Thursday, 12th December 2024

BBK 11: ನಾನಿಲ್ಲಿ ಯಾರನ್ನಾದ್ರು ಸಾಯಿಸಿಯೇ ಹೋಗೋದು: ಬಿಗ್ ಬಾಸ್​ನಲ್ಲಿ ಭವ್ಯಾ ಶಾಕಿಂಗ್ ಸ್ಟೇಟ್ಮೆಂಟ್

Bhavya Gowda

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಏಳನೇ ವಾರದ ಕ್ಯಾಪ್ಟನ್ ಆಗಿ ತ್ರಿವಿಕ್ರಮ್ ಆಯ್ಕೆ ಆಗಿದ್ದಾರೆ. ಇವರ ಜೊತೆ ಭವ್ಯಾ ಗೌಡ ಕ್ಯಾಪ್ಟನ್ ರೇಸ್​ನಲ್ಲಿದ್ದರು. ಕ್ಯಾಪ್ಟನ್ಸಿ ಆಯ್ಕೆಗೆ ಸೆಲೆಕ್ಟ್ ಆದ ಏಳು ಮಂದಿಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಇಬ್ಬರು ಮಾತ್ರ ಕೊನೆಯಲ್ಲಿ ಉಳಿದುಕೊಂಡಿದ್ದರು. ಆದರೆ, ಅಂತಿಮವಾಗಿ ತ್ರಿವಿಕ್ರಮ್ ನಾಯಕರಾಗಿ ಆಯ್ಕೆ ಆಗಿದ್ದಾರೆ.

ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿ ಬಿಗ್ ಬಾಸ್ ಟ್ವಿಸ್ಟ್ ನೀಡಿದರು. ಭವ್ಯಾ ಮತ್ತು ತ್ರಿವಿಕ್ರಮ್​ ಅವರ ಪೈಕಿ, ಮುಂದಿನ ಕ್ಯಾಪ್ಟನ್​​ ಆರಿಸಲು ಉಳಿದ ಮನೆಮಂದಿಗೆ ಟಾಸ್ಕ್​​ ನೀಡಿದರು. ಮನೆ ಮಂದಿ ಓಡಿ ಹೋಗಿ ಬ್ಲ್ಯಾಕ್​ ಕಲರ್ ಬಾಟಲ್​​​ ತೆಗೆದುಕೊಳ್ಳಬೇಕಿದೆ. ಕಲರ್​ ಬಾಟಲ್​ ತೆಗೆದುಕೊಂಡವರಿಗೆ, ಮುಂದಿನ ಕ್ಯಾಪ್ಟನ್ ಲಿಸ್ಟ್​​ನಿಂದ ಓರ್ವರನ್ನು ಹೊರಗಿಡುವ ಅವಕಾಶ ಸಿಗಲಿದೆ.

ಹೆಚ್ಚಿನವರು ಭವ್ಯಾ ಕ್ಯಾಪ್ಟನ್ ಆಗಲು ಸೂಕ್ತವಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 2 ಬಾರಿ ಮಂಜು, ಗೌತಮಿ, ಧರ್ಮ ಕೀರ್ತಿರಾಜ್ ಅವರು ಭವ್ಯಾ ಕ್ಯಾಪ್ಟನ್​ ಆಗುವುದು ಬೇಡ ಎಂದು ಅವರ ಭಾವಚಿತ್ರಕ್ಕೆ ಮಸಿ ಬಳೆದಿದ್ದರು. ಅದರಂತೆ ಭವ್ಯಾ ಅವರ ಬೋರ್ಡ್​ಗೆ ಅತಿ ಹೆಚ್ಚು ಮಸಿ ಬೆಳೆದಿದ್ದರಿಂದ ಅವರು ಔಟ್​ ಆದರು.

ಇತರೆ ಸ್ಪರ್ಧಿಗಳು ನೀಡಿದ ಕಾರಣಗಳನ್ನು ಒಪ್ಪಿಕೊಳ್ಳದ ಭವ್ಯಾ ಗೌಡ ಬೇಸರದಲ್ಲಿ ಕಣ್ಣೀರಿಟ್ಟಿದ್ದಾರೆ ಜೊತೆಗೆ ಕೋಪ ಕೂಡ ಮಾಡಿಕೊಂಡಿದ್ದಾರೆ. ಹೊರಗೆ ಎರಡ್ಮೂರು ಪ್ರಾಜೆಕ್ಟ್​ ಇತ್ತು, ಮಾಡ್ಕೊಂಡು ಇದ್ದಿದ್ರೆ ಬರುತ್ತಿತ್ತು. ಈ ವಾರ ಆ್ಯಕ್ಟಿವ್ ಆಗಿದ್ದಕ್ಕೆ ಇಕ್ಕುಸ್​ಕೊಳ್ತಾ ಇದ್ದೇನೆ. ನಾನು ಹೋಗುವಷ್ಟರಲ್ಲಿ ಯಾರಾನ್ನಾದ್ರು ಸಾಯಿಸಿಯೇ ಹೋಗೋದು.. ಅಂದ್ರೆ ಮಾನಸಿಕವಾಗಿ ಎಂದು ಭವ್ಯಾ ಗೌಡ ಹೇಳಿದ್ದಾರೆ.

ಮುಖ್ಯವಾಗಿ ಗೌತಮಿ ಕೊಟ್ಟ ಕಾರಣ ಭವ್ಯಾಗೆ ನೋವು ತರಿಸಿದೆ. ಭವ್ಯಾ ನನಗೆ ಬಹಳಷ್ಟು ಜಾಗದಲ್ಲಿ ಪಕ್ಷಪಾತ ಮಾಡುವವರಾಗಿ ಕಾಣಿಸಿದ್ದಾರೆ. ಅವರು ಆಡಿರುವ ಕೆಲವೊಂದು ಪದಗಳನ್ನು ನನಗೆ ತಡೆದುಕೊಳ್ಳುವ ಶಕ್ತಿ ಇಲ್ಲ ಎಂದು ಗೌತಮಿ ಹೇಳಿದ್ದಾರೆ. ಈ ಆ್ಯಕ್ಟಿವಿಟಿ ಮುಗಿದ ಬಳಿಕ ಭವ್ಯಾ ಅವರು, ತಡೆದುಕೊಳ್ಳುವ ಶಕ್ತಿ ಇಲ್ಲ ಅಂದಮೇಲೆ ಈ ಮನೆ ಯಾಕೆ ಬೇಕು? ನಾನು ಎಲ್ಲರಿಗಿಂತ ಬೆಟರ್ ಆಗಿದ್ದೀನಿ. ಅವರಿಗವರೇ ಸುಪೀರಿಯರ್ ಅಂದ್ಕೊಂಡ್ರೆ, ನಾನು ಡಬಲ್ ಸುಪೀರಿಯರ್. ಇವಳತ್ರ ಎಂತಹ ಪಾಸಿಟಿವಿಟಿ ಇದೆ? ಎಂದು ಹೇಳಿದ್ದಾರೆ.

BBK 11: ಎಲಿಮಿನೇಷನ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ ನೀಡಿದ ಬಿಗ್ ಬಾಸ್: ಈ ವೀಕೆಂಡ್ ಏನಾಗುತ್ತೆ?