Wednesday, 11th December 2024

ನಟಿ ಮಲೈಕಾ ಅರೋರಾ ಕಾರು ಅಪಘಾತ

ಮುಂಬೈ : ಬಾಲಿವುಡ್ ನಟಿ ಮಲೈಕಾ ಅರೋರಾ ಕಾರು ಅಪಘಾತವಾಗಿದ್ದು, ಅಪಘಾತದಲ್ಲಿ ನಟಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯ 38 ಕಿ.ಮೀ ಪಾಯಿಂಟ್ನಲ್ಲಿ ಅಪಘಾತ ಸಂಭವಿಸಿದೆ.

ಮೂರು ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಟಿ ಮಲೈಕಾಗೆ ಸಣ್ಣಪುಟ್ಟ ಗಾಯಗಳಾಗಿವೆ ಸದ್ಯ ನಟಿಯನ್ನು ಚಿಕಿತ್ಸೆಗಾಗಿ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ, ಎಲ್ಲಾ ಮೂರು ವಾಹನಗಳು ಹಾನಿಗೊಳಗಾಗಿವೆ. ಅಪಘಾತದ ನಂತರ ವಾಹನ ಚಾಲಕರು ಪರಾರಿಯಾಗಿದ್ದಾರೆ. ಅಪಘಾತದ ತನಿಖೆ ನಡೆಸಿ ಪ್ರಕರಣ ದಾಖಲಿಸಲಾಗುವುದು ಎಂದು ಖೋಪೋಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿರೀಶ್ ಪವಾರ್ ತಿಳಿಸಿದ್ದಾರೆ.