Wednesday, 11th December 2024

BBK 11: ತನಗೆ ತಾನೇ ಪೂಜೆ ಮಾಡಿಕೊಂಡ ಬಗ್ಗೆ ಸ್ಪಷ್ಟನೆ ಕೊಟ್ಟ ಚೈತ್ರಾ ಕುಂದಾಪುರ: ಏನಂದ್ರು?

Chaithra Kundapura Pooja

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಚೈತ್ರಾ ಕುಂದಾಪುರ ದಿನ ಕಳೆದಂತೆ ಸಖತ್ ಹೈಲೈಟ್ ಆಗುತ್ತಿದ್ದಾರೆ. ಪ್ರತಿ ದಿನ ಒಂದಲ್ಲ ಒಂದು ವಿಚಾರಕ್ಕೆ ಇವರು ಸುದ್ದಿಯಲ್ಲಿ ಇರುತ್ತಾರೆ. ಕೆಲ ಸ್ಪರ್ಧಿಗಳ ಜೊತೆ ಮಾತ್ರ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತನ್ನ ನೇರ ಮಾತು ಮತ್ತು ವಾದಗಳಿಂದಲೇ ಫೇಮಸ್ ಆಗುತ್ತಿದ್ದಾರೆ. ಎದುರಾಳಿ ಇವರ ಜೊತೆ ಮಾತನಾಡಲೂ ಹೆದರುವಂತಾಗಿದೆ. ಇವುಗಳ ಮಧ್ಯೆ ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ವರ್ತನೆ ಕಂಡು ಕೆಲ ಸ್ಪರ್ಧಿಗಳು ಮತ್ತು ವೀಕ್ಷಕರು ಶಾಕ್ ಆಗಿದ್ದರು.

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ದೇವಿಯ ಪಕ್ಕದಲ್ಲಿ ನಿಂತು, ಕನ್ನಡಿ ನೋಡಿಕೊಂಡು, ಗಂಟೆ ಬಾರಿಸುತ್ತಾ, ತಮಗೆ ತಾವೇ ಊದುಬತ್ತಿ ಬೆಳಗಿಕೊಂಡು ಪೂಜೆ ಮಾಡಿಕೊಂಡಿದ್ದರು. ಮೊದಲು ಮನೆಯಲ್ಲಿರುವ ದೇವಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಚೈತ್ರಾ ನಂತರ ಅಲ್ಲೇ ಪಕ್ಕದಲ್ಲಿದ್ದ ಕನ್ನಡಿಯ ಬಳಿ ಬಂದು ತನಗೆ ತಾನೇ ಆರತಿ ಮಾಡಿಕೊಂಡಿದ್ದರು. ಇದನ್ನ ಕಂಡ ಎಲ್ಲರೂ ಶಾಕ್ ಆಗಿದ್ದರು.

ಚೈತ್ರಾ ಅವರು ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ಯಾಕೆ?, ಈ ರೀತಿ ಮಾಡುವುದರ ಹಿಂದೆ ಏನಾದರೂ ಒಳ್ಳೆಯ ಉದ್ದೇಶ ಇದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದಕ್ಕೆ ಸ್ವತಃ ಚೈತ್ರಾ ಅವರೇ ಉತ್ತರ ನೀಡಿದ್ದಾರೆ. ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸುದೀಪ್ ಅವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ನೀವು ಮಾಡಿದ್ದೇನು? ನಿಮಗೆ ನೀವೇ ಏಕೆ ಪೂಜೆ ಮಾಡಿಕೊಂಡಿರಿ ಎಂದು ಪ್ರಶ್ನೆ ಮಾಡಿದರು. ಚೈತ್ರಾ ಅವರ ಆ ಪೂಜೆಯ ಕುರಿತಾಗಿ ಹರಿದಾಡುತ್ತಿರುವ ಮೀಮ್​ಗಳನ್ನು ಸಹ ಮನೆಯ ಸದಸ್ಯರಿಗೆ ತೋರಿಸಿದರು.

‘‘ನಾನು ದೇವರ ಮುಂದೆ ನಿಂತು ನನಗೆ ನಾನೇ ಪೂಜೆ ಮಾಡಿಕೊಂಡಿರಲಿಲ್ಲ, ದೇವರ ವಿಗ್ರಹದ ಪಕ್ಕ ಕನ್ನಡಿಯೊಂದು ಇದ್ದು, ಕನ್ನಡಿ ಎದುರು ಗಂಟೆ ಭಾರಿಸುತ್ತಾ ಊದುಬತ್ತಿ ಬೆಳಗಿ ಪೂಜೆ ಮಾಡಿಕೊಂಡಿದ್ದೆ. ಇದನ್ನು ಓರಾ ಕ್ಲೆಂಜಿಂಗ್ ಎಂದು ಕರೆಯುತ್ತಾರಂತೆ. ಒಂದು ರೀತಿ ದೃಷ್ಟಿ ತೆಗೆಯುವ ಪದ್ಧತಿ ಅದು. ಮ್ಯಾನಿಫೆಸ್ಟೇಷನ್ ನಲ್ಲಿ ನಂಬಿಕೆ ಇಡುವವರು ಹೀಗೆ ತಮಗೆ ತಾವೇ ಪೂಜಾ ಮಾಡಿಕೊಂಡು ಓರಾ ಕ್ಲೆಂಜಿಂಗ್ ಮಾಡಿಕೊಳ್ಳುತ್ತಾರೆ. ಇದರಿಂದ ದೇಹದಲ್ಲಿರುವ, ನಮ್ಮ ಸುತ್ತ-ಮುತ್ತಲೂ ಇರುವ ನೆಗೆಟಿವ್ ಎನರ್ಜಿ ದೂರಾಗಿ ಪಾಸಿಟಿವಿಟಿ ಹತ್ತಿರವಾಗುತ್ತದೆ ಎಂಬುದು ನಂಬಿಕೆ ಇದೆ’’ ಎಂದು ಹೇಳಿದ್ದಾರೆ.

BBK 11: ಎಲಿಮಿನೇಟ್ ಆದ ಭವ್ಯಾ ಪುನಃ ಬಿಗ್ ಬಾಸ್ ಮನೆಯೊಳಗೆ ಬರಲು ಕಾರಣವೇನು?