Saturday, 14th December 2024

ನಟಿ ಆಲಿಯಾ ಭಟ್’ಗೆ ಕೊರೊನಾ ಸೋಂಕು ದೃಢ

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತ: ಆಲಿಯಾ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿರುವ ಆಲಿಯಾ, ತಮಗೆ ಕೊರೊನಾ ಪಾಸಿಟಿವ್ ಬಂದಿದ್ದು, ವೈದ್ಯರ ಸಲಹೆ ಮೇರೆಗೆ ಹೋಮ್ ಐಸೋಲೇಷನ್ ನಲ್ಲಿದ್ದೇನೆ. ಕೊರೊನಾ ಕುರಿತು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಾಗಿ ತಿಳಿಸಿ ದ್ದಾರೆ.

 

ನನ್ನ ಸಂಪರ್ಕದಲ್ಲಿರುವ ಎಲ್ಲರೂ ತಕ್ಷಣ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಆಲಿಯಾ ಮನವಿ ಮಾಡಿದ್ದಾರೆ.