Thursday, 12th December 2024

BBK 11: ಐದನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಮಾನಸಾ

Manasa Out

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಐದನೇ ವಾರ ಸಾಕಷ್ಟು ಎಮೋಷನಲ್ ಆಗಿತ್ತು. ಹಿಂದಿನ ವಾರಗಳಂತೆ ಜಗಳಗಳು ಅಷ್ಟೊಂದು ಆಗಿಲ್ಲ. ಇದಕ್ಕೆ ಬಿಗ್ ಬಾಸ್ ನೀಡಿರುವ ಚಟುವಟಿಕೆಯೂ ಕಾರಣ. ಸ್ಪರ್ಧಿಗಳು ಈ ವಾರ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು. ಜೊತೆಗೆ ದೀಪಾವಳಿ ಪ್ರಯುಕ್ತ ಮನೆ ಮಂದಿಗೆ ಫ್ಯಾಮಿಲಿಯಿಂದ ಪತ್ರ ಕೂಡ ಬಂತು. ಇವುಗಳ ಮಧ್ಯೆ ಮನೆಯಲ್ಲಿ 12 ಮಂದಿ ನಾಮಿನೇಟ್ ಆಗಿದ್ದರು.

ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಸೇಫ್ ಆಗಿ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತುಕಾಲಿ ಮಾನಸ, ಉಗ್ರಂ ಮಂಜು, ಅನುಷಾ ರೈ, ಧರ್ಮ ಕೀರ್ತಿರಾಜ್, ಐಶ್ವರ್ಯಾ, ಧನರಾಜ್,‌ ಶಿಶರ್ ಶಾಸ್ತ್ರಿ, ಕ್ಯಾಪ್ಟನ್‌ ಹನುಮಂತ, ಗೋಲ್ಡ್ ಸುರೇಶ್ ನಾಮಿನೇಟ್‌ ಆಗಿದ್ದರು. ಈ ಪೈಕಿ ಭಾನುವಾರ ಒಬ್ಬರು ಮನೆಯಿಂದ ಔಟ್ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11ರ ಐದನೇ ವಾರ ತುಕಾಲಿ ಮಾನಸ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಕಳೆದ ವಾರವೇ ಇವರು ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಕಳೆದ ಕೆಲ ವಾರಗಳಿಂದ ಮಾನಸಾ ವಿರುದ್ಧ ಮನೆಮಂದಿ ಸಾಕಷ್ಟು ದೂರುಗಳನ್ನು ನೀಡಿದ್ದರು. ಇದೇ ಇವರ ಎಲಿಮಿನೇಷನ್​ಗೆ ಕಾರಣವಾಯಿತು ಎನ್ನಲಾಗುತ್ತಿದೆ.

ತನ್ನದಲ್ಲದ ವಿಷಯಗಳಿಗೆ ಮೂಗು ತೂರಿಸಿಕೊಂಡು ಬಂದು ಜಗಳ ಆಡುವುದು, ಇತರರ ಚರ್ಚೆಗಳಲ್ಲಿ ತಾನಾಗಿಯೇ ಭಾಗವಹಿಸಿ ಆ ಚರ್ಚೆಯ ದಿಕ್ಕನ್ನೇ ತಪ್ಪಿಸುವುದು, ಮಾತಾಡುವಾಗ ತಮಗಿಷ್ಟ ಬಂದಂತೆ ಅಗೌರವವಾಗಿ ಮಾತಾಡೋದು, ನಾಲಿಗೆ ಮೇಲೆ ಹಿಡಿತ ಕಡಿಮೆ ಎಂದು ಮಾನಸಾ ವಿರುದ್ಧ ಸ್ಪರ್ಧಿಗಳು ದೂರಿದ್ದರು.

ಅಲ್ಲದೆ ಲಕ್ಷುರಿ ಬಜೆಟ್‌ ಪಾಯಿಂಟ್‌ ಹೋದಾಗ ನಾನು ಏನು ಕನ್ವೇ ಮಾಡೋಕೆ ಹೋಗಿದ್ದೆ ಅಂತ ಎಲ್ಲರಿಗೂ ಗೊತ್ತು. ಆದರೆ, ಮಾನಸಾ ಸುಮ್ಮನೆ ರೇಗಾಡಿದರು. ಗೊಳೋ ಅಂದು ಚಿಕ್ಕ ವಿಚಾರವನ್ನ ದೊಡ್ಡದು ಮಾಡಿದರು. ಸಂಬಂಧ ಪಡದ ನಾಮಿನೇಷನ್ ವಿಚಾರಕ್ಕೆ ಮೂಗು ತೂರಿಸಿದ್ದಾರೆ ಎಂದು ಉಗ್ರಂ ಮಂಜು ಹೇಳಿದ್ದರು. ಯೋಗರಾಜ್‌ ಭಟ್‌ ಬಂದಾಗ ಮಾನಸಾ ಅವರಿಗೆ ಮಾತಾಡುವ ರೀತಿಯನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ತಿದ್ದಿಕೊಳ್ಳೋದಾದರೆ ತಿದ್ದಿಕೊಳ್ಳಿ ಎಂದು ಸಲಹೆ ಕೂಡ ನೀಡಿದ್ದರು.

BBK 11: ಮನಸ್ಸು ಭಾರವಾಗಿದ್ರೂ ಜವಾಬ್ದಾರಿ ನಿಭಾಯಿಸೋಕೆ ಹಾಜರಾದ ಕಿಚ್ಚ ಸುದೀಪ್