Monday, 14th October 2024

ಪ್ರೇಮಿಗಳ ದಿನ ಹಸೆಮಣೆ ಏರಲಿರುವ ಡಾರ್ಲಿಂಗ್‌ ಕೃಷ್ಠ – ಮಿಲನಾ ನಾಗರಾಜ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡಾರ್ಲಿಂಗ್‌ ಕೃಷ್ಠ ಎಂದೇ ಖ್ಯಾತರಾಗಿರುವ ನಟ ಮದರಂಗಿ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಅವರ ವಿವಾಹ ಭಾನುವಾರ ನಗರದ ಹೊರವಲಯದಲ್ಲಿರುವ ರೆಸಾರ್ಟ್‌ವೊಂದರಲ್ಲಿ ನಡೆಯಲಿದೆ. ಪ್ರೇಮಿಗಳ ದಿನದಂದೇ ಹಸೆಮಣೆ ಏರುತ್ತಿದ್ದಾರೆ.

ಜೋಡಿಯ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದ ಫೋಟೋಗಳನ್ನು ಅಭಿಮಾನಿಗಳಿಗಾಗಿ ಈ ಜೋಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕೃಷ್ಣ-ಮಿಲನಾ ಮದುವೆ ದಿನ ಅಂದರೆ ಇಂದು ಅವರ “ಲವ್‌ ಮಾಕ್ಟೇಲ್‌-2′ ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದೆ.

ಸದ್ಯ ಕೃಷ್ಣ “ಲವ್‌ ಮಾಕ್ಟೇಲ್‌-2′ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಇಬ್ಬರ ನಟನೆಯ ಲವ್‌-ಮಾಕ್ಟೇಲ್‌ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.