ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 111) ಅರ್ಧಶತಕ ಪೂರೈಸಿ ಮುನ್ನುಗ್ಗುತ್ತಿದೆ. ಪ್ರತೀ ವೀಕೆಂಟ್ ಕಿಚ್ಚ ಸುದೀಪ್ ಬಂದು ವಾರದ ಕತೆಯನ್ನು ಮಾತನಾಡುತ್ತಾರೆ. ಆದರೆ, ಕಳೆದ ಕೆಲವು ವಾರಗಳಿಂದ ವಾರದ ಕತೆ ಕಿಚ್ಚ ಜೊತೆ ಹಾಗೂ ಭಾನುವಾರ ನಡೆಯುವ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ಗೆ ದೊಡ್ಡ ಮಟ್ಟದ ಟಿಆರ್ಪಿ ಇರಲಿಲ್ಲ. ಆದರೆ 48ನೇ ವಾರ ಬಿಗ್ ಬಾಸ್ ಭರ್ಜರಿ ಕಮ್ಬ್ಯಾಕ್ ಮಾಡಿ ಎರಡಂಕಿ ತಲುಪಿತ್ತು. ಇದೀಗ ಮತ್ತೆ ಬಿಗ್ ಬಾಸ್ ಟಿಆರ್ಪಿ ಕುಸಿದಿದೆ.
ಇದೀಗ 49ನೇ ವಾರದ ಟಿಆರ್ಪಿ ಹೊರ ಬಿದ್ದಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ವಾರದ ದಿನ ಹಾಗೂ ವೀಕೆಂಡ್ನಲ್ಲಿ ಸಾಧಾರಾಣ ಟಿಆರ್ಪಿ ಸಿಕ್ಕಿದೆಯಷ್ಟೆ. ವಾರದ ದಿನಗಳಲ್ಲಿ ನಗರ ಭಾಗದಲ್ಲಿ 8.4 ಟಿವಿಆರ್ ಸಿಕ್ಕಿದೆ. ಶನಿವಾರ ನಗರ ಭಾಗದಲ್ಲಿ 9.5 ಟಿಆರ್ಪಿ ಹಾಗೂ ಭಾನುವಾರ 10.8 ಟಿಆರ್ಪಿ ಸಿಕ್ಕಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ನ ಟಿಆರ್ಪಿ ಏರಿಳಿತ ಆಗುತ್ತಲೇ ಇದೆ.
ಇನ್ನು ಧಾರಾವಾಹಿ ವಿಚಾರಕ್ಕೆ ಬರೋದಾದರೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಭರ್ಜರಿ ಟಿಆರ್ಪಿ ಪಡೆದುಕೊಂಡಿದೆ. ಬ್ರೋ ಗೌಡ ನಟಿಸುತ್ತಿರುವ ಈ ಧಾರಾವಾಹಿ ಹಲವು ಟ್ವಿಸ್ಟ್ಗಳನ್ನು ಪಡೆದುಕೊಂಡು ಸಾಗುತ್ತಿದೆ. ಕೋರ್ಟ್ ಸೀಸನ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಈ ಧಾರಾವಾಹಿ ವಾರದ ದಿನಗಳ ಬಿಗ್ ಬಾಸ್ ಟಿಆರ್ಪಿಗಿಂತ ಹೆಚ್ಚಿನ ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ನಂಬರ್ 1 ಸೀರಿಯಲ್ ಎನಿಸಿಕೊಂಡಿದೆ.
ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಇದೆ. ಇದು ಹಿಂದಿನ ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಮೂರನೇ ಸ್ಥಾನದಲ್ಲಿ ಎರಡು ಧಾರಾವಾಹಿಗಳು ಸ್ಥಾನ ಪಡೆದುಕೊಂಡಿವೆ. ಪುಟ್ಟಕ್ಕನ ಮಕ್ಕಳು ಹಾಗೂ ಭಾಗ್ಯ ಲಕ್ಷ್ಮೀ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಸಮಯ ಬದಲಾವಣೆಯ ನಂತರ ಪುಟ್ಟಕ್ಕನ ಮಕ್ಕಳು ಟಿಆರ್ಪಿ ಕುಸಿಯುತ್ತಾ ಬರುತ್ತಿದೆ. ನಂತರದ ಸ್ಥಾನದಲ್ಲಿ ಅಮೃತಧಾರೆ ಧಾರಾವಾಹಿ ಇದೆ. ಅಣ್ಣಯ್ಯ ಧಾರಾವಾಹಿಗೆ ಕೂಡ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದೆ.
BBK 11: ಗೌತಮಿಯಿಂದ ಮತ್ತೊಮ್ಮೆ ಕ್ಲಾಸ್: ಬಿಗ್ ಬಾಸ್ನಲ್ಲಿ ಮಂಕಾದ ಮಂಜು