Friday, 13th December 2024

ವಿವೇಕ್ ಒಬೆರಾಯ್ ನಿವಾಸದತ್ತ ಸಿಸಿಬಿ ’ಕಣ್ಣು’

ಮುಂಬೈ: ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವಾರ ಬಂಧನಕ್ಕಾಗಿ ಸಿಸಿಬಿ ಪೊಲೀಸರು ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿವಾಸದ ತಪಾಸಣೆಗೆ ಮುಂದಾಗಿದ್ದಾರೆ.

ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆದಿತ್ಯ ಆಳ್ವಾ ಪ್ರಮುಖ ಆರೋಪಿಯಾಗಿದ್ದಾರೆ.

ಬಹಳಷ್ಟು ಮಂದಿ ಆರೋಪಿಗಳು ಆದಿತ್ಯ ಆಳ್ವಾ ಅವರ ಹೆಸರನ್ನು ಹೇಳಿದ್ದು, ಮಾದಕ ನಶೆಗೆ ಸಂಬಂಧ ಪಟ್ಟಂತೆ ಬಹಳಷ್ಟು ಪಾರ್ಟಿಗಳು ಆದಿತ್ಯ ಆಳ್ವಾ ಅವರ ಒಡೆತನಕ್ಕೆ ಸೇರಿದ ಹೌಸ್ ಆಫ್ ಲೈಫ್ ರೆಸಾರ್ಟ್‍ನಲ್ಲೇ ನಡೆದಿವೆ ಎಂದು ಹೇಳಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಪೈಕಿ ಆದಿತ್ಯ ಆಳ್ವಾ ಮತ್ತು ಶಿವಕುಮಾರ್ ಮೊದಲಿ ನಿಂದಲೂ ಪೊಲೀಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಹಠಕ್ಕೆ ಬಿದ್ದ ಸಿಸಿಬಿ ಪೊಲೀಸರು ನಾಪತ್ತೆಯಾಗಿರುವ ಆದಿತ್ಯ ಆಳ್ವಾ ಸಂಬಂಧಿಕರ ಮನೆಯಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಸಿಸಿಬಿ ಪೊಲೀಸರಿಗೆ ಸಿಕ್ಕಿದೆ.

ಆದಿತ್ಯ ಅವರು ತಮ್ಮ ಭಾವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆಯಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಆಧರಿಸಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ ನ್ಯಾಯಾಲಯದಿಂದ ಸರ್ಚ್‍ವಾರೆಂಟ್ ಪಡೆದು ಸಿಸಿಬಿ ಪೊಲೀಸರ ತಂಡ ಮುಂಬೈಗೆ ತೆರಳಿದೆ.