ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss kannada 11) ಸಾಕಷ್ಟು ರೋಚಕತೆ ಸೃಷ್ಟಿಸುತ್ತದೆ. ಈ ವಾರ ಎರಡು ಗುಂಪುಗಳಾಗಿ ಆಡಿದ ಟಾಸ್ಕ್ನಲ್ಲಿ ತ್ರಿವಿಕ್ರಮ್ ತಂಡ ಗೆದ್ದು ಬೀಗಿದೆ. ಎಲ್ಲ ಟಾಸ್ಕ್ಗಳು ಮುಕ್ತಾಯಗೊಂಡಿದ್ದು, ನಾಮಿನೇಷನ್ ಪ್ರಕ್ರಿಯೆ ಕೂಡ ಅಂತಿಮ ಹಂತದಲ್ಲಿದೆ. ಕೊನೆಯ ಟಾಸ್ಕ್ನಲ್ಲಿ ಗೆದ್ದ ರಜತ್ ಕಿಶನ್ ಟೀಂ ತಮ್ಮ ತಂಡದಲ್ಲಿ ನಾಮಿನೇಟ್ ಆಗಿರುವ ಓರ್ವ ಸ್ಪರ್ಧಿಯನ್ನು ಸೇವ್ ಮಾಡುವ ಅವಕಾಶ ಪಡೆದುಕೊಂಡಿದೆ. ಇದರ ನಡುವೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಟಾಸ್ಕ್ ನೀಡಿದ್ದಾರೆ.
ಪಕ್ಷಪಾತಿ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅಶಕ್ತ, ಜನ ನಿರ್ವಹಣೆಯಲ್ಲಿ ಅಶಕ್ತ – ಹೀಗೆ ನಾಲ್ಕು ಶೀರ್ಷಿಕೆಯ ಬೋರ್ಡ್ಗಳನ್ನು ಗಾರ್ಡನ್ ಏರಿಯಾದಲ್ಲಿ ಇಡಲಾಗಿದೆ. ಇದಕ್ಕೆ ಸೂಕ್ತ ಎನಿಸುವವರ ಹೆಸರನ್ನು ಸ್ಪರ್ಧಿಗಳು ಸೂಚಿಸಿ, ಅದಕ್ಕೆ ಸೂಕ್ತ ಕಾರಣಗಳನ್ನು ಕೊಟ್ಟು, ಅವರನ್ನು ಸ್ವಿಮ್ಮಿಂಗ್ ಪೂಲ್ಗೆ ದೂಡಬೇಕೆಂದು ಬಿಗ್ ಬಾಸ್ ಸೂಚಿಸಿದ್ದಾರೆ. ಈ ಟಾಸ್ಕ್ ವೇಳೆ ಭವ್ಯಾ ಗೌಡ ಕೆರಳಿ ಕೆಂಡವಾಗಿದ್ದಾರೆ.
ಮೋಕ್ಷಿತಾ ಪೈ ಕೊಟ್ಟ ಕಾರಣ ಕೇಳಿ ಭವ್ಯಾ ಕೆಂಡಾಮಂಡಲರಾಗಿದ್ದಾರೆ. ಭವ್ಯ ಅವರು ಎಲ್ಲರ ಜತೆ ಹೊಂದಿಕೊಳ್ಳಲ್ಲ. ತ್ರಿವಿಕ್ರಮ್ ಜತೆನೇ ಇರುತ್ತೀರಾ. ತುಂಬಾ ಉಡಾಫೆಯಾಗಿ ಮಾತನಾಡುತ್ತೀರಾ ಎಂದು ಮೋಕ್ಚಿತಾ ಹೇಳಿದ್ದಾರೆ. ಮೋಕ್ಷಿತಾ ಪ್ರತಿ ಮಾತಿಗೂ ಭವ್ಯಾ ಗೌಡ ತಿರುಗೇಟು ನೀಡಿದ್ದಾರೆ. ನಾನು ಎಲ್ಲರ ಬಳಿ ಹೋಗಿ ಕಷ್ಟ-ಸುಖ ಹೇಳಬೇಕಿಲ್ಲ. ಹೌದು ನಾನು ಕಂಫರ್ಟೆಬಲ್ ವಿತ್ ತ್ರಿವಿಕ್ರಮ್. ಅಂದ ತಕ್ಷಣ ನನ್ನ ಆಟವನ್ನೆಲ್ಲ ತ್ರಿವಿಕ್ರಮ್ ಆಡುತ್ತಿಲ್ಲ. ನಾನು ಈ ಮನೆಗೆ ಸಂಬಂಧಗಳನ್ನು ಬೆಳೆಸಲು ಬಂದಿಲ್ಲ. ಯಾರ ಬಳಿ ಕೂಡ ಸರ್ಟಿಫಿಕೇಟ್ ಬೇಕಿಲ್ಲ ಎಂದು ಭವ್ಯಾ ಗೌಡ ಕೋಪಗೊಂಡಿದ್ದಾರೆ.
ಮನೆಯವರ ಕಣ್ಣು ಕೆಂಪಾಗಿಸ್ತಾ ಕಂಫರ್ಟ್ ಜೋನ್?
— Colors Kannada (@ColorsKannada) December 19, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/tH6j9Vazbx
ಅತ್ತ ರಜತ್ ಕಿಶನ್ ಅವರು ಮಂಜು ಹೆಸರು ತೆಗೆದುಕೊಂಡಿದ್ದಾರೆ. ನನ್ನಿಂದಲೇ ಈ ಟಾಸ್ಕ್ ಗೆಲ್ತು. ನನ್ನಿಂದಲೇ ಈ ಆಟ ಗೆದ್ದರು ಅಂದುಕೊಳ್ಳುವ ಚೀಪ್ ಮೆಂಟಾಲಿಟಿ ಮಂಜಣ್ಣನದ್ದು ಎಂದು ಹೇಳಿದ್ದಾರೆ. ರಜತ್ ಮಾತು ಕೇಳಿ ಸಿಟ್ಟಾದ ಮಂಜು, ನಾನು ಮಾಡಿರೋ ಕೆಲಸನಾ ನಾನೇ ಹೇಳಿಕೊಳ್ಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ರು. ಬಳಿಕ ಮಂಜಣ್ಣನನ್ನು ರಜತ್ ನೀರಿಗೆ ತಳ್ಳಿದ್ದಾರೆ.
BBK 11: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಸದ್ದು ಮಾಡಿದ ಮೋಕ್ಷಿತಾ-ಗೌತಮಿ-ಮಂಜು ವಿಚಾರ: ನೀರಿಗೆ ತಳ್ಳಿದ್ದು ಯಾರನ್ನು?