Wednesday, 9th October 2024

ತೆಲುಗಿನ ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್‌ಗೆ ಕರೋನಾ ಸೋಂಕು

ಹೈದರಾಬಾದ್​: ಬಾಲಿವುಡ್​, ಸ್ಯಾಂಡಲ್​ವುಡ್​ ದಿಗ್ಗಜರನ್ನೂ ಕಾಡಿರುವ ಮಹಾಮಾರಿ ಕರೊನಾ ಸೋಂಕು, ಇದೀಗ ಟಾಲಿವುಡ್ ನಟ ಅಲ್ಲು ಅರ್ಜುನ್​ಗೂ ತಗುಲಿದೆ. ಸ್ವತಃ ಅಲ್ಲು ಅರ್ಜುನ್​ ಅವರೇ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿ ದ್ದಾರೆ.

‘ನನಗೆ ಕರೋನಾ ಪಾಸಿಟಿವ್ ಬಂದಿದೆ. ಹೋಂ ಐಸೋಲೇಷನ್​ಗೆ ಒಳಗಾಗಿದ್ದೇನೆ. ಇತ್ತೀಚಿಗೆ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ದಯವಿಟ್ಟು ಕರೊನಾ ಟೆಸ್ಟ್​ ಮಾಡಿಸಿಕೊಳ್ಳಿ. ನಾನು ಆರೋಗ್ಯವಾಗಿದ್ದೇನೆ, ಯಾರೊಬ್ಬರು ನನ್ನ ಬಗ್ಗೆ ಚಿಂತಿಸದಿರಿ’ ಎಂದು ಅಭಿಮಾನಿಗಳಿಗೆ ಅಲ್ಲು ಅರ್ಜುನ್​ ಮನವಿ ಮಾಡಿದ್ದಾರೆ.