Friday, 13th December 2024

ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ ಕಪೂರ್ ಖಾನ್

ಮುಂಬೈ : ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ದಂಪತಿ ಭಾನುವಾರ ಗಂಡು ಮಗುವಿಗೆ ಸ್ವಾಗತ ಕೋರಿದರು. ಬೆಬೊ ಶನಿವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು.

ಕರೀನಾ ಮತ್ತು ಸೈಫ್ ಎರಡನೇ ಬಾರಿಗೆ ತಂದೆ ತಾಯಿಯಾದರು. ತಮ್ಮ ಎರಡನೇ ಮಗು ಹುಟ್ಟುವುದಕ್ಕೆ ಮುಂಚೆ ಸೈಫ್ ಮತ್ತು ಕರೀನಾ ತಮ್ಮ ಹಿಂದಿನ ಮನೆಯ ಎದುರು ದೊಡ್ಡ ಮನೆಗೆ ಶಿಫ್ಟ್ ಆಗಿದ್ದಾರೆ. ನಾಲ್ಕು ವರ್ಷದ ತೈಮೂರ್ ಅಲಿ ಖಾನ್ ತಂದೆ ತಾಯಿ ಜೊತೆ ಇದ್ದಾನೆ.

ನಮ್ಮ ಕುಟುಂಬಕ್ಕೆ ನಾವು ಒಂದು ಸೇರ್ಪಡೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷ ವಾಗಿದೆ. ಅವರ ಎಲ್ಲ ಪ್ರೀತಿ ಮತ್ತು ಬೆಂಬಲಕ್ಕಾಗಿ ನಮ್ಮೆಲ್ಲ ಹಿತೈಷಿಗಳಿಗೆ ಧನ್ಯವಾದ ಗಳು.’ ಎಂದು ಬರೆದುಕೊಂಡಿದ್ದರು.