Wednesday, 11th December 2024

Kichcha Sudeep: ಸುದೀಪ್ ಬಿಗ್ ಬಾಸ್​ನಿಂದ ಹೊರ ಬರಲು ಇದೇ ಕಾರಣ?: ಇಂದು ರಿವೀಲ್ ಆಗಲಿದೆ ಬಿಗ್ ನ್ಯೂಸ್

Kichcha Sudeep BBK 11

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿದೆ ಎರಡು ವಾರಗಳು ಕಳೆದಿವೆ. ಆದರೆ, ಸೀಸನ್ 11 ಆರಂಭವಾಗಿನಿಂದ ಈ ಕಾರ್ಯಕ್ರಮಕ್ಕೆ ಒಂದೊಂದೆ ವಿಘ್ನಗಳು ಬರುತ್ತಿವೆ. ಸ್ವರ್ಗ ಮತ್ತು ನರಕ ಎಂಬ ವಿಶೇಷ ಕಾನ್ಸೆಪ್ಟ್​ನಲ್ಲಿ ಶುರುವಾದ ಶೋ ಬಗ್ಗೆ ಇತ್ತೀಚೆಗಷ್ಟೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಹೋಗಿತ್ತು. ನರಕದಲ್ಲಿ ಮಹಿಳೆಯರ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರು ದಾಖಲಾಗಿತ್ತು. ಬಳಿಕ ಕಿಚ್ಚ ಸುದೀಪ್ ಅವರು ನರಕದಲ್ಲಿ ವಾಸಿಸುತ್ತಿದ್ದ ಸ್ಪರ್ಧಿಗಳಿಂದಲೇ ಈ ಬಗ್ಗೆ ಸ್ಪಷ್ಟನೆ ಕೊಟ್ಟರು.

ಇದರ ನಡುವೆ ಸುದೀಪ್ ಅವರು ಇದು ನನ್ನ ಕೊನೆಯ ಬಿಗ್ ಬಾಸ್ ಸೀಸನ್. ಇನ್ಮುಂದೆ ಶೋ ನಡೆಸಿಕೊಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಾಂಬ್ ಸಿಡಿಸಿದ್ದಾರೆ. ಇಂದು ದೊಡ್ಡ ವಿಚಾರ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.

ರೂಪೇಶ್ ರಾಜಣ್ಣ ಟ್ವೀಟ್​ನಲ್ಲಿ ಏನಿದೆ?:

‘‘ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ. ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ’’ ಎಂದು ಭಾನುವಾರ ಟ್ವೀಟ್ ಮಾಡಿ ಚಕ್ರವರ್ತಿ ಚಂದ್ರಚೂಡ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಸುದೀಪ್‌ ಟ್ವೀಟ್​ನಲ್ಲಿ ಏನಿದೆ?:

‘‘ಬಿಗ್‌ಬಾಸ್‌ ಕನ್ನಡ 11ಕ್ಕೆ ನೀವು ತೋರಿದ ಪ್ರೀತಿಗೆ ಧನ್ಯವಾದ. ಈ ಶೋಗೆ ಬಂದ ಟಿಆರ್‌ಪಿ ನೋಡಿದ ಮೇಲೆ ಗೊತ್ತಾಗುತ್ತದೆ, ಈ ಶೋ ಮೇಲೆ ಮತ್ತು ನನ್ನ ಮೇಲೆ ನೀವೆಷ್ಟು ಪ್ರೀತಿ ಇಟ್ಟುಕೊಂಡಿದ್ದೀರೆಂದು. ಕಳೆದ 10 ಪ್ಲಸ್‌ 1 ವರ್ಷದಿಂದ ಬಿಗ್‌ಬಾಸ್‌ ಜತೆಗೆ ನಾನೂ ಪ್ರಯಾಣಿಸುತ್ತ ಬಂದಿದ್ದೇನೆ. ಆದರೆ, ಈಗ ನಾನು ಇದರಿಂದ ಹೊರಬರಬೇಕಿದೆ. ಇದೇ ನನ್ನ ಕೊನೆಯ ಬಿಗ್‌ಬಾಸ್‌. ಈ ನನ್ನ ನಿರ್ಧಾರವನ್ನು ನನ್ನ ಕಲರ್ಸ್‌ ತಂಡ ಮತ್ತು ಇಷ್ಟು ವರ್ಷಗಳಿಂದ ಬಿಗ್‌ಬಾಸ್‌ ನೋಡುವ ಬಂದ ನೀವೆಲ್ಲರೂ ಗೌರವಿಸುತ್ತೀರಿ ಎಂದುಕೊಂಡಿದ್ದೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ. ನಾನು ಕೂಡ ನಿಮ್ಮೆಲ್ಲರನ್ನು ರಂಜಿಸುತ್ತೇನೆ’’ ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಸುದೀಪ್ ಬಿಗ್ ಬಾಸ್ ತೊರೆಯಲು ಏನು ಕಾರಣ?:

ರೂಪೇಶ್‌ ರಾಜಣ್ಣ ಮತ್ತು ಕಿಚ್ಚ ಸುದೀಪ್ ಹೀಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ಬಿಗ್‌ ಬಾಸ್‌ ವೀಕ್ಷಕರು ಮತ್ತು ಸುದೀಪ್‌ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ. ಸುದೀಪ್ ಅವರು ಮನಸಾರೆ ಈ ಕಾರ್ಯಕ್ರಮದಿಂದ ಹೊರ ಬಂದಿದ್ದು ಅಲ್ಲ, ಅಲ್ಲೇನೋ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಸಲಿ ಕಥೆ ಏನು?, ರೂಪೇಶ್ ರಾಜಣ್ಣ ಏನು ಹೇಳಬಹುದು ಎಂಬುದು ಕುತೂಹಲ ಮೂಡಿಸಿದೆ. ಇದರ ನಡುವೆ ಸುದೀಪ್ ಅವರು ಮುಂದಿನ ಯೋಜನೆಗಳಿಗೆ ಸಮಯ ಕೊಡಬೇಕಾದ ಕಾಲ, ಇವರು ಸಂಪೂರ್ಣವಾಗಿ ಸಿನಿಮಾ ಕಡೆ ಗಮನ ಹರಿಸಲಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

BBK 11: ಧರ್ಮನಿಗಾಗಿ ಐಶ್ವರ್ಯ-ಅನುಷಾ ನಡುವೆ ವಾರ್?: ಸೂಪರ್ ಸಂಡೇ ಎಪಿಸೋಡ್​ನಲ್ಲಿ ತ್ರಿಕೋನ ಪ್ರೇಮಕಥೆಯ ಚರ್ಚೆ