Friday, 13th December 2024

BBK 11: ಇವಳತ್ರ ಎಂಥ ಪಾಸಿಟಿವಿಟಿ ಇದೆ?: ಗೌತಮಿ ಹೇಳಿಕೆಗೆ ರೊಚ್ಚಿಗೆದ್ದ ಭವ್ಯಾ

Bhavya Gowda and Gowthami

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss kannada 11) ಕಳೆದ ಎರಡು ವಾರಗಳಿಂದ ರೋಚಕತೆ ಸೃಷ್ಟಿಸುತ್ತಿದೆ. ಮನೆಯೊಳಗೆ ಟಾಸ್ಕ್​ನ ಕಾವು ಏರುತ್ತಿದ್ದು, ಎಲ್ಲರೂ ತಮ್ಮ ತಮ್ಮ ಮೈಂಡ್ ಗೇಮ್ ಶುರುಮಾಡಿಕೊಂಡಿದ್ದಾರೆ. ಸದ್ಯ ದೊಡ್ಮನೆಯಲ್ಲಿ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಅಂತಿಮವಾಗಿ ಇಬ್ಬರು ಆಯ್ಕೆಯಾಗಿದ್ದು, ತ್ರಿವಿಕ್ರಮ್ ಮತ್ತು ಭವ್ಯಾ ಗೌಡಾ ಇದ್ದಾರೆ. ಇವರ ಪೈಕಿ ಒಬ್ಬರು ಕ್ಯಾಪ್ಟನ್ ಆಗೋದು ಪಕ್ಕಾ ಆಗಿದೆ. ಆದರೆ, ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿ ಬಿಗ್ ಬಾಸ್ ಟ್ವಿಸ್ಟ್ ನೀಡಿದ್ದಾರೆ.

ಬಿಗ್ ಬಾಸ್ ಈ ಬಾರಿ ಕ್ಯಾಪ್ಟನ್ಸಿಗೆ ಟಾಸ್ಕ್ ನೀಡುತ್ತಿಲ್ಲ. ಬದಲಿಗೆ ಭವ್ಯಾ ಮತ್ತು ತ್ರಿವಿಕ್ರಮ್​ ಅವರ ಪೈಕಿ, ಮುಂದಿನ ಕ್ಯಾಪ್ಟನ್​​ ಆರಿಸಲು ಉಳಿದ ಮನೆಮಂದಿಗೆ ಟಾಸ್ಕ್​​ ನೀಡಿದ್ದಾರೆ. ಮನೆ ಮಂದಿ ಓಡಿ ಹೋಗಿ ಬ್ಲ್ಯಾಕ್​ ಕಲರ್ ಬಾಟಲ್​​​ ತೆಗೆದುಕೊಳ್ಳಬೇಕಿದೆ. ಕಲರ್​ ಬಾಟಲ್​ ತೆಗೆದುಕೊಂಡವರಿಗೆ, ಮುಂದಿನ ಕ್ಯಾಪ್ಟನ್ ಲಿಸ್ಟ್​​ನಿಂದ ಓರ್ವರನ್ನು ಹೊರಗಿಡುವ ಅವಕಾಶ ಸಿಗಲಿದೆ.

ಭವ್ಯಾ ಹಾಗೂ ತ್ರಿವಿಕ್ರಮ್ ಪೈಕಿ ಒಬ್ಬರನ್ನು ಸೂಕ್ತ ಕಾರಣ ನೀಡಿ ಆಯ್ಕೆ ಮಾಡುವಂತೆ ಮನೆ ಮಂದಿಗೆಯೇ ಆಯ್ಕೆ ನೀಡಲಾಗಿದೆ. ಹೆಚ್ಚಿನವರು ಭವ್ಯಾ ಕ್ಯಾಪ್ಟನ್ ಆಗಲು ಸೂಕ್ತವಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಕಾರಣಗಳನ್ನು ಒಪ್ಪಿಕೊಳ್ಳದ ಭವ್ಯಾ ಗೌಡ ಮುಖ್ಯವಾಗಿ ಗೌತಮಿ ಕೊಟ್ಟ ಕಾರಣದಿಂದ ರೊಚ್ಚಿಗೆದ್ದಿದ್ದಾರೆ.

ಭವ್ಯಾ ನನಗೆ ಬಹಳಷ್ಟು ಜಾಗದಲ್ಲಿ ಪಕ್ಷಪಾತ ಮಾಡುವವರಾಗಿ ಕಾಣಿಸಿದ್ದಾರೆ. ಅವರು ಆಡಿರುವ ಕೆಲವೊಂದು ಪದಗಳನ್ನು ನನಗೆ ತಡೆದುಕೊಳ್ಳುವ ಶಕ್ತಿ ಇಲ್ಲ ಎಂದು ಗೌತಮಿ ಹೇಳಿದ್ದಾರೆ. ಗೌತಮಿ ಮಾತಿಗೆ ಕೋಪಗೊಂಡ ಭವ್ಯಾ ಈ ಆ್ಯಕ್ಟಿವಿಟಿ ಮುಗಿದ ಬಳಿಕ, ತಡೆದುಕೊಳ್ಳುವ ಶಕ್ತಿ ಇಲ್ಲ ಅಂದಮೇಲೆ ಈ ಮನೆ ಯಾಕೆ ಬೇಕು? ಇವಳತ್ರ ಎಂತಹ ಪಾಸಿಟಿವಿಟಿ ಇದೆ? ನಾನು ಎಲ್ಲರಿಗಿಂತ ಬೆಟರ್ ಆಗಿದ್ದೀನಿ. ಅವರಿಗವರೇ ಸುಪೀರಿಯರ್ ಅಂದ್ಕೊಂಡ್ರೆ, ನಾನು ಡಬಲ್ ಸುಪೀರಿಯರ್ ಎಂದು ಗುಡುಗಿದ್ದಾರೆ.

ಇನ್ನು ಈ ವಾರ ಮನೆಯಿಂದ ಹೊರಹೋಗಲು ಏಳು ಸರ್ಧಿಗಳು ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಧರ್ಮಾ ಕೀರ್ತಿರಾಜ್, ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಅವರು ನಾಮಿನೇಟ್​ ಆಗಿದ್ದಾರೆ.

BBK 11: ಮತ್ತೆ ಸೈಲೆಂಟ್ ಆದ ಧರ್ಮಾ ಕೀರ್ತಿರಾಜ್: ಈ ಬಾರಿಯೂ ತಪ್ಪಿದ ಕ್ಯಾಪ್ಟನ್ಸಿ