Tuesday, 10th December 2024

BBK 11: ಮನುಷ್ಯತ್ವ ಮರೆತ ಸ್ಪರ್ಧಿಗಳು: ಬಿಗ್ ಬಾಸ್​ನಿಂದ ಬೇಸರದ ನುಡಿ

BBK 11

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಪಡೆಯುತ್ತಿದೆ. ಟಾಸ್ಕ್​ನ ಕಾವು ಏರುತ್ತಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ ಮನುಷ್ಯತ್ವವನ್ನೇ ಮರೆದು ಮನಬಂದತೆ ಆಡುತ್ತಿದ್ದಾರೆ. ಈ ವಾರ ಮನೆಯಲ್ಲಿ ರಾಜಕೀಯದ ಟಾಸ್ಕ್ ನಡೆಯುತ್ತಿದೆ. ತ್ರಿವಿಕ್ರಮ್-ಐಶ್ವರ್ಯ ನಾಯಕರಾಗಿ ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಲಾಗಿದೆ. ಎಲ್ಲರೂ ರಾಜಕಾರಣಿಗಳ ಅವತಾರ ತಾಳಿದ್ದಾರೆ.

ಆದರೆ, ಟಾಸ್ಕ್ ಎಂದು ಬಂದಾಗ ಮಾತ್ರ ಸ್ಪರ್ಧಿಗಳು ಕ್ರೀಡಾ ಮನೋಭಾವ ಬಿಟ್ಟು ಆಡುತ್ತಿದ್ದಾರೆ. ಅದರಲ್ಲೂ ಪೋಸ್ಟರ್ ರಕ್ಷಿಸುವ ಟಾಸ್ಕ್​​ನಲ್ಲಿ ತ್ರಿವಿಕ್ರಮ್ ಅವರು ಉಗ್ರಂ ಮಂಜು ಅವರನ್ನು ಎತ್ತಿ ಬಿಸಾಕಿದಂತೆ ಕಂಡಿತು. ಅತ್ತ ಐಶ್ವರ್ಯ ಅವರನ್ನು ಹಿಡಿದುಕೊಂಡಿದ್ದ ಗೋಲ್ಡ್ ಸುರೇಶ್ ಮೇಲೆ ಮಂಜು ದಾಳಿ ಮಾಡಿದ್ದು ಅವರಿಗೂ ಪೆಟ್ಟಾಗಿದೆ. ಇದರಿಂದ ಕೋಪಗೊಂಡ ಬಿಗ್ ಬಾಸ್ ಆಟವನ್ನು ಇಲ್ಲಿಗೇ ನಿಲ್ಲಿಸಿ ಎಂದು ಗರಂ ಆಗಿದ್ದಾರೆ.

“ರಾಜಕೀಯ ಮಾಡಲು ಬೇಕಿರುವುದು ತಂತ್ರಗಳು, ಷಡ್ಯಂತ್ರಗಳು ಮತ್ತು ನಿಮ್ಮ ಯುಕ್ತಿಯ ಮೇಲೆಯೇ ಅವಲಂಭಿಸಿರುವ ಆಟ. ಅಂತೆಯೇ, ಈ ಮನೆಯೊಳಗೆ ಎರಡು ಪಕ್ಷಗಳಾಗಿರುವ ನೀವು ಆಟವನ್ನು ಆಡಲು ಹಿಡಿದ ದಾರಿಯೇ ಕೊಂಚ ತಪ್ಪಿದೆ. ಹೆಚ್ಚಾಗಿ ದೈಹಿಕ ಬಲದ ಪ್ರದರ್ಶನಕ್ಕೆ ಒತ್ತು ನೀಡಿದ್ದೀರಿ. ಆಡುವವರ ಮನದಲ್ಲಿ ಛಲ, ಆಕ್ರೋಶ ಹುಟ್ಟುವುದು ಸಹಜ. ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಯುಕ್ತಿ, ಶಕ್ತಿ, ಛಲ, ಆಕ್ರೋಶ ಇದ್ದರೆ ಸಾಲದು. ಕ್ರೀಡಾ ಮನೋಭಾವ, ಸ್ಪರ್ಧಾ ಮನೋಭಾವವು ಇರಬೇಕಾಗುತ್ತದೆ. ಆಗ ಮಾತ್ರ ಗೆಲುವು ಸಾಧ್ಯ. ಈ ಪೋಸ್ಟರ್‌ ರಣಾರಂಗ ಟಾಸ್ಕ್ ಅನ್ನು ರದ್ದು ಮಾಡಲಾಗಿದೆ. ಇಂದಿನ ತಪ್ಪು ಮುಂದಿನ ಪಾಠವಾಗುತ್ತದೆ ಮರೆಯದಿರಿ” ಎಂದು ಬಿಗ್ ಬಾಸ್ ಬೇಸರದಲ್ಲಿ ಹೇಳಿದ್ದಾರೆ.

ಸುಸ್ತಾದ ಹನುಮಂತ:

ಬಿಗ್‌ ಬಾಸ್‌ ಎದುರು ಪಾರ್ಟಿಯ ಪ್ರಚಾರವನ್ನು ತಡೆಯುವ ಟಾಸ್ಕ್‌ ಕೊಟ್ಟಿದ್ದಾರೆ. ಇದರಲ್ಲಿ ಸ್ಪರ್ಧಿಗಳ ನಡುವೆ ಬಲ ಪ್ರಯೋಗವಾಗಿದೆ. ಸ್ಪರ್ಧಿಗಳ ಮಧ್ಯೆ ಕುಸ್ತಿ ಜಗ್ಗಾಟ ಜೋರಾಗಿಯೇ ನಡೆದಿದೆ. ಈ ವೇಳೆ ಹನುಮಂತ ಅವರು ಕುಸಿದು ಬಿದ್ದ ಘಟನೆ ಕೂಡ ನಡೆದಿದೆ. ಮನೆಯಲ್ಲಿ ಯಾವುದೇ ಜಗಳ, ಕಿತ್ತಾಟ ನಡೆಯದಿರಲಿ ಎಂದು ಕೇಳಿಕೊಳ್ಳುತ್ತಾ ಬಂದವರು ಹನುಮಂತ. ಮನೆಯಲ್ಲಿ ಹೆಚ್ಚು ಹಾಡಿಕೊಂಡು, ಕಾಮಿಡಿ ಮಾಡಿಕೊಂಡು ಬಂದವರು ಈಗ ಅವರೇ ಟಾಸ್ಕ್‌ನಲ್ಲಿ ಗಾಯ ಮಾಡಿಕೊಂಡಿದ್ದಾರೆ. ಅವರನ್ನು ಮೋಕ್ಷಿತಾ ಮಂಜು ಅವರು ಹೊತ್ತುಕೊಂಡು ಹೋಗಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ರಣರಂಗವಾದ ರಾಜಕೀಯ ಟಾಸ್ಕ್: ಇದನ್ನು ಕಂಡು ಸುಸ್ತಾದ ಹನುಮಂತ