Friday, 13th December 2024

BBK 11: ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್: ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಡಿದ ಸುದೀಪ್

Kiccha Sudeep

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಯಾರೂ ಊಹಿಸಲಾಗದ ಘಟನೆಗಳು ನಡೆಯುತ್ತಿದೆ. ಈ ವಾರ ಲಾಯರ್ ಜಗದೀಶ್ ಮತ್ತು ರಂಜಿತ್ ಮನೆಯಿಂದ ಔಟಾದರು. ಹೀಗಾಗಿ ಕಿಚ್ಚನ ಪಂಚಾಯಿತಿ ಮೇಲೆ ಎಲ್ಲರ ಕಣ್ಣಿತ್ತು. ಸುದೀಪ್ ಮನೆಯವರ ಜೊತೆ ಹೇಗೆ ಮಾತನಾಡಬಹುದು?, ಏನು ಹೇಳಬಹುದು? ಎಂಬುದನ್ನು ನೋಡಲು ಇಡೀ ಕರ್ನಾಟಕ ಕಾದು ಕುಳಿತಿತ್ತು. ಆದರೆ, ಎಪಿಸೋಡ್ ಆರಂಭಲ್ಲೇ ಮನೆ ಮಂದಿಗೆ ಸುದೀಪ್ ನಯವಾಗಿ ಚಾಟಿ ಬೀಸಿದ್ದಾರೆ.

ನಾನಿಲ್ಲಿ ಹೊರಹೋಗಿರುವ ಜಗದೀಶ್ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಿ ಮನೆಯವರ ತಪ್ಪುಗಳನ್ನು ತಿಳಿ ಹೇಳುವ ಕೆಲಸ ಶುರುಹಚ್ಚಿಕೊಂಡರು. ಇದಕ್ಕೂ ಮುನ್ನ ಧನ್ಯವಾದಗಳು ಎಂದು ಬರೆದಿರುವ ಕೇಕ್ ತಂದು ಎಲ್ಲ ಸದಸ್ಯರನ್ನು ಸೇರಿಸಿ ಕೇಕ್ ಕಟ್ ಮಾಡಿಸಿದ್ದಾರೆ. ಇದರ ಹಿಂದಿನ ಮರ್ಮವನ್ನು ಅರಿಯದ ಸ್ಪರ್ಧಿಗಳು ಖುಷಿಯಿಂದ ಕೇಕ್ ಕಟ್ ಮಾಡಿ ತಿಂದಿದ್ದಾರೆ. ಆದರೆ, ನಂತರ ನಡೆದಿದ್ದು ಕಿಚ್ಚನ ಶೋ.

ಕೇಕ್ ಕಳಿಸಿದ್ದು ನಾನೇ ಎಂದು ಸುದೀಪ್ ಹೇಳಿದ್ದಾರೆ. ನನಗೆ ಮಾಧ್ಯಮಗಳು ಕೇಳುತ್ತಿದ್ದರು ಈವರೆಗೆ ನಡೆದ ಬಿಗ್ ಬಾಸ್​ 11 ಸೀಸನ್​ ಗಳಲ್ಲಿ ನಿಮಗೆ ಯಾವ ಸೀಸನ್ ಇಷ್ಟವಿಲ್ಲ ಎಂದು ಪ್ರಶ್ನೆ ಕೇಳ್ತಿದ್ರು. ನಾನು ಸೀಸನ್ 6 ಎನ್ನುತ್ತಿದ್ದೆ. ಈಗ ಸೀಸನ್ 11 ಎಂದು ಹೇಳುವಂತಾಗಿದೆ. ಅದಕ್ಕೆ ಈ ಕೇಕ್ ಎಂದು ಹೇಳಿದ್ದಾರೆ. ಇದನ್ನು ಕೇಳಿ ಮನೆಮಂದಿ ಬೆಚ್ಚಿಬಿದ್ದಿದ್ದಾರೆ.

ಇನ್ನು ಜಗದೀಶ್ ಮನೆಯಿಂದ ಹೊರ ಹೋಗಲು ರೂಲ್ಸ್ ಬ್ರೇಕ್ ಮಾಡಿದ್ದು ಕಾರಣ ಅಲ್ಲ ಎಂದು ಕಿಚ್ಚ ಸುದೀಪ್ ಸ್ಪಷ್ಟ ಪಡಿಸಿದ್ದಾರೆ. ಜಗದೀಶ್​ ಶೋ ಬಗ್ಗೆ ಕೆಟ್ಟದಾಗಿ ಮಾತಾಡಿದ್ದರು. ಸ್ಪರ್ಧಿಗಳ ಬಗ್ಗೆ ಕೂಡ ಅಸಭ್ಯವಾಗಿ ಮಾತಾಡಿದರು. ಅವರು ನಡೆದುಕೊಂಡ ರೀತಿಯನ್ನು ಕೂಡ ಬಿಗ್ ಬಾಸ್ ಗಮನಿಸಿದ್ದಾರೆ. ಅವರು ಬಳಸಿದ ಪದ, ಶೋ ಮರ್ಯಾದೆ ಹಾಗೂ ನಿಮ್ಮ ಸೆಕ್ಯೂರಿಟಿ ಎಲ್ಲ ಗಮನಿಸಿಯೇ ಜಗದೀಶ್ ಅವರನ್ನು ಹೊರಗೆ ಕಳಿಸಿದ್ದು ಹೇಳಿದ್ದಾರೆ.

ಸುದೀಪ್ ಅವರು ವಾರದ ಕತೆಯಲ್ಲಿ ಈ ಮನೆಯಲ್ಲಿ ಇರೋರು ಎಷ್ಟು ಜನ ಸರಿ ಇದ್ದೀರಿ? ಎಂಬ ವಿಚಾರವನ್ನು ತೆರೆದಿಟ್ಟಿದ್ದಾರೆ. ಒಬ್ಬರ ಬಗ್ಗೆ ಮಾತ್ರ ಅಷ್ಟೊಂದು ಕಂಪ್ಲೆಂಟ್ ಮಾಡುವ ಮಧ್ಯೆ ನಿಮ್ಮದೇ ಕಂಪ್ಲೆಂಟ್ ಎಷ್ಟಿದೆ ಎಂಬುದನ್ನು ಮನೆಮಂದಿಗೆ ಮನವರಿಕೆ ಮಾಡುವ ಕೆಲಸನ್ನು ಸುದೀಪ್ ಮಾಡಿದ್ದಾರೆ.

BBK 11: ಒಬ್ಬ ಚಪ್ಪಲು ಎತ್ತಿ ಬಿಸಾಡ್ತಾರೆ..: ಮಂಜುವಿನ ಎದುರು ಸುದೀಪ್ ಉಗ್ರ ರೂಪ