Monday, 14th October 2024

ಸತಿಪತಿಗಳಾದ ತಾರಾ ಜೋಡಿ ಡಾರ್ಲಿಂಗ್‌ ಕೃಷ್ಣ-ಮಿಲನಾ ನಾಗರಾಜ್

ಬೆಂಗಳೂರು: ಚಿತ್ರನಟರಾದ ಕೃಷ್ಣ ಮತ್ತು ಮಿಲನಾ ಅವರು ಭಾನುವಾರ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‍ಫುಲ್ ಮಂಟಪದಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆದಿದೆ.

ಮದುವೆಗೆ ಚಿತ್ರರಂಗದ ಗಣ್ಯರು ಹಾಗೂ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲ ಬಾರಿ ನಟಿಸಿದ ತಾರಾ ಜೋಡಿ, ಬಳಿಕ ‘ಚಾರ್ಲಿ’ ಚಿತ್ರದಲ್ಲಿ ನಟಿಸಿದ್ದರು. ಕ್ರಮೇಣ ಇಬ್ಬರೂ, ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಜತೆಯಾಗಿ ನಟಿಸುವುದಲ್ಲದೆ, ಆ ಚಿತ್ರದ ಬರವಣಿಗೆ ಮತ್ತು ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು.