Friday, 13th December 2024

BBK 11: ಎಲಿಮಿನೇಟ್ ಆದ ಭವ್ಯಾ ಪುನಃ ಬಿಗ್ ಬಾಸ್ ಮನೆಯೊಳಗೆ ಬರಲು ಕಾರಣವೇನು?

Bhavya Gowda Eliminate

ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಆರನೇ ವಾರದ ಪಂಚಾಯಿತಿ ಸಾಕಷ್ಟು ವಿಶೇಷವಾಗಿತ್ತು. ಅದರಲ್ಲೂ ಭಾನುವಾರದ ಸೂಪರ್ ಸಂಡೇ ಎಪಿಸೋಡ್​ನಲ್ಲಿ ಸ್ಪರ್ಧಿಗಳು ಮನಸ್ಪೂರ್ವಕವಾಗಿ ನಕ್ಕು ನಕ್ಕು ಸುಸ್ತಾದರು. ಕೊನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಕಿಚ್ಚ ಸುದೀಪ್ ಅವರು ಭವ್ಯಾ ಗೌಡ ಈ ವಾರ ಮನೆಯಿಂದ ಹೊರ ಹೋಗುವ ಸ್ಪರ್ಧಿ ಎಂದು ಘೋಷಣೆ ಮಾಡಿದರು. ಆದರೆ, ಇದರಲ್ಲೊಂದು ಟ್ವಿಸ್ಟ್ ನೀಡಿದ್ದರು ಬಿಗ್ ಬಾಸ್.

ಆರನೇ ವಾರ ದೊಡ್ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದರು. ಎಲ್ಲರೂ ಬಲಿಷ್ಠ ಸ್ಪರ್ಧಿಗಳೇ. ಧರ್ಮಾ ಕೀರ್ತಿರಾಜ್, ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಅವರು ನಾಮಿನೇಟ್​ ಆಗಿದ್ದರು. ಇದರಲ್ಲಿ ಧನರಾಜ್ ಆಚಾರ್ ಹಾಗೂ ಭವ್ಯಾ ಗೌಡ ಬಾಟಮ್ ಎರಡಕ್ಕೆ ಬಂದು ಡೇಂಜರ್​ಝೋನ್​ನಲ್ಲಿದ್ದರು.

ಕೊನೆಯ ಇಬ್ಬರು ಸ್ಪರ್ಧಿಗಳಾದ ಭವ್ಯಾ ಹಾಗೂ ಧನರಾಜ್ ಅವರ ಲಗೇಜ್ ಪ್ಯಾಕ್ ಮಾಡಿಕೊಂಡು ಬರಲು ಸುದೀಪ್ ಹೇಳಿದರು. ಎಲಿಮಿನೇಷನ್​ನಲ್ಲಿ ಭವ್ಯಾ ಹೆಸರು ಬರುತ್ತದೆ ಎಂದು ಯಾರೂ ಊಹಿರಲಿಲ್ಲ. ಇನ್ನೇನು ಭವ್ಯಾ ಅವರು ಬಿಗ್ ಬಾಸ್​ ಮನೆಯಿಂದ ಹೊರಗೆ ಬರಬೇಕು ಎಂಬಷ್ಟರಲ್ಲಿ ಒಂದು ಟ್ವಿಸ್ಟ್​ ನೀಡಲಾಯಿತು.

‘ಭವ್ಯ ಅವರೇ.. ಈ ವಾರ ಈ ಮನೆಯಲ್ಲಿ ನಿಮ್ಮ ಪಯಣ ಮುಂದುವರಿಯುತ್ತದೆ’ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು. ಆದರೆ, ಈ ಒಂದು ಪಿಂಚ್ ಬೇಕಿತ್ತು ಭವ್ಯಾ ಅವರಿಗೆ ಎಂದು ಸುದೀಪ್ ಹೇಳಿದ್ದಾರೆ. ಯಾವ ಸ್ಪರ್ಧಿಯೂ ಮನೆಯಿಂದ ಹೊರಹೋಗವುದಿಲ್ಲ ಎಂದು ವೀಕ್ಷಕರಿಗೆ ಮೊದಲೇ ತಿಳಿದಿತ್ತು. ಅಂದರೆ, ಈ ವಾರ ನೋ ಎಲಿಮಿನೇಷನ್.

ಕಳೆದ ವಾರ ಗುರುವಾರದ ಸಂಚಿಕೆವರೆಗೂ ಟಾಸ್ಕ್‌ಗಳು ನಡೆದವು. ಟಾಸ್ಕ್‌ಗಳು ನಾಮಿನೇಷನ್‌ ಮೇಲೂ ಪರಿಣಾಮ ಬೀರಿದ್ದವು. ಆದರೆ, ಈ ವಾರ ವೋಟಿಂಗ್ ಲೈನ್ಸ್ ತೆರೆದಿರುವುದಿಲ್ಲ ಎಂಬ ಸೂಚನೆಯನ್ನ ವೀಕ್ಷಕರಿಗೆ ಬಿಗ್ ಬಾಸ್ ನೀಡಿದ್ದಾರೆ. ಎಲಿಮಿನೇಷನ್ ಇಲ್ಲ ನಿಜ. ಆದರೆ, ಇದರಲ್ಲಿ ಬಿಗ್ ಬಾಸ್ ಏನಾದರು ಟ್ವಿಸ್ಟ್ ನೀಡುತ್ತಾರ ಎಂಬ ಕುತೂಹಲ ಇತ್ತು. ಅಂದರೆ ಫೇಕ್ ಎಲಿಮಿನೇಷನ್‌ ನಡೆಸಿ ಒಬ್ಬರನ್ನು ಸೀಕ್ರೆಟ್‌ ರೂಮ್‌ನಲ್ಲಿ ಬಿಗ್ ಬಾಸ್ ಇಡುತ್ತಾರೆ ಎನ್ನಲಾಗಿತ್ತು. ಆದರೆ, ಅದು ನಡೆಯಲಿಲ್ಲ.

BBK 11: ಹೃದಯವಂತ ಧರ್ಮನಿಗೆ ‘ನಾಲಾಯಕ್’ ಪಟ್ಟ ಕಟ್ಟಿದ ಮನೆಮಂದಿ: ಕಣ್ಣೀರಿಟ್ಟ ಕ್ಯಾಡ್ಬರಿಸ್