Wednesday, 6th November 2024

BBK 11: ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಅವಾಂತರ: ನರಕ ವಾಸಿಗಳ ಜಾಗ ಪೀಸ್ ಪೀಸ್

BBK House

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ರೋಚಕತೆ ಸೃಷ್ಟಿಸುತ್ತಿದೆ. ಸದ್ಯ ಶೋ ಪ್ರಾರಂಭವಾಗಿ ಎರಡು ವಾರ ಆಗುತ್ತಾ ಬಂದಿದ್ದು, ಸಾಕಷ್ಟು ಹೈ-ಡ್ರಾಮ ನಡೆದಿದೆ. ಈ ಬಾರಿಯ ಸೀಸನ್ ಸ್ವರ್ಗ ಮತ್ತು ನರಕ ಎಂಬ ವಿಶೇಷ ಕಾನ್ಸೆಪ್ಟ್​ನಲ್ಲಿ ನಡೆಯುತ್ತಿರುವುದು ನಿಮಗೆ ಗೊತ್ತೇ ಇದೆ. ಸ್ವರ್ಗ ವಾಸಿಗಳಿಗೆ ಎಲ್ಲ ಸೌಕರ್ಯವಿದ್ದರೆ ನರಕವಾಸಿಗಳು ಕಂಬಿಯ ಒಳಗೆ ಇರಬೇಕು. ಆದರೀಗ ಬಿಗ್ ಬಾಸ್ ಮನೆಯಲ್ಲಿ ನರಕದವರು ವಾಸಿಸುವ ಜಾಗವನ್ನು ಪೀಸ್ ಪೀಸ್ ಮಾಡಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಶಾಕಿಂಗ್ ಬೆಳವಣಿಗೆ ಒಂದು ನಡೆದಿದೆ. ಕ್ರೇನ್​ ಮೂಲಕ ಮನೆ ಒಳಗೆ ಮುಸುಕಿ ಹಾಕಿ ಕೆಲ ದಾಂಡಿಗರು ಎಂಟ್ರಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲ, ಮನೆಯ ಒಳಗೆ ಬಂದ ಅವರು ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿದ್ದಾರೆ. ಏಕಾಏಕಿ ಬಿಗ್‌ ಬಾಸ್‌ ಮನೆಯಲ್ಲಿ ಏಮರ್ಜನ್ಸಿ ಸೈರನ್‌ ಆನ್ ಆಗಿದೆ. ಇದರಿಂದ ಸ್ಪರ್ಧಿಗಳು ಭಯಭೀತರಾಗಿದ್ದಾರೆ. ಬಿಗ್‌ ಬಾಸ್‌ ನರಕದ ಮನೆಯನ್ನು ಹೊಡೆದುರುಳಿಸಿದ್ದಾರೆ.

ನರಕದಲ್ಲಿದ್ದ ಕುರ್ಚಿಗಳನ್ನು ಎಲ್ಲ ಒಡೆದು ಹಾಕಿದ್ದಾರೆ. ಮಾತ್ರವಲ್ಲ ಇರುವ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಬಿಗ್‌ ಬಾಸ್‌. ನರಕದ ಮನೆ ಇದ್ದ ಗೋಡೆಯನ್ನು ಕೂಡ ಮುರಿದು ಹಾಕಲಾಗಿದೆ. ಮೇಲ್ನೋಟಕ್ಕೆ ಸ್ವರ್ಗ ಹಾಗೂ ನರಕದ ಕಾನ್‌ಸೆಪ್ಟ್‌ ಇಂದಿಗೆ ಮುಗಿದಿರುವಂತೆ ಕಾಣುತ್ತಿದೆ. ಇನ್ಮುಂದೆ ಎಲ್ಲ ಸ್ಪರ್ಧಿಗಳು ಒಟ್ಟಾಗಿ ಮನೆಯಲ್ಲಿ ವಾಸಿಸಲಿದ್ದಾರೆ. ಮುಂದಿನ ವಾರದಿಂದ ಹೊಸ ಆಟ ಶುರುವಾಗಲಿದೆ.

ಅಳುತ್ತಾ ನರಕಕ್ಕೆ ಹೋದ ಐಶ್ವರ್ಯ:

ಈ ವಾರ ಮೊದಲ ವಾರದ ಕ್ಯಾಪ್ಟನ್ ಆಗಿ ನೇಮಕಗೊಂಡ ಹಂಸ ಅವರು ಸಾಕಷ್ಟು ತಪ್ಪೆಸಗಿದ್ದಾರೆ. ಕ್ಯಾಪ್ಟನ್ ತೆಗೆದುಕೊಂಡ ನಿರ್ಧಾರಗಳು ಮನೆಯವರ ಅಸಮಾಧಾನಕ್ಕೆ ಕಾರಣವಾಗಿದೆ. ಇವರು ಮಾಡಿದ ತಪ್ಪಿನಿಂದಲೇ ಇದೀಗ ಸ್ವರ್ಗದಲ್ಲಿದ್ದ ಐಶ್ವರ್ಯ ನರಕಕ್ಕೆ ಹೋಗಿದ್ದಾರೆ. ಬಿಗ್‌ ಬಾಸ್ ಒಂದು ಟಾಸ್ಕ್‌ ನೀಡಿದ್ದರು. ಆದರೆ ಹಂಸ ಅವರು ಇದನ್ನು ಸರಿಯಾಗಿ ನಿಭಾಹಿಸಿಲ್ಲ. ಸ್ವಾರಿ ಬಿಗ್ ಬಾಸ್, ಬೇಕಿದ್ದರೆ ನನ್ನನ್ನು ನರಕಕ್ಕೆ ಕಳುಹಿಸಿ. ತಪ್ಪು ಮಾಡಿದ್ದು ನಾನು. ಸ್ವರ್ಗದವರನ್ನು ಶಿಕ್ಷಿಸಬೇಡಿ ಎಂದು ರಿಕ್ವಸ್ಟ್‌ ಮಾಡಿದ್ದಾರೆ. ಆದರೆ ಐಶ್ವರ್ಯಾ ಬಿಕ್ಕಿ ಬಿಕ್ಕಿ ಅಳುತ್ತಾ ನರಕದ ಟೀಮ್ ಸೇರಿಕೊಂಡಿದ್ದಾರೆ.

BBK 11: ನಾನು ಕ್ವಿಟ್ ಮಾಡುತ್ತೇನೆ, ನನ್ನಿಂದ ತಪ್ಪಾಗಿದೆ ಎಂದ ಕ್ಯಾಪ್ಟನ್: ಹೊರಗೆ ಕಳುಹಿಸುತ್ತಾರ ಬಿಗ್ ಬಾಸ್?