Tuesday, 10th December 2024

BBK 11: ಬಿಗ್ ಬಾಸ್​ನಲ್ಲಿ ಗೆಲುವಿಗೆ ಭಾರೀ ಫೈಟ್: ಟಾಸ್ಕ್‌ ನಡುವೆ ಮತ್ತೆ ರಣರಂಗವಾದ ಮನೆ

Ugramm Manju and Shishir Fight

ಮೊದಲ ಮೂರು ವಾರಗಳಲ್ಲಿ ಹೆಚ್ಚು ಜಗಳಗಳಿಂದಲೇ ಕೂಡಿದ್ದ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಈಗ ಟಾಸ್ಕ್​ಗಳ ಸರದಿ ಶುರುವಾಗಿದೆ. ಕಠಿಣ ಟಾಸ್ಕ್ ಬಿಗ್ ಬಾಸ್ ನೀಡುತ್ತಿದ್ದು, ಗೆಲುವಿಗೆ ಸ್ಪರ್ಧಿಗಳ ನಡುವೆ ಪೈಪೋಟಿ ಉಂಟಾಗಿದೆ. ಸದ್ಯ ದೊಡ್ಮೆನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆಯುತ್ತಿದೆ. ಜೊತೆಗೆ ಈ ವಾರ ಇಬ್ಬರು ಕ್ಯಾಪ್ಟನ್ಸ್ ಇರಲಿದ್ದಾರೆ. ಇದಕ್ಕಾಗಿ ಇಬ್ಬಿಬ್ಬರು ಸ್ಪರ್ಧಿಗಳು ಆಡುತ್ತಿದ್ದಾರೆ. ಇಲ್ಲಿ ಗೆದ್ದ ಜೋಡಿ ಮನೆಯಲ್ಲಿ ಕ್ಯಾಪ್ಟನ್ ಆಗಿರುತ್ತಾರೆ.

ಆದರೆ, ಈ ಗೇಮ್ ಮಧ್ಯೆ ಮನೆ ರಣರಂಗವಾಗಿದೆ. ಗೆಲುವಿಗಾಗಿಯೇ ನಡೆಯುತ್ತಿರೋ ಈ ಆಟ ಟಾರ್ಗೆಟ್​ನಂತೆ ಕಾಣುತ್ತಿದೆ. ಸ್ಪರ್ಧಿಗಳ ಗೆಲುವಿಗಾಗಿಯೇ ನಡೆಯುತ್ತಿರೋ ಆಟದಲ್ಲಿ ಕ್ರೌರ್ಯವೇ ಎದ್ದು ಕಾಣಿಸುತ್ತಿದೆ. ಸ್ಪರ್ಧಿಗಳ ಕಾಲಿಗೆ ದಿಂಬಿನಿಂದ ಹೊಡೆಯೋ ಸ್ಟ್ರಾಟರ್ಜಿ, ಕೋಲಿನಿಂದ ಕೈಗಳನ್ನು ಲಾಕ್ ಮಾಡಿರುವುದೆಲ್ಲ ಹೆಚ್ಚಿನ ನೋವು ತರುತ್ತಿದೆ. ಇದರಿಂದ ಭವ್ಯ ಗೌಡ ಸೇರಿದಂತೆ ಕೆಲ ಮಂದಿ ರಾಂಗ್ ಆಗಿದ್ದಾರೆ.

ಟಾಸ್ಕ್ ಏನು?:

ಒಂದು ಜೋಡಿ ಗಾರ್ಡನ್ ಏರಿಯಾದಲ್ಲಿ ಅಳವಡಿಸಲಾದ ಸಮಯ ಸೂಚಿಸುವ ಮುಳ್ಳುಗಳನ್ನು ತಳ್ಳುತ್ತಾ ಜೊತೆಗೆ ತಾವು ಸುತ್ತುತ್ತಾ, 17 ನಿಮಿಷಗಳನ್ನು ಏಣಿಸಬೇಕು. ಜೋಡಿಗಳು 17 ನಿಮಿಷ ಮುಗಿದಿದೆ ಎಂದು ಭಾವಿಸಿದರೇ ಗಡಿಯಾರದಿಂದ ಕಳೆಗೆ ಇಳಿದು ಪಕ್ಕದಲ್ಲಿ ಇರುವ ಗಂಟೆ ಬಾರಿಸಿಬೇಕು. ಆದರೆ ಇದರ ಮಧ್ಯೆ ಪ್ರತಿ ಸ್ಪರ್ಧಿಗಳು ಅವರ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡಬಹುದು. ಸರಿಯಾಗಿ 17 ನಿಮಿಷ ಅಥವಾ ಇದರ ಆಸುಪಾಸಿನಲ್ಲಿ ಗಂಟೆ ಬಾರಿಸಿದ ಜೋಡಿ ಮನೆಯ ಕ್ಯಾಪ್ಟನ್ ಆಗುತ್ತಾರೆ.

ಮನೆ ಮಂದಿಯಿಂದ ಚರ್ಚೆ:

ಟಾಸ್ಕ್‌ ವಿಚಾರವಾಗಿ ಭವ್ಯಾ, ತ್ರಿವಿಕ್ರಮ್‌ ಹಾಗೇ ಸುರೇಶ್‌, ಉಗ್ರಂ ಮಂಜು, ಅನುಷಾ ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡಿದ್ದಾರೆ. ಅನುಷಾ ಅವರು ಎಲ್ಲರ ಮುಂದೆ ಸರಿಯಾಗಿ ಪೆಟ್ಟು ಬಿತ್ತು. ಎಲ್ಲೆಲ್ಲಿ ಬಿದ್ದಿದೆ ಅಂತ ಗೊತ್ತಾಗ್ತಾ ಇಲ್ಲ ಎಂದಿದ್ದಾರೆ. ಅದೇ ವೇಳೆಗೆ ಮಂಜು ಅವರು ನಿಮ್ಮನ್ನ ಟಾರ್ಗೆಟ್‌ ಮಾಡಿದ್ದರು ಎಂದಿದ್ದಾರೆ. ಮತ್ತೊಂದು ಗುಂಪಿನಲ್ಲಿ ತ್ರಿವಿಕ್ರಮ್‌‌‌ ಅವರು ಮಾತನಾಡಿ ನಾವು ಹೊಡೆಯೋದು ನೋಡಿ ಮಾತನಾಡುವುದೇ ನಿಲ್ಲಿಸಿಬಿಟ್ಟರು ಎಂದಿದ್ದಾರೆ.

Chaithra Kundapura Marriage: ಹಸೆಮಣೆ ಏರಲು ಸಜ್ಜಾದ ಚೈತ್ರಾ ಕುಂದಾಪುರ: ವರ ಯಾರು ಗೊತ್ತೇ?