Thursday, 12th December 2024

BBK 11: ಸೂಪರ್ ಸಂಡೇ ಎಪಿಸೋಡ್​ನಲ್ಲಿ ಡ್ಯಾನ್ಸ್, ಡೈಲಾಗ್ ಮೂಲಕ ಅಬ್ಬರಿಸಿದ ಚೈತ್ರಾ ಕುಂದಾಪುರ

Chaithra Kundapura Dialog

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಹಿಂದಿನ ವಾರದ ವೀಕೆಂಡ್ ಎಪಿಸೋಡ್ ಸಖತ್ ಮಜಾ ನೀಡಿತ್ತು. ಶನಿವಾರ ಕಿಚ್ಚ ಸುದೀಪ್ ವಾರದಲ್ಲಿ ನಡೆದ ವಿಚಾರದ ಬಗ್ಗೆ ಕ್ಲಾಸ್ ತೆಗೆದುಕೊಂಡರೆ, ಭಾನುವಾರ ನಗುವಿನ ಜೊತೆ ಕೊಂಚ ಖಡಕ್ ಮಾತು ಕೂಡ ಇತ್ತು. ಅದರಲ್ಲೂ ಚೈತ್ರಾ ಕುಂದಾಪುರ ಡ್ಯಾನ್ಸ್, ಡೈಲಾಗ್ ಮೂಲಕ ಅಬ್ಬರಿಸಿದರು. ಇವರ ಡೈಲಾಗ್ ಕೇಳಿ ಸ್ವತಃ ಸುದೀಪ್ ಅವರೇ ಶಾಕ್ ಆದರು.

ಹೊರಗೆ ಮೈಕಿನ ಮುಂದೆ ಅಬ್ಬರಿಸುತ್ತಿದ್ದ ಚೈತ್ರಾ ಕುಂದಾಪುರ ಅವರ ಕೈಯಲ್ಲಿ ಸುದೀಪ್ ಅವರು ಸಿನಿಮಾ ಡೈಲಾಗ್ ಹೇಳಿಸಿದರು. ಅದು ಬೇರೆ ಯಾವದೋ ಡೈಲಾಕ್ ಅಲ್ಲ, ಸ್ವತಃ ಸುದೀಪ್ ನಟನೆಯ ಸಿನಿಮಾದ ಕೆಂಪೇಗೌಡ ಡೈಲಾಗ್. “ಸಿಂಹನಾ ಫೋಟೋದಲ್ಲಿ ನೋಡಿರ್ತಿಯಾ… ಟಿವಿಯಲ್ಲಿ ನೋಡಿರ್ತಿಯಾ.. ಸಿನಿಮಾದಲ್ಲಿ ನೋಡಿರ್ತಿಯಾ.. ಅಷ್ಟೇ ಏಕೆ, ಝೂನಲ್ಲೂ ನೋಡಿರ್ತಿಯಾ.. ಆದರೆ ಯಾವತ್ತಾದರೂ ರಾಜಗಾಂಭಿರ್ಯದಿಂದ ಕಾಡಲ್ಲಿ ನಡೆದಾಡಿರೋದನ್ನ ನೋಡಿದೆಯೇನೋ..” ಎಂದು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಇದನ್ನು ಕಂಡು ಸುದೀಪ್ ಕೂಡ ಖುಷಿಯಾಗಿ ಲವ್ಲೀ ಎಂದು ಹೇಳಿದ್ದಾರೆ.

ಕೇವಲ ಡೈಲಾಗ್ ಮಾತ್ರವಲ್ಲದೆ ಜೋಡಿ ಕಟ್ಟಿ ಒಂದು ಸಾಂಗ್ ಹಾಕುವೆ ನೃತ್ಯ ಮಾಡಬೇಕು ಎಂದು ಸುದೀಪ್ ಹೇಳಿದಾಗ ಇದಕ್ಕೂ ಸೈ ಎಂದಿದ್ದಾರೆ. ನೃತ್ಯಕ್ಕೆ ಸುದೀಪ್ ಅವರು ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಇಬ್ಬರನ್ನು ಜೋಡಿ ಮಾಡಿದ್ದಾರೆ. ಇಬ್ಬರು ನನ್ನ ನೀನು ಗೆಲ್ಲಲಾರೆ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಡ್ಯಾನ್ಸ್ ನೋಡಿದ ಸುದೀಪ್ ನಕ್ಕು ನಕ್ಕು ಸುಸ್ತಾಗಿದ್ದಾರೆ.

ಸ್ಪಷ್ಟನೆ ಕೊಟ್ಟ ಚೈತ್ರಾ ಕುಂದಾಫುರ:

ತನಗೆ ತಾನೇ ಪೂಜೆ ಮಾಡಿಕೊಂಡ ಬಗ್ಗೆ ಚೈತ್ರಾ ಕುಂದಾಪುರ ಸ್ಪಷ್ಟನೆ ನೀಡಿದ್ದಾರೆ. ನೀವು ಮಾಡಿದ್ದೇನು? ನಿಮಗೆ ನೀವೇ ಏಕೆ ಪೂಜೆ ಮಾಡಿಕೊಂಡಿರಿ ಎಂದು ಸುದೀಪ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ಕೊಟ್ಟ ಚೈತ್ರಾ, ‘‘ಇದನ್ನು ಓರಾ ಕ್ಲೆಂಜಿಂಗ್ ಎಂದು ಕರೆಯುತ್ತಾರಂತೆ. ಒಂದು ರೀತಿ ದೃಷ್ಟಿ ತೆಗೆಯುವ ಪದ್ಧತಿ ಅದು. ಮ್ಯಾನಿಫೆಸ್ಟೇಷನ್ ನಲ್ಲಿ ನಂಬಿಕೆ ಇಡುವವರು ಹೀಗೆ ತಮಗೆ ತಾವೇ ಪೂಜಾ ಮಾಡಿಕೊಂಡು ಓರಾ ಕ್ಲೆಂಜಿಂಗ್ ಮಾಡಿಕೊಳ್ಳುತ್ತಾರೆ. ಇದರಿಂದ ದೇಹದಲ್ಲಿರುವ, ನಮ್ಮ ಸುತ್ತ-ಮುತ್ತಲೂ ಇರುವ ನೆಗೆಟಿವ್ ಎನರ್ಜಿ ದೂರಾಗಿ ಪಾಸಿಟಿವಿಟಿ ಹತ್ತಿರವಾಗುತ್ತದೆ ಎಂಬುದು ನಂಬಿಕೆ ಇದೆ’’ ಎಂದು ಹೇಳಿದ್ದಾರೆ.

BBK 11: ತನಗೆ ತಾನೇ ಪೂಜೆ ಮಾಡಿಕೊಂಡ ಬಗ್ಗೆ ಸ್ಪಷ್ಟನೆ ಕೊಟ್ಟ ಚೈತ್ರಾ ಕುಂದಾಫುರ: ಏನಂದ್ರು?