Saturday, 14th December 2024

ಚಿತ್ರೀಕರಣ ಮುಗಿಸಿದ ಬೆಲ್ ಬಾಟಂ

ಮುಂಬೈ: ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಂ ಚಿತ್ರ ದಾಖಲೆಯೊಂದನ್ನು ನಿರ್ಮಿಸಿದೆ.

ಕಳೆದ ಆಗಸ್ಟ್’ನಲ್ಲಿ ಆರಂಭವಾದ ಚಿತ್ರದ ಶೂಟಿಂಗ್ ನಿನ್ನೆ (ಸೆಪ್ಟೆಂಬರ್ 30) ಮುಕ್ತಾಯ ಕಂಡಿದೆ. ಚಿತ್ರದ ಶೂಟಿಂಗ್ ಸ್ಕಾಟ್ಲೆಂಡ್ ನಲ್ಲಿ ನಡೆದಿದೆ. ಇದೇ ಮೊದಲ ಅಕ್ಷಯ್ ಕುಮಾರ್ ಈ ಚಿತ್ರಕ್ಕಾಗಿ ರೂಲ್ಸ್’ವೊಂದನ್ನು ಬ್ರೇಕ್ ಮಾಡಿದ್ದಾರೆ. ಎಲ್ಲೆಡೆ ಕೊರೋನಾ ವೈರಸ್ ಭೀತಿಯಿದ್ದ ಕಾರಣ, ಅಲ್ಪ ಅವಧಿಯಲ್ಲಿ ಚಿತ್ರೀಕರಣ ಮುಗಿಸಿದ್ದು, ಚಿತ್ರತಂಡಕ್ಕೆ ಮರೆಯಲಾರದ ಅನುಭವವಾಗಿದೆ.

ಸಾಮಾನ್ಯವಾಗಿ ಯಾವುದೇ ಚಿತ್ರೀಕರಣ ಆರಂಭಗೊಂಡು, ಅದನ್ನು ಇಂತಿಷ್ಟೇ ಸಮಯದಲ್ಲಿ ಮುಗಿಸಬೇಕೆನ್ನುವುದನ್ನು ಮುಂಗಡವಾಗಿ ದಿನ ಫಿಕ್ಸ್ ಮಾಡಿ, ಮುಗಿಸಿದ್ದು, ವಿಶ್ವದಲ್ಲೇ ದಾಖಲೆಯಾಗಿದೆ. ಈ ವಿಚಾರದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವರು ಸಂಪೂರ್ಣ ಸಾಥ್ ನೀಡಿದ್ದರು ಎಂದು ಅಕ್ಕಿ ನೆನಪಿಸಿಕೊಂಡರು.

ಹಾಲಿವುಡ್ ಚಿತ್ರಗಳಾದ ಟಾಮ್ ಕ್ರೂಯಿಸ್ ಮಿಶನ್: ಇಂಪಾಸಿಬಲ್ 7 ಮತ್ತು ಜುರಾಸಿಕ್ ಪಾರ್ಕ್ ಚಿತ್ರಗಳ ಚಿತ್ರೀಕರಣ ಆರಂಭಗೊಂಡಿದ್ದರೂ ಕೋವಿಡ್ ನಿಂದಾಗಿ ಮುಂದುವರಿದಿಲ್ಲ. ಈ ನಿಟ್ಟಿನಲ್ಲಿ ಬೆಲ್ ಬಾಟಂ ಚಿತ್ರೀಕರಣ ತಂಡದ ಶ್ರಮವನ್ನು ಶ್ಲಾಘಿಸಬೇಕು. ಚಿತ್ರವನ್ನು ವಶು ಭಗ್ನಾನಿ, ಜಕ್ಕಿ ಭಗ್ನಾನಿ, ದೀಪ್ಶಿಕಾ ದೇಶಮುಖ್, ಮೊನಿಶಾ ಅಡ್ವಾಣಿ, ಮಧು ಬೋಜ್ವಾನಿ ಮತ್ತು ನಿಕ್ಕಿ ಅಡ್ವಾಣಿ ನಿರ್ಮಿಸಿದ್ದು, ಅಸೀಮ್ ಅರೋರಾ ಮತ್ತು ಪರ್ವೇಜ್ ಶೇಖ್ ಚಿತ್ರಕಥೆ ಬರೆದಿದ್ದಾರೆ.  ಏಪ್ರಿಲ್ 2, 2021ರಲ್ಲಿ ಚಿತ್ರ ತೆರೆ ಕಾಣಲಿದೆ.