದು ಗುಂಪಾಗಿದ್ದಾರೆ. ಮತ್ತೊಂದೆಡೆ ರಂಜಿತ್‌, ತ್ರಿವಿಕ್ರಮ್‌ ಇನ್ನೊಂದು ಗುಂಪು. ಹಾಗೇ ಸುರೇಶ್‌ ಧನರಾಜ್‌‌‌ ಒಂದು ಟೀಂನಲ್ಲಿ ನಾಮಿನೇಷನ್‌‌ ಬಗ್ಗೆ ಮಾತನಾಡಿಕೊಂಡಿದ್ದಾರೆ.

ಉಗ್ರಂ ಮಂಜು ಅವರು ನಾಮಿನೇಷನ್‌ ಕುರಿತಾಗಿ ಮಾತನಾಡುತ್ತಾ, ಮೊದಲಿಗೆ ಚೈತ್ರಾ ಸೇಫ್‌ ಆದರು. ಈ ರೌಂಡ್‌ನಲ್ಲಿ ಮಾನಸ ಸೇವ್‌ ಆದರು. ನಾನು ಇಂಡಿವಿಷ್ಯಲ್‌ ಆಗಿ ಆಡಿಲ್ಲ ಅಂದರೆ ಪ್ರತಿ ಸಲ ನಾನು ಹೋಗಿಲ್ಲ ಅಂದರೆ ಕೇಳು ಎಂದು ಉಗ್ರಂ ಮಂಜು ಅವರು ತಮ್ಮ ಸ್ಟ್ರಾಟಜಿ ಬಗ್ಗೆ ಮೋಕ್ಷಿತಾ, ಗೌತಮಿ ಜೊತೆ ಮಾತನಾಡಿದ್ದಾರೆ.

ಮತ್ತೊಂದು ಕಡೆ ಧನರಾಜ್​ ಆಚಾರ್ ಹಾಗೂ ಗೋಲ್ಡ್ ಸುರೇಶ್​ ನಾವು ಮಾಡಿದ ತಪ್ಪಿಗೆ ಕರ್ಮ ನಮಗೆ ಸಿಕ್ಕಿದೆ ಅಂತ ಮಾತಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ದೊಡ್ಮನೆಯಲ್ಲಿ ನಾಮಿನೇಷನ್ ವಿಚಾರಕ್ಕೆ ದೊಡ್ಡ ಡಿಸ್ಕಷನ್ ಆಗುತ್ತಿದೆ.

BBK 11 TRP: ಬಿಗ್ ಬಾಸ್​ನಲ್ಲಿ ಜಗಳವನ್ನೇ ನೆಚ್ಚಿಕೊಂಡ ಜನರು: ಸುದೀಪ್ ಬಂದ ದಿನ ಭರ್ಜರಿ ಟಿಆರ್​ಪಿ