Saturday, 14th December 2024

ಬಾಲಿವುಡ್ ನಟ ಆಸೀಫ್ ಬಾಸ್ರಾ ಆತ್ಮಹತ್ಯೆ

ಧರ್ಮಶಾಲಾ : ಬಾಲಿವುಡ್ ನಟ ಆಸೀಫ್ ಬಾಸ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಇಂದು ನಡೆದಿದೆ.

ಧರ್ಮಶಾಲಾದ ಮೆಕ್ ಲೊಡ್ ಗಂಜ್ ನಲ್ಲಿ ಗುರುವಾರ ಬಸ್ರಾ ಎಫ್ ಸಿ ಗಿಬಾಡಾ ರಸ್ತೆಯಲ್ಲಿರುವ ಕೆಫೆಯ ಬಳಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಘಟನೆ ವರದಿಯಾಗುತ್ತಿದ್ದಂತೆಯೇ ಪೊಲೀಸರ ತಂಡವೂ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.

ಕಳೆದ 5 ವರ್ಷಗಳಿಂದ ನಟ ಆಸಿಫ್ ಅವರು ಮೆಕ್ ಲಿಯೋಡ್ ಗಂಜ್ ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬಹುಭಾಷಾ ನಟರಾದ ಆಸಿಫ್‌, ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.