Sunday, 1st December 2024

BBK 11: ಬಿಗ್ ಬಾಸ್ ಮನೆಯಲ್ಲಿ ಕೊರಗಜ್ಜನ ಪವಾಡ: ಚೈತ್ರಾಗೆ ಸಿಕ್ಕಿತು ಕಳೆದುಕೊಂಡಿದ್ದ ಉಂಗುರ

Chaithra Kundapura and Koragajja

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಟಾಸ್ಕ್​ನ ಕಾವು ಏರುತ್ತಿದೆ. ಸದ್ಯಕ್ಕೆ ಸ್ಪರ್ಧಿಗಳನ್ನು ಜೋಡಿಯಾಗಿ ವಿಂಗಡನೆ ಮಾಡಲಾಗಿದ್ದು, ಒಂದೊಂದೆ ಟಾಸ್ಕ್ ನೀಡಲಾಗುತ್ತದೆ. ನಿನ್ನೆ (ಬುಧವಾರ) ಬಿಗ್ ಬಾಸ್ ಜೋಡಿಗಳಿಗೆ ತಮಗೆ ಮೀಸಲಿರುವ ಕೆಸರನ್ನ ಕಾಪಾಡಿಕೊಳ್ಳುವ ಹಾಗೂ ಇತರೆ ಜೋಡಿಗಳ ಕೆಸರನ್ನು ಹಾಳು ಮಾಡುವ ಚಟುವಟಿಕೆಯನ್ನು ನೀಡಿದ್ದರು. ಈ ಟಾಸ್ಕ್ ಮಧ್ಯೆ ಚೈತ್ರಾ ಕುಂದಾಪುರ ಹಾಗೂ ಶಿಶಿರ್ ಶಾಸ್ತ್ರೀ ಜೋಡಿ ಆಡುವಾಗ ಚೈತ್ರಾ ಅವರು ತಮ್ಮ ಕೈಯಲ್ಲಿದ್ದ ಉಂಗುರ ಕಳೆದುಕೊಂಡಿದ್ದಾರೆ.

ಸ್ಪರ್ಧಿಗಳು ತಮಗೆ ಕೊಟ್ಟ ಜಾಗದಲ್ಲಿ ಮಣ್ಣನ್ನು ಸರಿಯಾಗಿ ಜೋಡಿಸಿ ಆ ಮಣ್ಣನ್ನು ಅಥವಾ ಮಣ್ಣಿನಿಂದ ಮಾಡಿದ ಅಕ್ಷರವನ್ನು ಯಾರೂ ಹಾಳು ಮಾಡದಂತೆ ನೋಡಿಕೊಳ್ಳುವುದು ಆಟದ ನಿಯಮವಾಗಿರುತ್ತದೆ. ಈ ಆಟ ಆಡುವ ಸಂದರ್ಭ ಮಣ್ಣಿನಲ್ಲಿ ಚೈತ್ರಾ ಅವರ ಉಂಗುರವು ಮಿಸ್‌ ಆಗಿದೆ. ಅವರ ಹುಡುಗ ಕೊಟ್ಟಿದ್ದಾರೆ ಎಂದು ಉಂಗುರ ಕಾಣೆಯಾದಾಗ ಹುಡುಕುತ್ತಿದ್ದ ಯಾವುದೋ ಸ್ಪರ್ಧಿ ಈ ಮಾತನ್ನು ಹೇಳುತ್ತಿರುವುದು ಕೇಳಿಸಿದೆ. ಉಂಗುರ ಮಿಸ್ ಆಗಿದೆ ಎಂಬುದು ಗೊತ್ತಾದ ತಕ್ಷಣ ಅವರು ಸಿಕ್ಕಾಪಟ್ಟೆ ಚಡಪಡಿಸಿದರು.

ಮನೆಯವರೆಲ್ಲ ಎಷ್ಟೇ ಹುಡುಕಿದರೂ ಉಂಗುರ ಸಿಗಲಿಲ್ಲ. ಹೀಗಾಗಿ ಚೈತ್ರಾ ಕ್ಯಾಮೆರಾ ಮುಂದೆ ಬಂದು ತುಂಬಾ ಇಂಪಾರ್ಟೆಂಟ್ ಉಂಗುರು ದಯವಿಟ್ಟು ಹುಡುಕಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಟಾಸ್ಕ್‌ ಬಳಿಕ ಬಿಗ್‌ ಬಾಸ್‌ ಉಂಗುರವನ್ನು ಹುಡುಕಿ ಕೊಟ್ಟರು. ಆಗ ಚೈತ್ರಾ ಸ್ವಾಮಿ ಕೊರಗಜ್ಜ ಎಂದು ಕೈಮುಗಿದರು. ತುಳುನಾಡಿನಲ್ಲಿ ಕೊರಗಜ್ಜ ದೈವ ಒಂದು ಕಾರ್ಣಿಕ ಶಕ್ತಿ. ಕಷ್ಟದ ಕಾಲದಲ್ಲಿ ಕೈ ಹಿಡಿದು ನಡೆಸುತ್ತಾನೆ ಎಂಬ ನಂಬಿಕೆ ದೈವಾರಾಧಕರದ್ದು, ಇಲ್ಲಿ ಚೈತ್ರಾ ಕೊರಗಜ್ಜನ ಪ್ರಾರ್ಥನೆ ಮಾಡಿದರು. ಬಳಿಕ ಉಂಗುರ ಸಿಕ್ಕಿದೆ.

ಶಿಶಿರ್-ಚೈತ್ರಾ ಜೋಡಿ ನಡುವೆ ಜಗಳ:

ನೀವು ನಿಮ್ಮ ಜೋಡಿ ಸದಸ್ಯನನ್ನ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸುತ್ತೀರಾ? ಎಂದು ಕೆಲವರಿಗೆ ಬಿಗ್ ಬಾಸ್‌ ಆಫರ್ ಕೊಟ್ಟಿದ್ದಾರೆ. ಈ ಆಫರ್‌ನ ಚೈತ್ರಾ ಕುಂದಾಪುರ ಒಪ್ಪಿಕೊಂಡುಬಿಟ್ಟಿದ್ದಾರೆ. ಚೈತ್ರಾ ನಿರ್ಧಾರ ಕೇಳಿ ಶಿಶಿರ್ ಶಾಕ್ ಆಗಿದ್ದಾರೆ. ಚೈತ್ರಾ ಮೇಲೆ ಕೆಂಡಾಮಂಡಲರಾಗಿದ್ದಾರೆ. ಕೂಗಾಡಿ ರಂಪಾಟ ಮಾಡಿದ್ದಾರೆ. ನೀವು ಮಾಡಿದ್ದು ಎಷ್ಟು ಸರಿ ಎಂದು ಚೈತ್ರಾರನ್ನು ಪ್ರಶ್ನೆ ಮಾಡಿದ್ದಾರೆ.

BBK 11: ಹೆಣ್ಣುಮಕ್ಕಳಿಗೂ ಪ್ರೈವೇಟ್ ಪಾರ್ಟ್ ಇರುತ್ತೆ: ಗೋಲ್ಡ್ ಸುರೇಶ್​​ರ ಮೈಚಳಿ ಬಿಡಿಸಿದ ಗೌತಮಿ