Wednesday, 11th December 2024

ನೀನು ನನ್ನ ಡ್ಯಾಶ್​ಗೆ ಸಮ ಎಂದ ನರಕ ವಾಸಿ: ವೀಕೆಂಡ್​ನಲ್ಲಿ ಈ ಸ್ಪರ್ದಿಗೆ ಕಿಚ್ಚನ ಕ್ಲಾಸ್ ಖಚಿತ

Ranjith and Lawyer Jagadish Clash

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada) ಮನೆ ಮೂರೇ ದಿನಕ್ಕೆ ರಣರಂಗವಾಗಿದೆ. ಮೊದಲ ಎರಡು ದಿನ ಸಣ್ಣದಾಗಿ ಕಿಡಿ ಹೊತ್ತಿಕೊಂಡಿದ್ದ ಜಗಳ ಮೂರನೇ ದಿನ ಬ್ಲಾಸ್ಟ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಜಗಳಗಳ ಕಾವು ಏರುತ್ತಿದೆ. ಲಾಯರ್ ಜಗದೀಶ್ ಅವರು ತಮ್ಮದೇ ಸ್ವರ್ಗ ವಾಸಿಗಳ ಜೊತೆ ಮತ್ತು ನರಕ ವಾಸಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಅದರಲ್ಲೂ ಜಗದೀಶ್ ಮತ್ತು ರಂಜಿತ್ ನಡುವಣ ಜಗಳ ಒಂದು ಹಂತ ಮೇಲಕ್ಕೋಗಿದೆ.

ಯಾವ ವಿಚಾರಕ್ಕೆ ಜಗಳವಾಗಿದೆ ಎಂಬುದು ಸ್ಪಷ್ಟವಿಲ್ಲ. ಆದರೆ, ಲಾಯರ್ ಜೊತೆ ಮಾತನಾಡುವಾಗ ರಂಜಿತ್ ತಾಳ್ಮೆ ಕಳೆದುಕೊಂಡಂತಿದೆ. ಕಲರ್ಸ್ ಕನ್ನಡ ಇಂದಿನ ಎಪಿಸೋಡ್​ನ ಪ್ರೊಮೋ ಹಂಚಿಕೊಂಡಿದ್ದು, ಇದರಲ್ಲಿ ಜಗದೀಶ್-ರಂಜಿತ್ ಕಾಳಗವಿದೆ. ಒಂದು ಹಂತದಲ್ಲಿ ರಂಜಿತ್‌ ಅವರು ‘ಮರ್ಯಾದೆ ಕೊಟ್ಟರೆ ಉಳಿಸಿಕೊಳ್ಳಲು ಆಗಿಲ್ಲ ಅಂದ್ರೆ ನೀನು ನನ್ನ ಡ್ಯಾಶ್‌ಗೆ (ಬೀಪ್ ಸೌಂಡ್) ಸಮ’ ಎಂದು ಜಗದೀಶ್ ಅವರಿಗೆ ಹೇಳುವ ಸಂಭಾಷಣೆ ಇದೆ. ಇದನ್ನು ಕಂಡ ನೆಟ್ಟಿಗರು ವೀಕೆಂಡ್​ನಲ್ಲಿ ಇವರಿಬ್ಬರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ಪಕ್ಕಾ ಎಂದು ಹೇಳುತ್ತಿದ್ದಾರೆ.

ಇನ್ನು ಉಗ್ರಂ ಮಂಜು, ಧನರಾಜ್ ಆಚಾರ್ ಜೊತೆಗೂ ಜಗದೀಶ್ ದೊಡ್ಡ ಗಲಾಟೆ ಮಾಡಿಕೊಂಡಿದ್ದಾರೆ. ಮಂಜು ಮತ್ತು ಜಗದೀಶ್ ಜಗಳವಾಡುತ್ತಾ ಪರಸ್ಪರ ಮುಖಾಮುಖಿ ಆಗಿರುವುದು ಪ್ರೊಮೋದಲ್ಲಿದೆ. ರಗಡ್ ಡೈಲಾಗ್ ಕೂಡ ಲಾಯರ್ ಹೇಳಿದ್ದು ‘ಮುಖವಾಡ ಹಾಕ್ಕೊಂಡು ಜೀವನ ಮಾಡ್ತಿದ್ದಾರೆ ಅಲ್ಲಿ. ಒಬ್ಬ 16 ಜನರನ್ನು ಡಿಫೆಂಡ್ ಮಾಡುತ್ತಾನೆ. ಮೀಸೆ ತಿರ್ಗೋನು ಯಾರೇ ಆಗಿರ್ಬೋದು, ಇದುವರೆಗೆ ಬಿಟ್ಟಿಲ್ಲ. ನನಗೆ ಘನತೆ ಗೌರವ ಆಚೆ ಕಡೆ ಚೆನ್ನಾಗೇ ಇದೆ. ನನಗೆ ನಾನೇ ಬಿಗ್ ​ಬಾಸ್. ನೀವೆಲ್ಲ ಸೇರಿ ನನ್ನನ್ನು ಹೊರಗೆ ಕಳಿಸೋದೇ ಬೆಸ್ಟ್’ ಎಂದು ಗುಡುಗಿದ್ದಾರೆ.

ಅತ್ತ ಸ್ವರ್ಗ ವಾಸಿಗಳು ನಿಯಮವನ್ನು ಪಾಲಿಸದ ಕಾರಣ ಬಿಗ್ ಬಾಸ್ ಅಡಿಗೆ ಮನೆಯ ಗ್ಯಾಸ್ ಕನೆಕ್ಷನ್ ತೆಗೆದಿದ್ದಾರೆ. ಹಾಗೆಯೆ ಎಲ್ಲ ಹಣ್ಣು-ಹಂಪಲು, ತರಕಾರಿಗಳನ್ನು ಕೂಡಲೇ ಸ್ಟೋರ್​ ರೂಮ್​ಗೆ ತಂದಿಡುವಂತೆ ಆದೇಶ ನೀಡಿದ್ದಾರೆ. ಇದರಿಂದ ಸ್ವರ್ಗದಲ್ಲಿರುವ ಸ್ಪರ್ಧಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಉಗ್ರಂ ಮಂಜು ಮುಂದೆ ಲಾಯರ್ ಜಗದೀಶ್ ಉಗ್ರ ರೂಪ: ಬಿಗ್ ಬಾಸ್ ಮನೆಯಲ್ಲಿ ತಾರಕಕ್ಕೇರಿದ ಜಗಳ