Friday, 13th December 2024

BBK 11: ಕುಚಿಕು ಸ್ನೇಹಿತ ಧನರಾಜ್​ರನ್ನೇ ನಾಮಿನೇಟ್ ಮಾಡಿದ ಹನುಮಂತ: ಕೊಟ್ಟ ಕಾರಣ ಏನು ನೋಡಿ

Dhanraj Achar and Hanumantha

ಆರನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಸ್ಪರ್ಧಿಗಳು ತಮ್ಮದೇ ಆದ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಸದ್ಯಕ್ಕೆ ಈ ವಾರ ಮನೆಯಿಂದ ಹೊರ ಹೋಗಲು 7 ಬಲಿಷ್ಠ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ವಾರ ಬಿಗ್ ಬಾಸ್ ಮನೆ ಮಂದಿಗೆ ಗ್ರೂಪ್ ಟಾಸ್ಕ್ ನೀಡಿದ್ದಾರೆ. ಇದಕ್ಕೆ ಮೂರು ಜನರಿರುವಂತಹ ನಾಲ್ಕು ಗುಂಪುಗಳನ್ನು ರಚಿಸಲಾಗಿದೆ. ಶಿಶಿರ್‌‌ ಟೀಂನಲ್ಲಿ ಧನರಾಜ್‌, ಐಶ್ವರ್ಯಾ ಇದ್ದರೆ, ಗೌತಮಿ ಟೀಂನಲ್ಲಿ ತ್ರಿವಿಕ್ರಮ್‌ ಅನುಷಾ ಇದ್ದಾರೆ. ಹಾಘೆಯೆ ಚೈತ್ರಾ ಟೀಂನಲ್ಲಿ ಮೋಕ್ಷಿತಾ, ಧರ್ಮ, ಮಂಜಣ್ಣ ಟೀಂನಲ್ಲಿ ಭವ್ಯಾ, ಸುರೇಶ್‌ ಇದ್ದಾರೆ.

ಕಾಲಕಾಲಕ್ಕೆ ಇವರುಗಳ ಮಧ್ಯೆ ಟಾಸ್ಕ್ ನೀಡಲಾಗುತ್ತದೆ. ಜೊತೆಗೆ ಗೆದ್ದ ತಂಡಕ್ಕೆ ವಿಶೇಷ ಪವರ್ ಕೂಡ ನೀಡಲಾಗುತ್ತದೆ. ದಾಳ ಉರುಳಿಸುವ ಗೇಮ್‌ನಲ್ಲಿ ಮೊದಲಿಗೆ ಚೈತ್ರಾ ಅವರ ಟೀಂ ಎದುರಾಳಿ ತಂಡದ ಒಬ್ಬರನ್ನು ಉಳಿಸಿಬೇಕಿತ್ತು. ಅವರು ಗೌತಮಿ ಅವರನ್ನು ಉಳಿಸಿದರು. ಬಳಿಕ ಮಂಜು ಅವರ ಟೀಂನಿಂದ ಭವ್ಯಾ, ಚೈತ್ರಾ ಟೀಂನಿಂದ ಧರ್ಮ ಅವರು ನಾಮಿನೇಟ್‌ ಆದರು. ಬಳಿಕ ಗೌತಮಿ ಅವರ ಟೀಂ ನಿಂದ ತ್ರಿವಿಕ್ರಮ್‌ ಮತ್ತು ಅನುಷಾ ಅವರು ಒಮ್ಮತದ ನಿರ್ಧಾರದ ಮೇಲೆ ಮೋಕ್ಷಿತಾ ಅವರನ್ನು ಸೇವ್‌ ಮಾಡಿದರು.

ಬಳಿಕ ಕೊನೆಯಲ್ಲಿ ದಾಳ ಉರುಳಿಸಿ ಉಗ್ರಂ ಮಂಜು, ಸುರೇಶ್‌, ಐಶ್ವರ್ಯಾ, ಶಿಶಿರ್‌ ಅವರು ಸೇಫ್‌ ಆದರು. ಆದರೆ ಕೊನೆಗೆ ಚೈತ್ರಾ, ಧರ್ಮ, ಅನುಷಾ, ಭವ್ಯಾ ಹಾಗೂ ತ್ರಿವಿಕ್ರಮ್‌ ಉಳಿದಿದು ನಾಮಿನೇಟ್ ಆಗಿದ್ದರು. ಬಳಿಕ ನಡೆದ ಮತ್ತೊಂದು ಟಾಸ್ಕ್​ನಲ್ಲಿ ಗೆದ್ದ ಗೌತಮಿ ಗ್ರೂಪ್​​​ ನಾಮಿನೇಷನ್​ನಿಂದ ಸೇಫ್ ಮಾಡುವ ಕಾರ್ಡ್ ಪಡೆದುಕೊಂಡಿತು. ಹೀಗಾಗಿ ಇಮ್ಯೂನಿಟಿ ಕಾರ್ಡ್ ಪ್ರಕಾರ ಅನುಷಾ ಅವರನ್ನು ನಾಮಿನೇಷ್​ನಿಂದ ಸೇಫ್ ಮಾಡಿದ್ದಾರೆ.

ಆ ಬಳಿಕ ಕ್ಯಾಪ್ಟನ್ ಹನುಮಂತ ಅವರಿಗೆ ಸೋತ ಎರಡು ಗುಂಪುಗಳಿಂದ ಒಟ್ಟು ಮೂರು ಮಂದಿಯನ್ನು ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದ್ದಾರೆ. ಇವರ ಆಯ್ಕೆ ಅನುಸಾರ ಧನರಾಜ್ ಆಚಾರ್​, ಗೋಲ್ಡ್​ ಸುರೇಶ್​ ಹಾಗೂ ಮೋಕ್ಷಿತಾ ಪೈ ಈ ವಾರ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್​ ಆಗಿದ್ದಾರೆ. ತನ್ನ ದೋಸ್ತ ಧನರಾಜ್ ಅವರನ್ನೇ ನಾಮಿನೇಟ್ ಮಾಡಿದ್ದು ಹಲವರಿಗೆ ಅಚ್ಚರಿ ಮೂಡಿಸಿದರೆ, ಇನ್ನೂ ಕೆಲವರು ಹನುಮಂತನ ನೇರ ನಡೆಗೆ ಫಿದಾ ಆಗಿದ್ದಾರೆ. ಧನರಾಜ್ ಟಾಸ್ಕ್​ನಲ್ಲಿ ಚೆನ್ನಾಗಿ ಆಡಿಲ್ಲ, ಈ ಕಾರಣಕ್ಕೆ ನಾಮಿನೇಟ್ ಮಾಡುತ್ತಿದ್ದೇನೆ ಎಂದು ಹನುಮಂತ ಕಾರಣ ನೀಡಿದರು.

BBK 11: ಟ್ರೋಲ್ ಮಾಡಿದವರಿಗೆ ಮುಟ್ಟಿನೋಡುವಂತಹ ಉತ್ತರ ಕೊಟ್ಟ ಮಾನಸಾ: ಏನು ಹೇಳಿದ್ರು?