Friday, 13th December 2024

Bigg Boss Kannada: ಸುದೀಪ್ ಆಯ್ತು ಈಗ ಬಿಗ್ ಬಾಸ್: ನಾನು ಈ ಮನೆಯಲ್ಲಿ ಇರಲ್ಲ ಎಂದು ಹೊರಟು ಹೋದ ಬಿಗ್ ಬಾಸ್

Bigg Boss Kannada Season 11

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶುರುವಾದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಈ ಶೋ ಸುದ್ದಿಯಲ್ಲಿದೆ. ಮನೆಯ ಒಳಗಿನ ವಿಚಾರ ಮತ್ತು ಹೊರಗಿನಿಂದ ಕೂಡ ಬಿಬಿಕೆ 11 ಸೌಂಡ್ ಮಾಡುತ್ತಿದೆ. ಸ್ವರ್ಗ ಮತ್ತು ನರಕ ಎಂಬ ವಿಶೇಷ ಕಾನ್ಸೆಪ್ಟ್​ನಲ್ಲಿ ಶುರುವಾದ ಶೋ ಬಗ್ಗೆ ನರಕದಲ್ಲಿ ಮಹಿಳೆಯರ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಹೋಗಿತ್ತು.

ಭಾನುವಾರ ಸುದೀಪ್ ಅವರು ಇದು ನನ್ನ ಕೊನೆಯ ಸೀಸನ್ ಎಂದು ಟ್ವೀಟ್ ಮಾಡಿದರು. ಇದರ ಬೆನ್ನಲ್ಲೇ ಬಿಗ್ ಬಾಸ್ ಕೂಡ ಈ ಮನೆಯಿಂದ ಹೊರಟು ಹೋಗಿದ್ದಾರೆ. ಕಲರ್ಸ್ ಕನ್ನಡ ಇಂದಿನ ಎಪಿಸೋಡ್​ನ ಪ್ರೊಮೋ ಬಿಟ್ಟಿದ್ದು ಇದರಲ್ಲಿ ಬಿಗ್ ಬಾಸ್ ಹೇಳಿರುವ ಮಾತು ಕೇಳಿ ಕೇವಲ ದೊಡ್ಮನೆಯೊಳಗೆ ಇರುವವರು ಮಾತ್ರವಲ್ಲ ಇಡೀ ವೀಕ್ಷಕರು ಶಾಕ್​ಗೆ ಒಳಗಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿದೆ. ಬೆಳ್ಳಂಬೆಳಗ್ಗೆ ಸ್ಪರ್ಧಿಗಳು ಎದ್ದ ತಕ್ಷಣ ಬಿಗ್​ ಬಾಸ್​ ಫೋನ್​ ಕರೆ ಮಾಡಿದ್ದಾರೆ. ಮನೆಯ ಕ್ಯಾಪ್ಟನ್​ ಶಿಶಿರ್​ ಈ ಫೋನ್​ ಸ್ವೀಕರಿಸಿದ್ದಾರೆ​. ಅತ್ತ ಕಡೆಯಿಂದ ಬಿಗ್ ಬಾಸ್ ‘ನಿಮ್ಮ ಎಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಥ್ಯಾಂಕ್ಯೂ ವೆರಿ ಮಚ್’​ ಎಂದು ಹೇಳಿದ್ದಾರೆ. ಇದಕ್ಕೆ ಏನು ಉತ್ತರಿಸಬೇಕೆಂದು ಕಾರಣ ಶಿಶಿರ್​ ಥ್ಯಾಂಕ್ಯೂ ಬಿಗ್​ ಬಾಸ್​ ಎಂದಿದ್ದಾರೆ.

ಶಿಶಿರ್​ ಮಾತಿಗೆ ಕೋಪಗೊಂಡ ಬಿಗ್​ ಬಾಸ್​’ ಏನು ಥ್ಯಾಂಕ್ಯೂ ಹೇಳುತ್ತಿದ್ದೀರಲ್ಲ. ಉಡಾಫೆತನ, ಅಪ್ರಮಾಣಿಕ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಸ್​ ಬಾಸ್​ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಸದ್ಯ ಬಿಗ್​ ಬಾಸ್​ ಮಾತು ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಬ್ರೇಕ್​ ತೆಗೆದುಕೊಳ್ಳುತ್ತೇನೆ ಎಂಬ ಹೇಳಿಕೆಯೂ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಸುದೀಪ್ ಕೊನೆಯ ಸೀಸನ್:

ಇದರ ನಡುವೆ ಸುದೀಪ್ ಅವರು ಇದು ನನ್ನ ಕೊನೆಯ ಬಿಗ್ ಬಾಸ್ ಸೀಸನ್. ಇನ್ಮುಂದೆ ಶೋ ನಡೆಸಿಕೊಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಬಿಗ್‌ಬಾಸ್‌ ಕನ್ನಡ 11ಕ್ಕೆ ನೀವು ತೋರಿದ ಪ್ರೀತಿಗೆ ಧನ್ಯವಾದ. ಈ ಶೋಗೆ ಬಂದ ಟಿಆರ್‌ಪಿ ನೋಡಿದರೆ ಗೊತ್ತಾಗುತ್ತದೆ, ಈ ಶೋ ಮೇಲೆ ಮತ್ತು ನನ್ನ ಮೇಲೆ ನೀವೆಷ್ಟು ಪ್ರೀತಿ ಇಟ್ಟುಕೊಂಡಿದ್ದೀರೆಂದು. ಕಳೆದ 10 ಪ್ಲಸ್‌ 1 ವರ್ಷದಿಂದ ಬಿಗ್‌ಬಾಸ್‌ ಜತೆಗೆ ನಾನೂ ಪ್ರಯಾಣಿಸುತ್ತ ಬಂದಿದ್ದೇನೆ. ಆದರೆ, ಈಗ ನಾನು ಇದರಿಂದ ಹೊರಬರಬೇಕಿದೆ. ಇದೇ ನನ್ನ ಕೊನೆಯ ಬಿಗ್‌ಬಾಸ್‌ ಎಂದು ಸುದೀಪ್ ಬರೆದುಕೊಂಡಿದ್ದಾರೆ.

Kichcha Sudeep Remuneration: ಬಿಗ್ ಬಾಸ್ ಕನ್ನಡ ಮೊದಲ ಸೀಸನ್​ನಲ್ಲಿ ಸುದೀಪ್ ಪಡೆದ ಸಂಭಾವನೆ ಎಷ್ಟು ಗೊತ್ತೇ?