Friday, 13th December 2024

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್?

BBK 11 week 7 nomination

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಏಳನೇ ವಾರಕ್ಕೆ ಕಾಲಿಟ್ಟಿದೆ. ಟಾಸ್ಕ್​ಗಳ ಕಾವು ಏರುತ್ತಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 13 ಮಂದಿ ಇದ್ದಾರೆ. ಕಳೆದ ವಾರ ಮನೆಯೊಳಗೆ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ. ಭವ್ಯಾ ಗೌಡ ಹಾಗೂ ಧನರಾಜ್ ಆಚಾರ್ ಡೇಂಜರ್ ಝೋನ್​ಗೆ ಬಂದಿದ್ದರು. ಇದರಲ್ಲಿ ಭವ್ಯಾ ಎಲಿಮಿನೇಟ್ ಎಂದು ಸುದೀಪ್ ಘೋಷಣೆ ಕೂಡ ಮಾಡಿದರು. ಆದರೆ, ನೋ ಎಲಿಮಿನೇಷನ್ ವೀಕ್ ಆಗಿದ್ದರಿಂದ ಭವ್ಯಾ ಬಚಾವ್ ಆದರು.

ಆರನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದರು. ಇದರಲ್ಲಿ ಧರ್ಮಾ ಕೀರ್ತಿರಾಜ್, ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಆಚಾರ್ ಇದ್ದರು. ಆದರೆ, ಎಲ್ಲರೂ ಸೇಫ್ ಆಗಿದ್ದರು. ಫೇಕ್ ಎಲಿಮಿನೇಷನ್‌ ನಡೆಸಿ ಒಬ್ಬರನ್ನು ಸೀಕ್ರೆಟ್‌ ರೂಮ್‌ನಲ್ಲಿ ಬಿಗ್ ಬಾಸ್ ಇಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅದು ನಡೆಯಲಿಲ್ಲ.

ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಬಹುದು ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ, ಇದರಲ್ಲಿ ಮೊದಲ ಹೆಸರು ಗೋಲ್ಡ್ ಸುರೇಶ್ ಇರುವುದು ಖಚಿತ. ಮನೆಯಲ್ಲಿ ಅನೇಕ ಮಂದಿಗೆ ಸುರೇಶ್ ಅವರ ಆಟ ಇಷ್ಟವಾಗುತ್ತಿಲ್ಲ. ಹೀಗಾಗಿ ಇವರು ನಾಮಿನೇಟ್ ಆಗಬಹುದು. ಜೊತೆಗೆ ಧರ್ಮ ಕೀರ್ತಿರಾಜ್ ಕೂಡ ಸೈಲೆಂಟ್ ಆಗಿರುವುದರಿಂದ ಹೊರ ಹೋಗಲು ಆಯ್ಕೆ ಆಗಬಹುದು.

ಧರ್ಮಾ ಅವರಿಗೆ ವೀಕೆಂಡ್​ನಲ್ಲಿ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ನೀವು ಡಯೆಟ್​ನಲ್ಲಿದ್ದರೆ ಆಗುವುದಿಲ್ಲ. ಎಲ್ಲ ಆಹಾರವನ್ನೂ ತಿನ್ನಬೇಕು ಎಂದು ಇನ್​ಡೈರೆಕ್ಟ್ ಆಗಿ ಮೈಚಳಿ ಬಿಟ್ಟು ಆಡಬೇಕು ಎಂದು ಹೇಳಿದ್ದರು. ಆದರೆ, ಧರ್ಮ ಮತ್ತಷ್ಟು ವೀಕ್ ಆದಂತೆ ಕಾಣುತ್ತಿದೆ. ಹೀಗಾಗಿ ಇವರು ಈ ವಾರ ನಾಮಿನೇಟ್ ಆಗುವುದು ಖಚಿತ ಎನ್ನಲಾಗುತ್ತಿದೆ.

ಇವರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ವಟವಟ ಎಂದು ಮಾತನಾಡುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಇವರ ಹೆಸರು ತೆಗೆದುಕೊಳ್ಳಬಹುದು. ಉಳಿದಂತೆ ಧನರಾಜ್ ಆಚಾರ್, ಅನುಷಾ ರೈ, ಉಗ್ರಂ ಮಂಜು, ಮೋಕ್ಷಿತಾ ಪೈ ನಾಮಿನೇಟ್ ಆಗುವ ಸಾಧ್ಯತೆ ಇದೆ. ಇವೆಲ್ಲದರ ಮಧ್ಯೆ ಕಳೆದ ವಾರ ಎಲಿಮಿನೇಷನ್ ಆಗಿಲ್ಲದ ಕಾರಣ ಈ ವಾರ ಡಬಲ್ ಎಲಿಮಿನೇಷನ್ ನಡೆಸಲಾಗುತ್ತದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

BBK 11: ತುತ್ತು ಅನ್ನಕ್ಕೆ ರಣರಂಗವಾದ ಬಿಗ್ ಬಾಸ್ ಮನೆ: ಸುರೇಶ್-ಐಶ್ವರ್ಯ ನಡುವೆ ಜಗಳ